Monday, January 20, 2025
ಸುದ್ದಿ

ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕರ ಕಾರ್ಡ್ ವಿತರಣೆ : ಟ್ರಸ್ಟ್ ಮೂಲಕ ಬಡಜನರ ಸೇವೆ ನಿರಂತರ: ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು: ಬಡ ಜನರ ಸೇವೆಗೆಂದು ಕಳೆದ 11 ವರ್ಷಗಳಿಂದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ರಚನೆ ಮಾಡಲಾಗಿದ್ದು ಮುಂದೆಯೂ ಟ್ರಸ್ಟ್ ನ ಸಮಾಜ ಸೇವೆ ಮುಂದುವರೆಯುತ್ತದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶಾಸಕ ಅಶೋಕ್ ರೈ ಹೇಳಿದರು.

ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಮಿಕರ ಕಾರ್ಡ್ ವಿತರಿಸಿ ಮಾತನಾಡಿದ ಅವರು , ಒಟ್ಟು 5400 ಕಾರ್ಮಿಕ ಕಾರ್ಡುಗಳನ್ನು ತರಿಸಲಾಗಿದೆ. ಕಾರ್ಮಿಕರ ಕಾರ್ಡು ನೀಡುವ ಮೂಲಕ ಬಡವರ ಬದುಕಿನಲ್ಲಿ ಭರವಸೆ ಮೂಡಿಸುವ ಕೆಲಸ ಟ್ರಸ್ಟಿನಿಂದ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಸೇವೆಗಳು ಟ್ರಸ್ಟ್ ವತಿಯಿಂದ ನಡೆಯಲಿದ್ದು ಜನರ ಸಹಕಾರವನ್ನು ಬಯಸುವುದಾಗಿ ಹೇಳಿದರು. ವೇದಿಕೆಯಲ್ಲಿ ಟ್ರಸ್ಟ್ ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ನಿಹಾಲ್ ಶೆಟ್ಟಿ ಕಲ್ಲಾರೆ, ಉಪಸ್ಥಿತರಿದ್ದರು. ರಚನಾ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.