
ವಿಜಯಪುರ : ನಗರದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಗೋದಾಮಿನಲ್ಲಿ ನೂರಾರು ಚೀಲಗಳ ಮಧ್ಯೆ ಕಾರ್ಮಿಕರು ಸಿಲುಕಿಕೊಂಡ ಘಟನೆ ರಾಜಗುರು ಫುಡ್ಸ್ ಗೋದಾಮಿನಲ್ಲಿ ನಡೆದಿದೆ.
ವಿಜಯಪುರ ಕೆಐಡಿಬಿ ರಾಜಗುರು ಗೋದಾಮಿನಲ್ಲಿ ಕಾರ್ಮಿಕರು ಸಿಲುಕಿದ ಘಟನೆಗೆ ಸಂಬoಧಿಸಿದoತೆ ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ್ ಬೆಳಗಾವಿಯಿಂದ ವಿಜಯಪುರದತ್ತ ಆಗಮಿಸುತ್ತಿದ್ದಾರೆ.
ಘಟನೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದು, ಮಾನ್ಯ ಮುಖ್ಯಮಂತ್ರಿಗಳು ಕೂಡ ಈ ಘಟನೆಯ ಮಾಹಿತಿ ನೀಡಿದ್ದಾರೆ.
ಈಗಾಗಲೇ ರಕ್ಷಣಾ ಕಾರ್ಯ ನಡೆದಿದ್ದು ಸ್ವತಹ ಜಿಲ್ಲಾ ಉಸ್ತುವಾರಿ ಸಚಿವರು ಘಟನೆ ಸ್ಥಳಕ್ಕೆ ಮಾನ್ಯ ಸಚಿವ ಎಂ.ಬಿ. ಪಾಟೀಲರು ಈ ಗೋಧಾಮಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಸ್ಥಳದಲ್ಲಿ ರಕ್ಷಾಣಾ ಕಾರ್ಯಾಚರಣೆ ನಡೆಯುತ್ತಿದೆ.
Video Player
00:00
00:00