Saturday, January 25, 2025
ಸುದ್ದಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣ ಹಾಗೂ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಬಂಟ್ಸ್ ಹಾಸ್ಟೆಲ್, ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಗಳಿಸಿರುತ್ತಾರೆ.


ಪ್ರೌಢ ಶಾಲಾ ವಿಭಾಗದಲ್ಲಿ ೮ನೇ ತರಗತಿಯ ಕುಮಾರಿ ಸುಪ್ರಜಾ ರಾವ್ ( ಉಪನ್ಯಾಸಕ ದಂಪತಿ ಶ್ರೀ ಪ್ರಶಾಂತ್ ರಾವ್ ಮತ್ತು ಶ್ರೀಮತಿ ಸುಮನಾ.ಕೆ ಇವರ ಪುತ್ರಿ) ಜನಪದ ಗೀತೆಯಲ್ಲಿ ದ್ವಿತೀಯ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ೭ನೇ ತರಗತಿಯ ನಾಗಾಭೂಷಣ ಕಿಣಿ(ಕೆಮ್ಮಾಯಿ ಶ್ರೀ ನಾಗರಾಜ್ ಕಿಣಿ ಮತ್ತು ನಮೃತ ಕಿಣಿ ದಂಪತಿ ಪುತ್ರ) ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ, ೭ನೇ ತರಗತಿಯ ಸಿರಿ ಹಿಳ್ಳೆಮನೆ (ಹಿಂಗಾರು, ಪಂಜಳ ಶ್ರೀ ಶಿವಕುಮಾರ ಹಿಳ್ಳೆಮನೆ ಮತ್ತು ಡಾ.ಸಹನಾ ಹಿಳ್ಳೆಮನೆ ದಂಪತಿ ಪುತ್ರಿ) ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ, ೭ನೇ ತರಗತಿಯ ಅವನಿ.ಎಸ್.ವಿ(ಸಂಪ್ಯ ಶ್ರೀ ವಿಘ್ನೇಶ್ವರ ಭಟ್.ಎಸ್ ಮತ್ತು ಶ್ರೀಮತಿ ಸುಪರ್ಣಾ.ಕೆ ದಂಪತಿ ಪುತ್ರಿ) ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು