Sunday, November 24, 2024
ಸುದ್ದಿ

ಲೋಕಸಭಾ ಚುನಾವಣಾ ಅಭ್ಯರ್ಥಿಗಾಗಿ ಕಾಂಗ್ರೇಸ್ ಸರ್ವೇ ಕಾರ್ಯ : ಮುಂಚೂಣಿಯಲ್ಲಿ ರಮಾನಾಥ್ ರೈ ಹೆಸರು – ಕಹಳೆ ನ್ಯೂಸ್

ಬಂಟ್ವಾಳ : 2024ರ ಲೋಕಸಭಾ ಚುನಾವಣೆಗೆ ದ.ಕ.ಜಿಲ್ಲೆಯಿಂದ ಗೆಲ್ಲುವ ಅಭ್ಯರ್ಥಿಗಾಗಿ ಕಾಂಗ್ರೇಸ್ ಸರ್ವೇ ಕಾರ್ಯ ಆರಂಭಿಸಿದ್ದು, ಕಾಂಗ್ರೆಸ್ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಣೆಗಾಗಿ ಹೈಕಮಾಂಡ್ ಸಚಿವ ಮಧುಬಂಗಾರಪ್ಪನವರನ್ನು ಮಂಗಳೂರಿಗೆ ಕಳುಹಿಸಿದೆ. ಅಭಿಪ್ರಾಯ ಸಂಗ್ರಹಣೆಗಾಗಿ ಬಂದ ಮಧು ಬಂಗಾರಪ್ಪ ಮುಂದೆ ಮಂಗಳೂರಿನಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಹೆಸರನ್ನು ಎಂಟು ಬ್ಲಾಕ್ ಗಳ ಪ್ರಮುಖರು ಸೂಚಿಸಿದ್ದಾರೆ ಎಂಬ ವಿಚಾರ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ. ಇನ್ನುಳಿದಂತೆ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಉದ್ಯಮಿ ಇನಾಯತ್ ಆಲಿ ಪರ ಕಾಂಗ್ರೆಸ್ ಮುಂಚೂಣಿ ಘಟಕದ ನಾಯಕರಿಂದ ಹೆಸರು ಪ್ರಸ್ತಾಪವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.2 ರಂದು ಶನಿವಾರ ಸಂಜೆ 7 ಗಂಟೆಯಿ0ದ ಸುಮಾರು ಮಧ್ಯ ರಾತ್ರಿ 12 ಗಂಟೆವರೆಗೂ ಮಧು ಬಂಗಾರಪ್ಪ ಅವರು ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ನ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ವಿವಿಧ ಬ್ಲಾಕ್ ಗಳ ಮುಂಚೂಣಿ ನಾಯಕರಗಳಿಂದ ಗೌಪ್ಯವಾಗಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರಂಭದಲ್ಲಿ 8 ಜಿಲ್ಲೆಗಳ ಪ್ರಮುಖರಲ್ಲಿ ಮಾತನಾಡಿದರು. ಹೈ ಕಮಾಂಡ್ ನಿಮ್ಮ ಅಭಿಪ್ರಾಯವನ್ನು ಸಂಗ್ರಹಿಸಿ ಕಳುಹಿಸಲು ತಿಳಿಸಿದ್ದಾರೆ. ಆದರೆ ಇದು ಅಭ್ಯರ್ಥಿಗಳ ಅಂತಿಮ ಆಯ್ಕೆಯಲ್ಲ, ನಾನು ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಮಾಡುತ್ತೇನೆ. ಜೊತೆಗೆ ಹೈಕಮಾಂಡ್ ಸರ್ವೇ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ , ಸರ್ವೇಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಕೇಂದ್ರದ ನಾಯಕರು ಆಯ್ಕೆ ಮಾಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಎಂಟು ವಿಧಾನಸಭಾ ಕ್ಷೇತ್ರದ ವಿವಿಧ ಬ್ಲಾಕ್ ಗಳ ಪ್ರಮುಖ ನಾಯಕರುಗಳು ಬೇರೆಬೇರೆಯಾಗಿ ಬಂದು ಗೌಪ್ಯ ವಾಗಿ ಅಭಿಪ್ರಾಯ ನೀಡಬಹುದು ಮುಂಜಾನೆಯಾದರೂ ಪರವಾಗಿಲ್ಲ, ಅತ್ಯಂತ ತಾಳ್ಮೆಯಿಂದ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು ಎಂದಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬಂಟ್ವಾಳ, ಪುತ್ತೂರು, ಮಂಗಳೂರು, ಸುರತ್ಕಲ್, ಸುಳ್ಯ ಮತ್ತು ಮೂಡುಬಿದಿರೆ ಒಂಟು ಆರು ವಿಧಾನ ಸಭಾ ಕ್ಷೇತ್ರದ ಪ್ರಮುಖರು ಅಭಿಪ್ರಾಯ ಸಂಗ್ರಹದ ವೇಳೆ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಬೆಳ್ತಂಗಡಿಯ ಒಂದು ಬ್ಲಾಕ್ ಮತ್ತು ಉಳ್ಳಾಲದಲ್ಲಿಯೂ ಒಂದು ಬ್ಲಾಕ್ ರೈ ಪರವಾಗಿ ಬ್ಯಾಟ್ ಬೀಸಿದ್ದಾರೆ ಎಂಬ ಮಾಹಿತಿಯನ್ನು ಕಾಂಗ್ರೇಸಿಗರು ನೀಡಿದ್ದಾರೆ.

ಇನ್ನುಳಿದಂತೆ ಮಾಜಿ ಶಾಸಕರುಗಳಾದ ಜೆ.ಆರ್ ಲೋಬೋ ಮತ್ತು ಶಕುಂತಲಾ ಶೆಟ್ಟಿ ಅವರು ವಿನಯ ಕುಮಾರ್ ಸೊರಕೆಗೆ ಎಂ.ಪಿ.ಟಿಕೆಟ್ ನೀಡಿದರೆ ಉತ್ತಮ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಇವರ ಜೊತೆಗೆ ಬೆಳ್ತಂಗಡಿಯ ಕ್ಷೇತ್ರದ ಕಾರ್ಯಕರ್ತರು ಹರೀಶ್ ಕುಮಾರ್ ಮತ್ತು ಉಳ್ಳಾಲದ ಕಾರ್ಯಕರ್ತರು ಇನಾಯತ್ ಆಲಿ ಅವರ ಹೆಸರುಗಳು ಮಧುಬಂಗಾರಪ್ಪ ರವರ ಮುಂದೆ ಪ್ರಸ್ತಾಪವಾಯಿತು. ಆದರೆ ಬಹುತೇಕ ಎಲ್ಲಾ ಎಂಟು ವಿಧಾನ ಸಭಾ ಕ್ಷೇತ್ರದ ಪ್ರಮುಖ ಕಾರ್ಯಕರ್ತರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹೆಸರು ಉಲ್ಲೇಖ ಮಾಡಿ, ಅವರಿಗೆ ಈ ಬಾರಿಯ ಲೋಕಸಭಾ ಚುನಾವಣಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಗುರುತಿಸಿಕೊಂಡ ಪ್ರಬಲ ನಾಯಕ ರಮಾನಾಥ ರೈ ಅವರು ಶಾಸಕನಾಗಿ ಮಾಡಿದ ಅಭಿವೃದ್ದಿ ಕಾರ್ಯಗಳ ಜೊತೆಯಲ್ಲಿ ರಾಜ್ಯದ ಮಂತ್ರಿಯಾಗಿ ವಿವಿಧ ಜಿಲ್ಲೆಯಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಹಾಗಾಗಿ ಇಡೀ ರಾಜ್ಯದ ಜನತೆಗೆ ರೈ ಅವರು ಚಿರಪರಿಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಜನರಿಗೆ ಒಲವು ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎರಡು ಬಾರಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಎದುರು ನಿಂತು ಚುನಾವಣೆಯಲ್ಲಿ ಸೋಲನ್ನು ಕಂಡಿರುವ ರಮಾನಾಥ ರೈ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಲಾಗಿದ್ದರು ಕೂಡ ಕಾರ್ಯ ಕರ್ತರ ಒಲವು ಇವರಪರವಾಗಿದ್ದು, ಒಂದು ವೇಳೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಟಿಕೆಟ್ ನೀಡುವುದಾದರೆ ರೈ ಅವರು ಚುನಾವಣೆಗೆ ನಿಲ್ಲುತ್ತಾರಾ ? ಎಂಬುದನ್ನು ಕಾದುನೋಡುಬೇಕು. ರಾಜಕೀಯದಲ್ಲಿ ಹೇಳಿಕೆಗಳು ಸರ್ವೇ ಸಾಮಾನ್ಯ, ಹಾಗಾಗಿ ಯಾರು ಯಾವಾಗ ಬೇಕಾದರೂ ಆಗಬಹುದು ಇದು ಪಾಲಿಟಿಕ್ಸ್.. ಒಂದು ವೇಳೆ ರೈ ಅವರಿಗೆ ಟಿಕೆಟ್ ನೀಡದಿದ್ದರೆ ಹೊಸ ಮುಖ ಯುವ ನಾಯಕತ್ವಕ್ಕೆ ಗೆಲ್ಲಬಲ್ಲ ವರಿಗೆ ಮಣೆ ಹಾಕಬೇಕು ಎಂದಿದ್ದಾರೆ ಎನ್ನಲಾಗಿದೆ.