‘ಕಾಶಿ-ಮಥುರಾ ಮುಕ್ತವಾಗಬೇಕು’ ಎಂಬ ಛತ್ರಪತಿ ಶಿವಾಜಿ ಮಹಾರಾಜರ ಆಶಯ ಈಡೇರಿಸುವ ದೃಷ್ಟಿಯಿಂದ ನಡೆ !: ಸುಪ್ರೀಂ ಕೋರ್ಟ್ ನ್ಯಾಯವಾದಿ ವಿಷ್ಣು ಶಂಕರ್ ಜೈನ್ – ಕಹಳೆ ನ್ಯೂಸ್
ಓಝರ್ (ಜಿಲ್ಲೆ ಪುಣೆ) – ವಿಗ್ರಹವನ್ನು ಒಡೆಯುವುದರಿಂದ ದೇವತೆಯ ಅಸ್ತಿತ್ವ ನಾಶವಾಗುವುದಿಲ್ಲ. ದೇವತೆಗಳು ಸೂಕ್ಷ್ಮ ರೂಪದಲ್ಲಿ ಅದೇ ಸ್ಥಳದಲ್ಲಿ ನೆಲೆಸಿರುತ್ತಾರೆ. ಆದ್ದರಿಂದ, ‘ದೇವಾಲಯವನ್ನು ಒಮ್ಮೆ ನಿರ್ಮಿಸಿದರೆ, ಅದು ಶಾಶ್ವತವಾಗಿ ದೇವಾಲಯವಾಗಿ ಉಳಿಯುತ್ತದೆ’. ಕಾಶಿ ವಿಶ್ವೇಶ್ವರ ದೇವಸ್ಥಾನವನ್ನು ಕೆಡವಿ ದೇವಾಲಯದ ಅವಶೇಷಗಳ ಮೇಲೆ ಗುಮ್ಮಟವನ್ನು ನಿರ್ಮಿಸಿ ನಮಾಜ ಪಠಣ ಮಾಡಲಾಗುತ್ತಿದೆ. ಈ ಸ್ಥಳದಲ್ಲಿರುವ ಶೃಂಗಾರದೇವಿ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿದೆ.
ಪ್ರಸ್ತುತ ಹಿಂದೂಗಳಿಗೆ ವರ್ಷಕ್ಕೊಮ್ಮೆ ಮಾತ್ರ ಪೂಜೆಗಾಗಿ ಈ ಸ್ಥಳ ಪ್ರವೇಶಿಸಲು ಅವಕಾಶವಿದೆ. ಇದು ಹಿಂದೂ ದೇವಾಲಯಗಳ ಮೇಲೆ ಹಿಡಿತ ಸಾಧಿಸುವ ಷಡ್ಯಂತ್ರವಾಗಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ನಮ್ಮ ಹೋರಾಟ ನಡೆಯುತ್ತಿದೆ. 16 ಮೇ 2022 ರಂದು ಈ ಸ್ಥಳದಲ್ಲಿ ‘ವಜು ಅದಾ’ ಅನ್ನು ನ್ಯಾಯಾಲಯ ನಿಷೇಧಿಸಿದೆ. ಈ ಸ್ಥಳದಲ್ಲಿ ಕೇಂದ್ರ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯ ವರದಿಯನ್ನು 11 ಡಿಸೆಂಬರ್ 2023 ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಕಾಶಿ ವಿಶ್ವೇಶ್ವರ ದೇವಸ್ಥಾನದ ಅಷ್ಟಮಂಡಪದಲ್ಲಿ ಹಿಂದೂಗಳೆಲ್ಲರೂ ಮತ್ತೆ ಪೂಜೆ ಸಲ್ಲಿಸುವ ಸಮಯ ಶೀಘ್ರದಲ್ಲೇ ಬರಲಿದೆ. ಛತ್ರಪತಿ ಶಿವಾಜಿ ಮಹಾರಾಜರು ‘ಕಾಶಿ-ಮಥುರಾ ಮುಕ್ತವಾಗಬೇಕು’ ಎಂದು ಬಯಸಿದ್ದರು. ಆದ್ದರಿಂದ ಕಾಶಿ-ಮಥುರಾವನ್ನು ಮುಕ್ತಗೊಳಿಸಿ ಮತ್ತೆ ಸನಾತನ ಧರ್ಮಕ್ಕೆ ಒಪ್ಪಿಸುವ ಸಮಯ ಬಂದಿದೆ ಎಂದು ಕಾಶಿಯ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ವಕೀಲ ವಿಷ್ಣು ಶಂಕರ ಜೈನ್ ಪ್ರತಿಪಾದಿಸಿದರು. ಶ್ರೀ ವಿಘ್ನಹರ ಸಭಾಂಗಣದಲ್ಲಿ ನಡೆದ ಎರಡನೇ ‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷತ್ತಿ’ನಲ್ಲಿ ‘ಜ್ಞಾನವಾಪಿ, ಕಾಶಿ, ಮಥುರಾದಲ್ಲಿ ನ್ಯಾಯಾಲಯದ ಹೋರಾಟ ಮತ್ತು ಯಶಸ್ಸು’ ಕುರಿತು ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವಕೀಲ ಸಂದೀಪ ಜಯಗುಡೆ ಮಾತನಾಡಿ, ‘ನಗರದ ನೇವಾಸದಲ್ಲಿರುವ ಶ್ರೀ ನಾರದಮುನಿಗಳ ಪುರಾತನ ದೇಗುಲದ ಜಾಗದಲ್ಲಿ ಗೊರಿಯನ್ನು ಕಟ್ಟಿ ಮುಸ್ಲಿಮರು ಒತ್ತುವರಿ ಮಾಡಿಕೊಂಡು ವಶಪಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಈಗ ‘ವಕ್ಫ್’ ಅಲ್ಲಿನ ದೇವಾಲಯದ ಸಂಪೂರ್ಣ ಭೂಮಿಯನ್ನು ತನ್ನದೆಂದು ದಾವೆ ಮಾಡಿದೆ. ನಮ್ಮಲ್ಲಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಈ ತೀರ್ಪಿನ ವಿರುದ್ಧ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಪಡೆದಿದ್ದೇವೆ ಎಂದು ಹೇಳಿದರು.
ಸನಾತನ ಸಂಸ್ಥೆಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಮಾತನಾಡಿ, ”ಸನಾತನ ಧರ್ಮ ನಾಶವಾಗಬೇಕು, ಸನಾತನ ಧರ್ಮ ಒಂದು ರೋಗ ಇದ್ದಂತೆ ಎಂಬ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ನೀಡಲಾಗುತ್ತಿದೆ. ಇಂದು ಸನಾತನ ಧರ್ಮವನ್ನು ಕೊನೆಗಾಣಿಸುವ ಮಾತು ಬಂದರೆ ನಾಳೆ ದೇವಸ್ಥಾನಗಳನ್ನೂ ಕೊನೆಗಾಣಿಸುವ ಮಾತುಗಳು ಕೇಳಿ ಬರಬಹುದು. ಹಾಗಾಗಿ ಸಾಂವಿಧಾನಿಕವಾಗಿ ವಿರೋಧಿಸುವ ನಿಟ್ಟಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಲ್ಲಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸನಾತನ ಧರ್ಮದ ರಕ್ಷಣೆಗೆ ಮುಂದಾಗೋಣ!” ಎಂದು ಹೇಳಿದರು.
ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಮಾತನಾಡಿ, ‘ಹಲಾಲ್ ಜಿಹಾದ್’ ಮೂಲಕ ನಡೆಯುತ್ತಿರುವ ದೇಶವಿರೋಧಿ ಷಡ್ಯಂತ್ರವನ್ನು ತಡೆಯಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮುಂದಾಗಿದ್ದಾರೆ. ಯೋಗಿಜೀಯವರ ಈ ನಿರ್ಧಾರ ಶ್ಲಾಘನೀಯ. ‘ಹಲಾಲ್’ ಪ್ರಮಾಣಪತ್ರಗಳನ್ನು ಖರೀದಿಸಲು ಕೋಟ್ಯಂತರ ರೂಪಾಯಿಗಳನ್ನು ಪಾವತಿಸಿದ ಇಸ್ರೇಲ್ ನಿಂದಾದ ಹಮಾಸ್ ದಾಳಿಗೆ ಪ್ರತಿಯಾಗಿ, ಇಸ್ಲಾಮಿಸ್ಟ್ ಸಂಘಟನೆಗಳು ಇಸ್ರೇಲ್ ಉತ್ಪನ್ನಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದವು. ಅಮೆರಿಕದ ದೇವಸ್ಥಾನಗಳು ಹಲಾಲ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದು, ನಾವೂ ಸಹ ನಮ್ಮ ದೇವಸ್ಥಾನಗಳ ಮೂಲಕವೂ ಜಾಗೃತಿ ಮೂಡಿಸಲು ಮುಂದಾಗಬೇಕು.” ಎಂದು ಹೇಳಿದರು. ಈ ಸಂದರ್ಭದಲ್ಲಿ ಒಝರ್ ನ ಶ್ರೀ ವಿಘ್ನಹರ ಗಣಪತಿ ದೇವಸ್ಥಾನದ ವತಿಯಿಂದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರಿಗೆ ಶಾಲು ಹಾಗೂ ವಿಘ್ನಹರ ಶ್ರೀ ಗಣೇಶನ ವಿಗ್ರಹವನ್ನು ನೀಡಿ ಸನ್ಮಾನ ಮಾಡಲಾಯಿತು. ಈ ಸಮಯದಲ್ಲಿ ಶ್ರೀ ವಿಘ್ನಹರ ಗಣಪತಿ ದೇವಸ್ಥಾನದ ಅಧ್ಯಕ್ಷ ಶ್ರೀ. ಗಣೇಶ ಕವಡೆ, ಟ್ರಸ್ಟಿ ಶ್ರೀ. ಆನಂದರಾವ್ ಮಂಡೆ, ಭೀಮಾಶಂಕರ ದೇವಸ್ಥಾನದ ಅಧ್ಯಕ್ಷ ಶ್ರೀ. ಸುರೇಶ ಕೌದ್ರೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲೇಣ್ಯಾದ್ರಿ ದೇವಸ್ಥಾನದ ಅಧ್ಯಕ್ಷ ಶ್ರೀ. ಜಿತೇಂದ್ರ ಬಿಡಬಯಿ ಅವರು ವಕೀಲ ವಿಷ್ಣು ಶಂಕರ್ ಜೈನ್ ಅವರನ್ನು ಸನ್ಮಾನಿಸಿದರು.
ಶ್ರೀ ವಿಘ್ನಹರ ಗಣಪತಿ ಮಂದಿರ ದೇವಸ್ಥಾನದ ವೆಬ್ಸೈಟ್ ಅನಾವರಣ !
ಈ ಸಂದರ್ಭದಲ್ಲಿ ಶ್ರೀ ವಿಘ್ನಹರ ಗಣಪತಿ ಮಂದಿರ ದೇವಸ್ಥಾನದ ವೆಬ್ ಸೈಟ್ https://shreevighnaharganpatiozar.com ಶ್ರೀ ವಿಘ್ನಹರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶ್ರೀ. ಸತ್ಯಶೀಲ ಶೇರ್ಕರ್, ನ್ಯಾಯವಾದಿ ಶ್ರೀ. ವಿಷ್ಣು ಶಂಕರ್ ಜೈನ್, ಲೇಣ್ಯಾದ್ರಿ ದೇವಸ್ಥಾನದ ಅಧ್ಯಕ್ಷ ಶ್ರೀ. ಜಿತೇಂದ್ರ ಬಿಡವಯಿ, ಶ್ರೀ ವಿಘ್ನಹರ ಗಣಪತಿ ಮಂದಿರ ದೇವಸ್ಥಾನದ ಅಧ್ಯಕ್ಷ ಶ್ರೀ. ಗಣೇಶ ಕವಡೆ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ನಂದಕುಮಾರ್ ಜಾಧವ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಇದನ್ನು ಅನಾವರಣಗೊಳಿಸಲಾಯಿತು.