Thursday, January 23, 2025
ಸುದ್ದಿ

ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಸುಳ್ಯ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆಯ ಬಾಲಕಿಯರಿಗೆ ಪ್ರಥಮ ಸ್ಥಾನ – ಕಹಳೆ ನ್ಯೂಸ್

ಸುಳ್ಯ : ವೀರಾಂಜನೇಯ ಸ್ಪೋರ್ಟ್ಸ್  ಕ್ಲಬ್ ಗುತ್ತಿಗಾರು ಸುಳ್ಯ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿನ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ತಂಡದಲ್ಲಿ ಜುವೆನ್ನಾ ಡ್ಯಾಝಲ್ ಕುಟಿನ್ಹಾ ಸವ್ಯಾಸಾಚಿ ಆಟಗಾರ್ತಿಯಾಗಿ ಹಾಗೂ ಜೆನಿಟಾ ಸಿಂಧು ಪಸನ್ನ ಅತ್ತ್ಯುತಮ ಹಿಡಿತಗಾರ್ತಿಯಾಗಿ ಪ್ರಶಸ್ತಿಯನ್ನು ಪಡೆದುಕೊಂಡರು . ತಂಡವನ್ನು ಸನ್ನಿಧಿ, ಜಸ್ಮಿತಾ, ಫಾತಿಮತ್ ಶೈಮಾ, ಹಾರ್ದಿಕ, ನಿಶ್ಮಿತಾ, ದೃಶಾ, ಫಾತಿಮತ್ ಅಫ್ರ ಹಾಗೂ ಸುಶ್ರಾವ್ಯ ಪ್ರತಿನಿಧಿಸಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿ ವೆನಿಶಾ ಬಿ ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್, ಸುಚೇತ್ ದುರ್ಗಾನಗರ ಹಾಗೂ ಶಿಲ್ಪ ಮರಿಯಾ ಸೋಜ ತರಬೇತಿಯನ್ನು ನೀಡಿದ್ದಾರೆ. ಈ ತಂಡ ಶಿಕ್ಷಣ ಇಲಾಖೆಯ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು