Thursday, January 23, 2025
ಸುದ್ದಿ

ಅಜ್ಜರಕಾಡಿನಲ್ಲಿ ಜ.7ರಂದು ನಡೆಯಲಿರುವ ಸಹಕಾರಿ ಕ್ರೀಡಾಕೂಟ ಸಪ್ತವರ್ಣ-2024ರ ಪೂರ್ವಭಾವಿ ಸಭೆ – ಕಹಳೆ ನ್ಯೂಸ್

ಉಡುಪಿ ; ಜ.7ರಂದು ಜಿಲ್ಲಾ ಸಹಕಾರ ಸಂಸ್ಥೆಗಳ ನೌಕರರ ಹಾಗೂ ಆಡಳಿತ ಮಂಡಳಿ ಸದಸ್ಯರ, ನವೋದಯ ಸ್ವ ಸಹಾಯ ಗುಂಪುಗಳ ಸದಸ್ಯರ ಸಹಕಾರಿ ಕ್ರೀಡಾಕೂಟ ಸಪ್ತವರ್ಣ-2024 ನಡೆಯಲಿದೆ.

ವಿವಿಧ ಸಹಕಾರಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಡಯನಾ ಹೊಟೇಲ್ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಜ್ಜರಕಾಡು ಪುರಭವನದಲ್ಲಿ ಜ.7ರಂದು ಕ್ರೀಡಾಕೂಟ ನಡೆಯಲಿದ್ದು, ಏಳು ತಾಲೂಕುಗಳ ಸಹಕಾರಿ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆ.
ಉತ್ತಮ ಪಥ ಸಂಚಲನ ನಡೆಸುವ ತಂಡಕ್ಕೆ ಆಕರ್ಷಕ ಬಹುಮಾನ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾಣಿಸಲಾಯಿತು. ಸಭೆಯ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದ.ಕ ಜಿಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ, ಸಹಕಾರ ರತ್ನ ಎಂ.ಎನ್ ರಾಜೇಂದ್ರ ಕುಮಾರ್, ಈ ಕ್ರೀಡಾಕೂಟವು ಸಮಸ್ತ ಸಹಕಾರಿಗಳ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಗಿದ್ದು, ಒಟ್ಟು ನಾಲ್ಕು ವಿಭಾಗದಲ್ಲಿ ಈ ಕ್ರೀಡಾಕೂಟ ನಡೆಯಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು