Thursday, January 23, 2025
ಸುದ್ದಿ

ತೋಡಿನಲ್ಲಿ ತೇಲಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ಬಿಕ್ಷಾಟನೆ ನಡೆಸುತ್ತಿದ್ದ ಅಪರಿಚಿತ ವ್ಯಕ್ತಿಯ ಮೃತದೇಹ –ಕಹಳೆ ನ್ಯೂಸ್

ಬಂಟ್ವಾಳ : ಕಳೆದ 20 ವರ್ಷಗಳಿಂದ ಪಾಣೆಮಂಗಳೂರು ಪೇಟೆಯಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ತೋಡಿನಲ್ಲಿ ತೇಲಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನಡೆದಿದೆ.

ಬಿಕ್ಷಾಟನೆ ನಡೆಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಈತನ ವಾರಸುದಾರರ ಪತ್ತೆಗೆ ಪೋಲೀಸ್ ಇಲಾಖೆ ಮನವಿ ಮಾಡಿದೆ. ಸುಮಾರು 70 ಪ್ರಾಯದ ಈ ವ್ಯಕ್ತಿ ಪಾಣೆಮಂಗಳೂರು ಸ್ಮಶಾನದ ಬಳೊ ಬಳಿ ಟೆಂಟ್ ಹಾಕಿದ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಡಿ.29 ರಂದು ಈತನ ಮೃತದೇಹ ಪಾಣೆಮಂಗಳೂರು ನೇತ್ರಾವತಿ ನದಿಯಿಂದ ಬರುವ ನೀರಿನ ತೋಡಿನಲ್ಲಿ ಕವಚಿ ಹಾಕಿದ ಸ್ಥಿತಿಯಲ್ಲಿ ತೇಲಿಕೊಂಡಿತ್ತು. ಮೃತದೇಹದ ಕೈಗಳನ್ನು ಬಟ್ಟೆಯಿಂದ ಸಡಿಲವಾಗಿ ಕಟ್ಟಿಕೊಂಡಿದ್ದು, ಕುತ್ತಿಗೆಗೆ ಬಟ್ಟೆಯಿಂದ ಸುತ್ತಿಗೆ ಹಾಗೆ ಕಂಡು ಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ನೀರಿಗೆ ಆಕಸ್ಮಿಕವಾಗಿ ಬಿದ್ದು ಸತ್ತಿರಬಹುದಾ..? ಅಥವಾ ಇನ್ಯಾವುದೇ ಕಾರಣದಿಂದ ಸಾವನ್ನಪ್ಪಿರಬಹುದಾ ಎಂಬುದು ತಿಳಿಯಬೇಕಾಗಿದೆ.
ಆದರೆ ಮೃತಪಟ್ಟ ವ್ಯಕ್ತಿಯ ಸಂಬಂಧಿಕರನ್ನು ಪತ್ತೆಹಚ್ಚುವ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವನ್ನು ಇಡಲಾಗಿದೆ. ಮೃತದೇಹದ ಗುರುತುಪತ್ತೆಯಾದರೆ ಬಂಟ್ವಾಳ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡಲು ಪೋಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು