ಮಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಾಜೆ ಗ್ರಾಮದಲ್ಲಿ ನರೇಗಾ ಸಾಮಾಜಿಕ ಪರಿಶೋಧನೆ ಅರಿವು ಆಂದೋಲನ- ಕಹಳೆ ನ್ಯೂಸ್
ಬಂಟ್ವಾಳ : ಮಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಾಜೆ ಗ್ರಾಮದಲ್ಲಿ ಸಾಮಾಜಿಕ ಪರಿಶೋಧನೆ ತಂಡದಿಂದ ಗ್ರಾಮದ ಕೂಲಿ ಕಾರ್ಮಿಕರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೂಲಿ ಕೇಳುವ ಅಭಿಯಾನ ಮತ್ತು ಸಾಮಾಜಿಕ ಪರಿಶೋಧನೆ ಕುರಿತು ಅರಿವು ಆಂದೋಲನ ಕಾರ್ಯಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸೂರ್ಯಕಾಂತ್ ಎಕಲಾರ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಸಾಮಾಜಿಕ ಪರಿಶೋಧನೆ ಬೆಳ್ತಂಗಡಿ ಇವರು ಯೋಜನೆ ಅಡಿಯಲ್ಲಿ ಕ್ರಿಯಾ ಯೋಜನೆ ತಯಾರಿಕೆ, ಯೋಜನೆ ಅಡಿಯಲ್ಲಿ ಕೂಲಿಕಾರ್ಮಿಕರ ನೊಂದಾವಣಿ ಪ್ರಕ್ರಿಯೆ, ಕೆಲಸಕ್ಕಾಗಿ ಬೇಡಿಕೆ ಸಲ್ಲಿಕೆ, ಕಾಮಗಾರಿ ಸ್ಥಳದಲ್ಲಿನ ಸೌಲಭ್ಯಗಳ ಬಗ್ಗೆ, ನೊಂದಾಯಿತ ಕೂಲಿಕಾರ್ಮಿಕರ ಹಕ್ಕು ಮತ್ತು ಬಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ಬೆಂಗಳೂರು ಮತ್ತು ಜಿಲ್ಲಾ ಪಂಚಾಯತ ದಕ್ಷಿಣ ಕನ್ನಡ ಇವರ ಆದೇಶ ದಂತೆ ದಿನಾಂಕ 24/11/2023 ರಿಂದ 02/12/2023ರ ವರೆಗೆ ಸಾಮಾಜಿಕ ಪರಿಶೋಧನೆ ನಡೆಯಲಿದ್ದು. 2023-24ನೇ ಸಾಲಿನ (01/04/2022 ರಿಂದ 31/03/2023ರ ವರೆಗೆ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ)ನೇ ಸಾಲಿನ ಸಾಮಾಜಿಕ ಪರಿಶೋಧನೆ ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೈಗೊಳ್ಳಲಾಗುತ್ತಿದ್ದು ಸಾಮಾಜಿಕ ಪರಿಶೋಧನೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ಸ್ವಯಂ ಪ್ರೇರಿತರಾಗಿ ಒಳಗೊಳ್ಳಬೇಕಾಗಿದೆ ಎಂದು ತಿಳಿಸಿದರು. ನಂತರ ದಿನಾಂಕ 002/12/2023 ರಂದು ಮಂಚಿ ಗ್ರಾಮ ಪಂಚಾಯತ್ ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ಪಂಚಾಯಿತಿ ಯಿಂದ ಆಯೋಜಿಸಲಾಗಿದ್ದು ಎಲ್ಲರು ಭಾಗಿಯಾಗಲು ಕೋರಿದರು.
ಇದೆ ಸಂದರ್ಭದಲ್ಲಿ ಐ ಇ ಸಿ ತಾಲೂಕು ಕೋ ಆಡಿನೆಟರ್ ರಾಜೇಶ್ ಜನರಿಗೆ ನರೇಗಾ ಮತ್ತು 15 ಹಣಕಾಸು ಬಗ್ಗೆ ಮಾಹಿತಿ ಸಂವಹನ ಶಿಕ್ಷಣದ ಬಗ್ಗೆ ಮಾಹಿತಿ ನೀಡುತ್ತಾ ಫಲಾನುಭವಿಗಳು ಯಾವ ಯಾವ ಕಾಮಗಾರಿಗಳು ಮಾಡಿಕೊಳ್ಳಬಹುದೆಂದು ಮಾಹಿತಿ ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಾಜಶ್ರೀ. ಅಕ್ಷತಾ. ಪವಿತ್ರ. ಸ್ವಾತಿ. ಉμÁ. ಪ್ರವೀಕ್ಷ. ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರು.ಜಿ. ಎಮ್. ಇಬ್ರಾಹಿಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿನಿರ್ಮಲ. ಲೆಕ್ಕ ಸಹಾಯಕರು ನವೀನ್ ರಾಬರ್ಟ್. ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು.