Recent Posts

Tuesday, November 26, 2024
ಸುದ್ದಿ

ಸುಳ್ಯ ಕೆವಿಜಿ ಗೊಂದಲ : ಅಣ್ಣ ತಮ್ಮಂದಿರ ದ್ವೇಷ ಬಿಟ್ಟು ತಂದೆ-ತಾಯಿಯ ಒಪ್ಪಂದದoತೆ ನಡೆದುಕೊಳ್ಳಿ.. ‘ಕೆವಿಜಿ ಹಿತರಕ್ಷಣಾ ಸಮಿತಿ’ ಮನವಿ – ಕಹಳೆ ನ್ಯೂಸ್

ಸುಳ್ಯದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಕೆವಿಜಿ ಸಮೂಹ ವಿದ್ಯಾಸಂಸ್ಥೆಗಳಲ್ಲಿನ ಗೊಂದಲಗಳ ಬಗ್ಗೆ ಕೆವಿಜಿ ಹಿತರಕ್ಷಣಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಒಮ್ಮತದ ಆಡಳಿತ ನಡೆಸಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯದ ಪ್ರಸೆ ಕ್ಲಬ್ ನಲ್ಲಿ ಭರತ್ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿತ್ತಾ ಈ ಎಲ್ಲಾ ಗೊಂದಲಗಳಿಂದಾಗಿ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ ಕುಂಟಿತಗೊಳ್ಳಬಹುದು. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕಾಲೇಜಿನ ಸಿಬ್ಬಂದಿ ವರ್ಗದವರಲ್ಲೂ ಒಂದು ಬಗೆಯ ಅನಿಶ್ಚಿತತೆ ಉಂಟಾಗಬಹುದು. ತಮ್ಮ ಸೇವಾ ಭದ್ರತೆಗೆ ಧಕ್ಕೆಯಾಗುತ್ತದೆ ಎಂಬ ಭಯ ನಿರ್ಮಾಣವಾಗಬಹುದು. ಪಾಠ ಪ್ರವಚನಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾದ್ಯವಾಗದ ವಾತಾವರಣ ಸೃಷ್ಟಿಯಾಗಬಹುದು ಇದು ಕೆ.ವಿ.ಜಿ.ಯವರ ಆಶಯಕ್ಕೆ ವಿರುದ್ಧವಾದ ನಡೆ.

ಜಾಹೀರಾತು
ಜಾಹೀರಾತು
ಜಾಹೀರಾತು

02.03.1967ರಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಸ್ಥಾಪಕಾಧ್ಯಕ್ಷತೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಜಾತಿ ಮತಗಳಿಗೆ ಸೇರಿದ 16 ಜನ ಪ್ರಭಾವಿ ವ್ಯಕ್ತಿಗಳಿಂದ ಕೂಡಿದ ಸೊಸೈಟಿಯನ್ನು ರಿಜಿಸ್ಟ್ರೇಷನ್ ಆಕ್ಟ್ 1960 (ಆಕ್ಟ್ ನಂ. 17)ರ ಪ್ರಕಾರ ನೋಂದಾಣೆ ಮಾಡಲಾಯಿತು.

ಸನ್ಮಾನ್ಯ ಕುರುಂಜಿ ವೆಂಕಟರಮಣ ಗೌಡರ ದೂರದೃಷ್ಟಿತ್ವದ ಪ್ರಕಾರ ಈ ಸೊಸೈಟಿ ಸ್ಥಾಪನೆ ಮಾಡಿ ಅತ್ಯಂತ ಹಿಂದುಳಿದ ಪ್ರದೇಶವಾದಂತಹ ಸುಳ್ಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಅನುಕೂಲ ಮಾಡುವುದರ ಜೊತೆಗೆ ಸುಳ್ಯ ಪರಿಸರದ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿ ಅವರ ಕುಟುಂಬದ ಸಬಲತೆಗೆ ಕಾರಣರಾಗುವುದರೊಂದಿಗೆ ಸುಳ್ಯ ಪೇಟೆಯು ಕೂಡ ವಿಸ್ತಾರವಾಗಿ ಬೆಳೆದು ಸುಳ್ಯ ಎಂಬ ಹೆಸರು ರಾಜ್ಯ ಮತ್ತು ರಾಷ್ಟ್ರದಲ್ಲಿ ಗುರುತಿಸುವಂತೆ ಆಗಿರುವುದು ತಮಗೆಲ್ಲಾ ತಿಳಿದ ವಿಚಾರ.

