ಮಂಜೇಶ್ವರ: ವಾಟ್ಸಾಪ್ ಫೇಸ್‌ಬುಕ್‌ಗಳು ಸಾಹಿತ್ಯ ಸಂವಹನಕ್ಕೆ ವೇದಿಕೆಯಾಗಿ ಬರಹಗಳ ಸಾಗರವಾಗಿದೆ. ಸಮೂಹ ಮಾಧ್ಯಮಗಳಿಂದಾಗಿ ಸಾಹಿತ್ಯದಲ್ಲಿ ಯುವ ಜನತೆಗೆ ಆಸಕ್ತಿ ಹೆಚ್ಚಾಗಿದೆ. ಇದು ಉತ್ತಮ ಬೆಳವಣೆಗೆಯಾಗಿದೆ, ಎಂದು ಗಡಿನಾಡ ಚುಟುಕು ಸಾಹಿತಿ, ಮಂಜೇಶ್ವರ ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ನುಡಿದರು.
ಅವರು ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ವತಿಯಿಂದ ನಡೆದ ವೈವಿದ್ಯ ಕಾವ್ಯ ವೈಭವ ಹೆಸರಾಂತ ಕವಿಗಳ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕವಿ ತಾನು ಕಟ್ಟಿದ ಕವಿತೆಯು ಓದುಗನ ಮನ ಮುಟ್ಟುವಂತೆ ಇರಬೇಕು. ಆಗಲೇ ಅವನ ಕವಿತೆಗೆ ಮತ್ತು ಅವನಿಗೆ ಮಾನ್ಯತೆ ಲಭಿಸುವುದು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರದ ಆಡಳಿತಾ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಆಚಾರ್ಯ ಪ್ರತಾಪನಗರ ಮಾತನಾಡಿ ಸಾಹಿತ್ಯದ ಮೂಲಕ ಸಮಾಜವನ್ನು ಜಾಗೃತವಾಗಿರಿಸುವ ಕಾರ್ಯ ಶ್ಲಾಘನೀಯ. ವಿಶ್ವಕರ್ಮ ಸಮಾಜದಿಂದಲೂ ಸಾಹಿತ್ಯದ ಪ್ರತಿಭೆಗಳು ಬೆಳಗಿ ಬರುತ್ತಿರುವುದು ಭವಿಷ್ಯಕ್ಕೆ ಉತ್ತಮ ಲಕ್ಷಣವೆಂದು ಅವರು ಹೇಳಿದರು.
ವೇದಿಕೆಯಲ್ಲಿ ಕ್ಷೇತ್ರದ ಮಹಿಳಾ ಸಂಘದ ಉಪಾಧ್ಯಕ್ಷೆ ಭಾನುಮತಿ ಅನಂತ ಆಚಾರ್ಯ ಮಠದ ಬಳಿ, ಓಜ ಸಾಹಿತ್ಯ ಕೂಟದ ಚಂದ್ರ ಮೋಹನ ಆಚಾರ್ಯ ಕಟ್ಟೆಬಜಾರ್, ಚಂದ್ರಶೇಖರ ಆಚಾರ್ಯ ಐಲ, ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡಿನ ಸಂಸ್ಥಾಪಕ ಜಯ ಮಣಿಯಂಪಾರೆ ಉಪಸ್ಥಿತರಿದ್ದು, ಶುಭಾಶಂಸನೆಗೈದರು.
ಬಳಿಕ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಗುಣಾಜೆ ರಾಮಚಂದ್ರ ಭಟ್, ನಾರಾಯಣ ಕುಂಬ್ರ, ಉದಯರವಿ ಕೆಂಬ್ರಾಜೆ, ತೇಜಸ್ವಿನಿ ಕಡೆಂಗೋಡಿ , ವಿರಾಜ್ ಅಡೂರು, ವಿಶಾಲಾಕ್ಷಿ. ವಿ, ಕಣ್ವತೀರ್ಥ , ರಿತೇಶ್ ಕಿರಣ್ ಕಾಟುಕುಕ್ಕೆ , ದಯಾನಂದ ರೈ ಕಲ್ಪಾಜೆ, ಶ್ರೀಧರ ನಾಯ್ಕ್ ಕುಕ್ಕಿಲ, ಸುಕುಮಾರ್ ಬೆಟ್ಟಂಪಾಡಿ, , ಸುಶೀಲ. ಕೆ ಪದ್ಯಾಣ, ಜೋತ್ಸಾ್ನ ಕಡಂದೇಲು, ಶ್ವೇತಾ ಕಜೆ, ಚೇತನಾ ಕುಂಬಳೆ, ಶ್ಯಾಮಲಾ ರವಿರಾಜ್ ಕುಂಬಳೆ, ಮಣಿರಾಜ್ ವಾಂತಿಚ್ಚಾಲ್, ಡಾ| ನರೇಶ್ ನೆಳಗುಳಿ, ಅಕ್ಷಿತಾ ಮಾಯಿಪ್ಪಾಡಿ, ರಶ್ಮಿತಾ ಆಚಾರ್ಯ ಹೊಸಂಗಡಿ, ನಯನ ಕೋಟೆಕಾರ್, ಮೌನೇಶ್ ಆಚಾರ್ಯ ಕಡಂಬಾರ್, ಅಶೋಕ ಆಚಾರ್ಯ ಉದ್ಯಾವರ, ರೇಣುಕಾ ಹರೀಶ್ ಆಚಾರ್ಯ ಉಪ್ಪಳ, ವೀಕ್ಷಿತಾ ಹೊಸಂಗಡಿ, ಲೇಖನ ಐಲ, ಆದ್ಯಂತ್ ಅಡೂರು, ಅಭಿಲಾಷ್ ಪೆರ್ಲ ಮೊದಲಾದವರು ತಾವು ರಚಿಸಿದ ಕವಿತೆಯನ್ನು ವಾಚಿಸಿ, ಪ್ರಶಂಸೆಗೊಳಪಟ್ಟರು. ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡಿನ ಸದಸ್ಯರಾದ:- ಕಾಂಚನ ಕೋಟೆಕಾರ್ ಸ್ವಾಗತಿಸಿ, ವಿನೋದ್ ಆಚಾರ್ಯ ಪುತ್ತೂರು ಕಾರ್ಯಕ್ರಮ ನಿರೂಪಿಸಿ, ರಶ್ಮಿತಾ ಆಚಾರ್ಯ ಹೊಸಂಗಡಿ ವಂದಿಸಿದರು.