Wednesday, January 22, 2025
ಸುದ್ದಿ

ಜ.21ರಂದು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ(ರಿ.) ಪೆರಾಜೆ ವತಿಯಿಂದ 47ನೇ ವರ್ಷದ ವಾರ್ಷಿಕ ಭಜನೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ – ಕಹಳೆ ನ್ಯೂಸ್

ಪೆರಾಜೆ : ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ(ರಿ.) ಪೆರಾಜೆ ವತಿಯಿಂದ ಜ. 21ರಂದು 47ನೇ ವರ್ಷದ ವಾರ್ಷಿಕ ಭಜನೆ ಹಾಗೂ ಸಾಮೂಹಿಕ 44ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೆರಾಜೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಕಾರ್ಯಕ್ರಮದಂದು ಬೆಳಗ್ಗೆ ಶ್ರೀ ಗಣೇಶ ಹವನ, ರಕ್ತೇಶ್ವರಿ ದೈವಕ್ಕೆ ತಂಬಿಲ, ಬೆಳಗ್ಗೆ 6.10ಕ್ಕೆ ಸರ‍್ಯೋದಯ ದೀಪೋಜ್ವಲನೆ ಮತ್ತು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆರಾಜೆ ಮತ್ತು ಹಲವು ಭಜನಾ ಮಂಡಳಿ ಹಾಗೂ ಗ್ರಾಮಸ್ಥರಿಂದ ಭಜನಾ ಸೇವೆ ಆರಂಭವಾಗಲಿದೆ. ಮಧ್ಯಾಹ್ನ ದೇವರಿಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ 6.14 ಗೋಧೊಳಿ ಲಗ್ನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಆರಂಭವಾಗಲಿದ್ದು,ರಾತ್ರಿ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಭಜನಾ ಮಂಡಳಿಯ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸರ್ವಸದಸ್ಯರು ತಿಳಿಸಿದ್ದಾರೆ.