ಸನ್ಮಾನ್ಯ ಕುರುಂಜಿ ವೆಂಕಟ್ರಮಣ ಗೌಡರವರು ತಾಲೂಕಿನ ಎಲ್ಲಾ ಹಿರಿಯ ಕಿರಿಯ ವ್ಯಕ್ತಿಗಳನ್ನು ಕೂಡ ಪ್ರೀತಿ ಗೌರವದಿಂದ ಕಂಡು ಅವರ ಸಲಹೆಗಳನ್ನು ಪಡೆದು ತನ್ನ ಸ್ವಂತ ಕೃಷಿ ಭೂಮಿಯ ಆದಾಯದಿಂದ ತನಗೆ ಸಿಗದ ವಿದ್ಯೆ ಊರಿಗೆ ಸಿಕ್ಕಲಿ ಎಂಬ ಮಹಾದ್ದೋದ್ದೇಶದಿಂದ ಮಾಡಿರುವ ಈ ಅಕ್ಷರ ಕ್ರಾಂತಿಯು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿರುವ ವಿಚಾರ. ಶ್ರೀಯುತ ಕುರುಂಜಿ ವೆಂಕಟ್ರಮಣ ಗೌಡರು ಅನಾರೋಗ್ಯಕ್ಕೊಳಗಾದಗ ತಾನು ಕಟ್ಟಿ ಬೆಳೆಸಿದ ಈ ವಿದ್ಯಾಸಂಸ್ಥೆಗಳನ್ನು ಸಮರ್ಪಕವಾಗಿ ಮುಂದೆ ನಿರ್ವಹಣೆ ಮಾಡಿಕೊಂಡು ಹೋಗಬೇಕೆಂಬ ಸದುದ್ದೇಶದಿಂದ ತನ್ನ ಮೂವರು ಮಕ್ಕಳ ಪೈಕಿ ಹೆಣ್ಣು ಮಗಳಾದ ಗೋವರ್ದಿನಿ ವಿದೇಶದಲ್ಲಿ ನೆಲೆಸಿರುವುದರಿಂದ ತನ್ನ ಇಬ್ಬರು ಗಂಡು ಮಕ್ಕಳಾದ ಡಾ. ಚಿದಾನಂದ ಮತ್ತು ಡಾ. ರೇಣುಕಾ ಪ್ರಸಾದ್‌ ರವರಿಗೆ 2009ರ ಮೇ ತಿಂಗಳ 12ನೇ ತಾರೀಕಿನಂದು ಒಂದು ಒಪ್ಪಂದ ಪತ್ರವನ್ನು ತಯಾರು ಮಾಡಿ ಅಕಾಡೆಮಿ ಅಡಿಯಲ್ಲಿರುವ ವಿದ್ಯಾ ಸಂಸ್ಥೆಗಳನ್ನು ‘ಎ’ ಮತ್ತು ‘ಬಿ’ ಎಂದು ವರ್ಗೀಕರಿಸಿ ಗ್ರೂಪ್ ‘ಎ’ ಗೆ ಬರುವ ಮೆಡಿಕಲ್ ಕಾಲೇಜು, ನರ್ಸೀಂಗ್, ಆಯುರ್ವೇದಿಕ್, ಕಾನೂನು, ನೆಹರು ಮೆಮೊರಿಯಲ್ ಕಾಲೇಜುಗಳನ್ನು ಡಾ. ಚಿದಾನಂದರವರು ” , ಪಾಲಿಟೆಕ್ನಿಕ್, ಐ.ಟಿ.ಐ ಕಾಲೇಜುಗಳು ಹಾಗೂ ಕೆ.ವಿ.ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕೊಲ್ಲಮೊಗ್ರ ಪ್ರೌಢ ಶಾಲೆ ಮತ್ತು ಭಾಗಮಂಡಲ ಐ.ಟಿ.ಎ ಇವುಗಳ ಸಂಪೂರ್ಣ ನಿರ್ವಹಣೆಯನ್ನು ಡಾ. ರೇಣುಕಾ ಪ್ರಸಾದ್‌ ರವರು ನಿರ್ವಹಿಸಿಕೊಂಡು ಬರಬೇಕೆಂದು ತಿರ್ಮಾನಿಸಿ ಬರೆದ ಒಪ್ಪಂದ ಪತ್ರಕ್ಕೆ ತಂದೆಯವರಾದ ಡಾ. ವೆಂಕಟ್ರಮಣ ಗೌಡರು, ತಾಯಿ ಜಾನಕಿ ವೆಂಕಟ್ರಮಣ ಗೌಡರು ಅಲ್ಲದೇ ಮಕ್ಕಳಾದ ಡಾ. ಚಿದಾನಂದ ಮತ್ತು ಡಾ. ರೇಣುಕಾ ಪ್ರಸಾದ್ ಹಾಗೂ ಸೊಸೆಯಂದಿರಾದ ಶೋಭ ಚಿದಾನಂದ ಮತ್ತು ಡಾ. ಜ್ಯೋತಿ ಆರ್ ಪ್ರಸಾದ್ ಅವರು ತಮ್ಮ ಸಹಿಯನ್ನು ಹಾಕಿರುತ್ತಾರೆ ಅಲ್ಲದೇ ಈ ಬಗ್ಗೆ ಕೆ.ವಿ.ಜಿಯವರ ಅಧ್ಯಕ್ಷತೆಯಲ್ಲಿ 02.09.2008ರಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲೂ ಮಂಜೂರಾತಿ ಪಡೆಯಲಾಗಿದೆ.
