Recent Posts

Sunday, January 19, 2025
ಸಿನಿಮಾಸುದ್ದಿ

ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದ ದಿ ವಿಲನ್ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನೀರಿಕ್ಷಿತ ಸಿನೆಮಾ ಅಂದ್ರೆ ಅದು ದಿ ವಿಲನ್. ಕಿಚ್ಚ ಮತ್ತು ಶಿವಣ್ಣ ಅಭಿನಯದ ಈ ಸಿನೆಮಾ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ.

ಈ ವಾರ ಬಿಡುಗಡೆಗೊಳ್ಳಲಿರುವ ಈ ಸಿನೆಮಾವು ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದೆ. ಸಿನೆಮಾ ರಿಲೀಸ್ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಮತ್ತು ರ‍್ಯಾಲಿಯನ್ನು ನಡೆಸಿದ್ದಾರೆ. ‘ದಿ ವಿಲನ್’ ಟೈಟಲ್ ಫಿಕ್ಸ್ ಆದಾಗಿನಿಂದಲೂ ಬಹಳಷ್ಟು ಕ್ರೇಜ್, ಕುತೂಹಲ ಹುಟ್ಟಿಸಿತ್ತು. ಇದೇ ಶುಕ್ರವಾರ ದಿ ವಿಲನ್ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ, ಚಿತ್ರ ಬಿಡುಗಡೆಗೂ ಮುನ್ನ ಶಿವರಾಜ್ ಕುಮಾರ್ ಅಭಿಮಾನಿಗಳು ವಿಶೇಷವಾಗಿ ರ‍್ಯಾಲಿಯನ್ನು ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗಸಂದ್ರ ಸರ್ಕಲ್‌ನಿಂದ ಶ್ರೀನಿವಾಸ ಚಿತ್ರಮಂದಿರದವರೆಗೂ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಶಿವಣ್ಣನ ಅಭಿಮಾನಿಗಳು ವಿಶೇಷವಾಗಿ ಸ್ಟಾರ್ ಪೋಸ್ಟರ್‌ಗಳನ್ನು ಮಾಡಿಸಿ ಸುಮಾರು ಐವತ್ತಕ್ಕೂ ಹೆಚ್ಚೂ ಬೈಕ್‌ಗಳೊಂದಿಗೆ ರ‍್ಯಾಲಿ ಮಾಡಿದ್ದರು. ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡಿರುವ ‘ದಿ ವಿಲನ್’ ಚಿತ್ರ ಇದೇ ಶುಕ್ರವಾರ ಒಂದು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ.