ವಿದ್ಯಾರ್ಥಿಗಳ ಅರೋಗ್ಯ, ಆಹಾರ ಮತ್ತು ಸುರಕ್ಷತೆಯಾ ಬಗ್ಗೆ ಸರಿಯಾದ ಗಮನ ಕೊಡಿ ; ಬಿ ವಿ ಕಾವೇರಿ ಶಾಲಾ ಶಿಕ್ಷಣ ಇಲಾಖ ಆಯುಕ್ತರು ಖಡಕ್ ಎಚ್ಚರಿಕೆ – ಕಹಳೆ ನ್ಯೂಸ್
ವಿದ್ಯಾರ್ಥಿಗಳ ಅರೋಗ್ಯ, ಆಹಾರ ಮತ್ತು ಸುರಕ್ಷತೆಯಾ ಬಗ್ಗೆ ಸರಿಯಾದ ಗಮನ ಕೊಡಿ, ಎಸ್ ಓ ಪಿ ನಿಯಮ ಪಾಲಿಸದವರ ಮೇಲೆ ಕಠಿಣ ಕ್ರಮ ಕೈ ಗೊಳ್ಳಲಾಗುವುದು ಎಂದು ಬಿ ವಿ ಕಾವೇರಿ ಶಾಲಾ ಶಿಕ್ಷಣ ಇಲಾಖ ಆಯುಕ್ತರು ಖಡಕ್ ಆಗಿ ತಿಳಿಸಿದ್ದಾರೆ.
ರಾಜ್ಯ ದಲ್ಲಿ 55.57 ಲಕ್ಷ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಸರಕಾರ ಮಾಡತ್ತಿದ್ದು ಈ ಬಗ್ಗೆ ಯಾವುದೆ ಮಗುವಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರು ಹೇಳಿದ್ದಾರೆ.
ಕಲಬುರಗಿಯ ಅಫಜಲಪುರ: ತಾಲೂಕಿನ ಚಿಣಮಗೇರಾ ಗ್ರಾಮದ ಸರಕಾರಿ ಶಾಲೆಯಲ್ಲಿ ಅಡುಗೆ ಮಾಡುವ ಕಡಾಯಿಗೆ ಬಿದ್ದು 2ನೇ ತರಗತಿ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳಿಗೆ ಪ್ರಮಾಣಿತ ಕಾರ್ಯಕಾರಿ ವಿಧಾನ (ಎಸ್‌ಒಪಿ) ಕಟ್ಟುನಿಟ್ಟಾಗಿ ನ ಪಾಲಿಸುವಂತೆ ಸೂಚನೆ ನೀಡಿದೆ.
ಮಕ್ಕಳು ಸಾಲಿನಲ್ಲಿ ನಿಲ್ಲಿಸಿದ ಪರಿಣಾಮ ಊಟ ಪಡೆಯುವ ಉತ್ಸಾಹದಲ್ಲಿ ಮಕ್ಕಳು ತಳ್ಳಾಟನಡೆಸಿದ್ದು, 2ನೇ ತರಗತಿ ವಿದ್ಯಾರ್ಥಿನಿ ಮಹಂತಮ್ಮ ಎದುರಿಗೆ ಇದ್ದ ಬಿಸಿಯೂಟದ ಕಡಾಯಿಗೆ ಬಿದ್ದಿದ್ದಳು. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತ ಪಟ್ಟಿತ್ತು,
ಪ್ರಕರಣಕ್ಕೆ ಶಾಲಾ ಶಿಕ್ಷಕರು, ಅಡುಗೆ ಸಹಾಯಕರ ನಿರ್ಲಕ್ಷ್ಯತನವೇ ಕಾರಣ ಎಂದು ಬೊಟ್ಟು ಮಾಡಿ ಅಡುಗೆ ಸಹಾಯಕ ರನ್ನು ವಜಾಗೊಳಿಸಿ, ಶಿಕ್ಷಕರನ್ನು ಅಮಾನತು ಮಾಡಿದೆ. ಇವರ ವಿರುದ್ಧ ಸ್ಥಳೀಯ ಠಾಣೆ ಯಲ್ಲಿ ದೂರು ದಾಖಲಿಸಿದ್ದು, ಶಿಕ್ಷಣ ಇಲಾಖೆ ಆಂತರಿಕ ತನಿಖೆ ನಡೆಸಲು ಮುಂದಾಗಿದೆ.
ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಸಿದ್ಧಪಡಿಸುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಪ್ರಮಾಣಿತ ಕಾರ್ಯಕಾರಿ ವಿಧಾನಗಳು (ಎಸ್‌ಒಪಿ) ರೂಪಿಸಿದೆ. ಇದನ್ನುಕಡ್ಡಾಯವಾಗಿ ಪಾಲಿಸಬೇಕೆಂದು ಈಗಾಗಲೇ ಶಾಲೆಗಳಿಗೆ ಸೂಚನೆ ನೀಡಿದೆ. ಇದರಲ್ಲಿ . ಪ್ರತಿಯೊಬ್ಬರ ಜವಾಬ್ದಾರಿಯನ್ನು ಸ್ಪಷ್ಟವಾಗಿ ತಿಳಿಸಿದೆ. ತಿಂಗಳಿಗೊಮ್ಮೆ ಆಹಾರದ ಕೊಠಡಿಯನ್ನು ಸಂಪೂರ್ಣ ಸ್ವಚ್ಛಮಾಡಬೇಕು. ಅಹಾರ ಪದಾರ್ಥಗಳನ್ನು ಬಿಸಿ ನೀರಿನಿಂದ ತೊಳೆಯಬೇಕು. ವಿದ್ಯಾರ್ಥಿಗೆ ಬಡಿಸುವ 30 ನಿಮಿಷ ಮುನ್ನ ಶಿಕ್ಷಕರು ಊಟ ಮಾಡಿ ಪರಿಶೀಲಿಸಬೇಕು.ಅಡುಗೆ ಸಿಬ್ಬಂದಿ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮಗುವಿಗೆ ಅಡುಗೆ ಕೋಣೆಗೆ ಪ್ರವೇಶ ಇರಬಾರದು ಎಂದು ಎಸ್ ಓ ಪಿ ಯಲ್ಲಿ ಸೂಚಿ ಸಲಾಗಿದೆ