Sunday, January 19, 2025
ಸುದ್ದಿ

ಸೈನ್ಯ ಸೇರಲು ಬಂದವರಿಗೆ ವಸತಿ ಕಲ್ಪಸಿದ್ರು ಸೇವಾ ಭಾರತಿ ಮತ್ತು ಶ್ರೀಬಸವರಾಜ್ ದಿಗ್ಗಾವಿ ತಂಡದವರು, ಫೋಸ್ ಕೊಟ್ರು ಫೇಕ್ ಬ್ರಿಗೇಡ್ ಗಳು.

ಕಲಬುರ್ಗಿ : ಸೈನ್ಯಕ್ಕೆ ಸೇರಲೆಂದು ಬಂದು ರಸ್ತೆಯಲ್ಲಿ ಮಲಗ ಬೇಕಾದ ಪರಿಸ್ಥಿತಿಯಲ್ಲಿದ್ದ ಯುವಕರಿಗೆ ಸೂಕ್ತ ವಸತಿಯನ್ನು ಸೇವಾ ಭಾರತಿ ಮತ್ತು ಸ್ಥಳೀಯ ಕೆಲ ಸಂಘಟನೆಗಳು ಒದಗಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಹೌದು ಹೀಗೊಂದು ಸುದ್ದಿ ಬಂದಿರೋದು ಕಲಬುರ್ಗಿಯಿಂದ, ಕಲಬುರ್ಗಿಯ ಚಂದ್ರಶೇಕರ್ ಪಾಟೀಲ್ ಮೈದಾನದಲ್ಲಿ ಸೇನಾಭಾರತಿ ಆಯ್ಕೆಗೆಂದು ವಿವಿಧ ಊರುಗಳಿಂದ ಸಾವಿರಾರು ಮಂದಿ ತರುಣರು ಬಂದಿದ್ದರು. ಅವರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲದೆ, ರಸ್ತೆಯ ಬದಿಯಲ್ಲೇ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನರಿತ ಸ್ಥಳೀಯ ತರುಣರು ಸೇವಾ ಭಾರತಿ ತಂಡದ ಹಿರಿಯರೊಂದಿಗೆ ಸೇರಿ ಜೈನ ಟ್ರಸ್ಟಿನ ಸಹಕಾರದೊಂದಿಗೆ ಬಂಜಾರ ಸಭಾಭವನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲದೇ, ಮಧ್ಯಾಹ್ನದ ಊಟ ಸೇವಾ ಭಾರತಿಯ ಕಡೆಯಿಂದ ಹಾಗೂ ಜೈನ ಟ್ರಸ್ಟಿನವರು ಅವರ ಬಂಜಾರ ಸಭಾಭವನದಲ್ಲೇ ವಸತಿ ಕಲ್ಪಿಸಿದ್ದರು. ಆದರೆ, ಸಾವಿರಾರು ಮಂದಿ ಇದ್ದದ್ದರಿಂದ ನೀರು, ಸೌಚಾಲಯದ ವ್ಯವಸ್ಥೆ ಸರಿಯಾಗದ್ದನ್ನು ಅರಿತ ಶ್ರೀಗುರು ವಿದ್ಯಾಪೀಠದ ಶ್ರೀ ಬಸರಾಜ ದಿಗ್ಗಾವಿಯವರು ತಮ್ಮ ದಿಗ್ಗಾವಿ ಟ್ರಸ್ಟಿನ ವತಿಯಿಂದ ಸಂಸ್ಥೆಯಲ್ಲಿ ಬಂದ ಎಲ್ಲರಿಗೂ ರಾತ್ರಿ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿದ್ದರು. ಅಲ್ಲದೇ, ಶಾಲಾ ವಾಹನಗಳ ಮೂಲಕ ಸೈನ್ಯ ಭಾರತಿ ಸ್ಥಳದಿಂದಲೇ ಹೋಗಿ ಯುವಕರನ್ನು ಕರೆತರುವ ಕೆಲಸವು ನಡೆದಿತ್ತು. ಈ ಮೊದಲೂ ಸಹ ದಿಗ್ಗಾವಿಯವರು ಇಂತಹ ಸೇವಾ ಕಾರ್ಯಗಳನ್ನು ಯಾವುದೇ ಪ್ರಚಾರದ ಆಸೆ ಇಲ್ಲದೆ ಮಾಡುತ್ತಾ ಬರುತ್ತಿದ್ದರು. ಇದು ಶ್ಲಾಗನೀಯ ವಿಷಯ.

ಮಾಡಿದವರು ಯಾರೋ ಕ್ರೆಡಿಟ್ ಯಾರಿಗೋ

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಅದುವೇ ಸಮಾಜಿಕ ಜಾಲಾತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿರುವ ವಿಷಯ. ಇಷ್ಟೆಲ್ಲಾ ದಿಗ್ಗಾವಿ ಟ್ರಸ್ಟ್ ಮತ್ತು ಸೇವಾ ಭಾರತಿ, ಜೈನ ಟ್ರಸ್ಟ್ ಸೇನೆಗೆ ಸೇರಲು ಬಂದವರಿಗೆ ಸೌಕರ್ಯ ಕಲ್ಪಿಸಿಕೊಟ್ಟರೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್ ಎಂಬ ಸಂಘಟನೆ ನಾವೇ ಮಾಡಿದ್ದು ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಂಡು ಫೋಸ್ ಕೊಡ್ತಾ ಇರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಟ್ಟಿನಲ್ಲಿ ಹೇಳಬೇಕಾದರೆ, ಇಂತಹವರ ಕೀಳು ಪ್ರಚಾರದ ಆಸೆಗೆ ಸೈನ್ಯದ ಹೆಸರು ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಮತ್ತು ಯಾರೋ ಮಾಡಿದ ಕೆಲಸವನ್ನು ನಾವೇ ಮಾಡಿದ್ದೇವೆ ಎಂದು ಫೋಸ್ ಕೊಡೊದು ಸರಿನಾ ಎಂಬುದು ಕಲಬುರ್ಗಿ ಜನತೆಯಲ್ಲಿ ಕಾಡುತ್ತಿರುವ ಪ್ರಶ್ನೆ?

ಜಾಹೀರಾತು
ಜಾಹೀರಾತು
ಜಾಹೀರಾತು

ಮೆಲುಕು : ಈ ಹಿಂದೆ ಇದೇ ಯುವಾ ಬ್ರಿಗೇಡ್ ಮಾರ್ಗದರ್ಶಕರಲ್ಲಿ ಒಬ್ಬರಾದ ನರೇಶ್ ಶೆಣೈ ಬಾಳಿಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಸದ್ಯ ಜಾಮೀನಿನ ಮೇಲೆ ಹೋಗಿದ್ದಾರೆ.

Leave a Response