Friday, January 24, 2025
ಸುದ್ದಿ

ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದ ಮಂಗಳೂರು ಅರಣ್ಯ ಇಲಾಖೆಯ ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ – ಕಹಳೆ ನ್ಯೂಸ್

ಮೂಡುಬಿದಿರೆ : ಅರಣ್ಯ ಇಲಾಖೆಯ ಮಂಗಳೂರು ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.
ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಉದ್ಘಾಟಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮೀಸಲಾತಿ ಇರುವುದು ಸ್ವಾಗತಾರ್ಹ. ಆದರೆ, ಇದರ ಪ್ರಮಾಣವನ್ನು ಏರಿಸಬೇಕಾಗಿದೆ ಎಂದು ಆಳ್ವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಕರಿಕಲನ್ ಅಧ್ಯಕ್ಷತೆ ವಹಿಸಿದ್ದರು.

ಭಾರತದ 2023ರ ಅತಿವೇಗದ ಓಟಗಾರ್ತಿ, ಮಂಗಳೂರು ಆದಾಯ ತೆರಿಗೆ ಅಧಿಕಾರಿ ಸ್ನೇಹಾ ಎಸ್.ಎಸ್. ಕ್ರೀಡಾ ಜ್ಯೋತಿ ಉದ್ಘಾಟಿಸಿದರು. ಉಲ್ಲಾಸ್ ಕ್ರೀಡಾ ಪ್ರತಿಜ್ಞೆ ಸ್ವೀಕರಿಸಿದರು. ಮೂಡುಬಿದಿರೆ ರೋಟರಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ. ಎಂ. ಮುಖ್ಯ ಅತಿಥಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧೀಕಾರಿ ಗಣಪತಿ, ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಉದಯ ನಾಯಕ್, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ವಿಭಾಗೀಯ ವ್ಯವಸ್ಥಾಪಕ ಉದಯ ಜೋಗಿ, ಕೂಟದ ಆರ್ಥಿಕ ಸಮಿತಿ ಅಧ್ಯಕ್ಷ ಕುಂದಾಪುರ ಉಪವಿಭಾಗ ಎಸಿಎಫ್ ಕ್ಲಿಫರ್ಡ್ ಲೋಬೋ, ಕ್ರೀಡಾ ಸಮಿತಿ ಆಧ್ಯಕ್ಷ, ಸುಬ್ರಹ್ಮಣ್ಯ ಎಸಿಎಫ್ ಪ್ರವೀಣ ಕುಮಾರ ಶೆಟ್ಟಿ, ಸಹಕಾರ, ಸಮನ್ವಯ ಸಮಿತಿ ಅಧ್ಯಕ್ಷ , ಪುತ್ತೂರು ಉಪವಿಭಾಗ ಎಸಿಎಫ್ ಸುಬ್ಬಯ್ಯ ನಾಯ್ಕ್, ಅಹಾರ ಸಮಿತಿ ಅಧ್ಯಕ್ಷ, ಸಿದ್ದಾಪುರ ವನ್ಯಜೀವಿ ಉಪವಿಭಾಗದ ಎಸಿಎಫ್ ಪ್ರಕಾಶ್ ಪೂಜಾರಿ, ಮಂಗಳೂರು ವೃತ್ತದ ವಲಯ ಅರಣ್ಯಾಧಿಕಾರಿಗಳು, ಸಿಬಂದಿವರ್ಗದವರು ಉಪಸ್ಥಿತರಿದ್ದರು.

ಹಲವು ವರ್ಷಗಳಿಂದ ಕೂಟಗಳಲ್ಲಿ ಭಾಗವಹಿಸುತ್ತಿರುವ ಸುಬ್ರಹ್ಮಣ್ಯ ಉಪವಿಭಾಗದ ಸ. ಅರಣ್ಯ ಸಂರಕ್ಷಣಾಧಿಕಾರಿ, ಕ್ರೀಡಾ ಸಮಿತಿ ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ಮತ್ತು ರಾಷ್ಟ್ರೀಯ ಕ್ರೀಡಾಳು ಸ್ನೇಹಾ ಎಸ್.ಎಸ್. ಅವರನ್ನು ಸಮ್ಮಾನಿಸಲಾಯಿತು. ಕೆಲವು ಆಟೋಟಗಳನ್ನು ವಿದ್ಯಾಗಿರಿಯಲ್ಲಿ ಯೂ ನಡೆಸಲಾಯಿತು.
ಮಂಗಳೂರು ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ ಸ್ವಾಗತಿಸಿದರು. ಸ್ವಾಗತ, ವಸತಿ ಸಮಿತಿ ಅಧ್ಯಕ್ಷ , ಮಂಗಳೂರು ಉಪವಿಭಾಗ ಎಸಿಎಫ್ ಶ್ರೀಧರ ಪಿ. ನಿರೂಪಿಸಿದರು. ವಸತಿ ಸಮಿತಿ ಅಧ್ಯಕ್ಷ, ಮೂಡುಬಿದಿರೆ ಉಪವಿಭಾಗದ ಎಸಿಫ್ ಸತೀಶ್ ಎನ್. ವಂದಿಸಿದರು.