ಈ ಒಪ್ಪಂದದ ಪ್ರಕಾರ 2009ರಿಂದ 2023ರ ಅಕ್ಟೋಬರ್ ತಿಂಗಳಿನವರೆಗೂ ಈ ಎರಡು ವಿಭಾಗದ ಆಡಳಿತವು ಬೇರೆ ಬೇರೆಯಾಗಿಯೇ ನಡೆಯುತ್ತಿತ್ತು. ದುರದೃಷ್ಟವಶಾತ್ ಡಾ. ರೇಣುಕಾ ಪ್ರಸಾದ್‌ರವರಿಗೆ ಪ್ರಕರಣವೊಂದರಲ್ಲಿ ಶಿಕ್ಷೆ ಪ್ರಕಟವಾದ ಮರುದಿನವೇ ಡಾ. ಚಿದಾನಂದ ಮತ್ತು ಅವರ ತಂಡದವರು ಡಾ. ರೇಣುಕಾ ಪ್ರಸಾದ್ ರ ಆಡಳಿತ ವ್ಯಾಪ್ತಿಯಲ್ಲಿದ್ದ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಮಾಡಿ ಆಡಳಿತದ ಹಿಡಿತ ಪಡೆಯಲು ಪ್ರಯತ್ನಿಸಿದ್ದು ಈ ಬಗ್ಗೆ ಡಾ. ಜ್ಯೋತಿ ಆರ್ ಪ್ರಸಾದ್ ರವರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಮತ್ತು ಈ ಪ್ರಕರಣದಲ್ಲಿ ಎಫ್.ಐ.ಆರ್ ಆಗಿ ಡಾ. ಚಿದಾನಂದ ಮತ್ತು ಇತರರು ಕೋರ್ಟಿನಲ್ಲಿ ಜಾಮೀನು ಪಡೆದು ಬಂದಿರುವ ವಿಚಾರ ಪತ್ರಿಕೆಗಳಲ್ಲಿ ಓದಿ ತಿಳಿದು ನಮಗೆಲ್ಲರಿಗೂ ಅತೀವ ದುಖವನ್ನು ತಂದಿದೆ.
ಕುರುಂಜಿಯವರು ಸ್ಥಾಪಿಸಿದ ಈ ವಿದ್ಯಾ ಸಂಸ್ಥೆಗಳು ಅಣ್ಣ ತಮ್ಮಂದಿರ ದ್ವೇಷಕ್ಕೆ ಬಲಿಯಾಗಬಾರದು ಮತ್ತು ಈ ಸಂಸ್ಥೆಯಲ್ಲಿ ದುಡಿಯುವ ಸಾವಿರಾರು ಜನರ ಬದುಕಿಗೆ ತೊಂದರೆಯಾಗಬಾರದು ಹಾಗೂ ಈ ಸಂಸ್ಥೆಯಲ್ಲಿ ಲಕ್ಷಾಂತರ ಹಣ ಶುಲ್ಕ ಕಟ್ಟಿ ವಿದ್ಯಾಭ್ಯಾಸ. ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗೆ ತೊಂದರೆಯುಂಟಾಗಬಾರದೆಂಬ ಉದ್ದೇಶದಿಂದ ನಾವೂ ಸಮಾಜದ ಎಲ್ಲಾ ಮುಖಂಡರು ಸೇರಿ ‘ಕೆ.ವಿ.ಜಿ ಕ್ಯಾಂಪಸ್ ಹಿತ ರಕ್ಷಣಾ ಸಮಿತಿ’ಯನ್ನು ಹುಟ್ಟು ಹಾಕಿ ಸಹೋದರರ ವಿವಾದವನ್ನು ಸರಿಪಡಿಸುವಂತೆ ಸಮಾಜದ ಮುಖಂಡರುಗಳಾದ ಡಿ.ವಿ. ಸದಾನಂದ ಗೌಡ ಮತ್ತು ಕೆ.ಜಿ ಬೋಪಯ್ಯ ಇವರಲ್ಲಿಯೂ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಾಲಾನಂದ ಸ್ವಾಮೀಜಿಯವರಲ್ಲಯೂ ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ರಲ್ಲಿಯೂ ಮನವಿಗಳನ್ನು ಮಾಡಿದ್ದೆವು.

ಈ ಮೇಲಿನ ಎಲ್ಲಾ ಗೌರವಾನ್ವಿತರ ಮನವಿಗೆ ಡಾ. ಚಿದಾನಂದರು ಸ್ಪಂದಿಸದೇ ಡಾ. ರೇಣುಕಾ ಪ್ರಸಾದ್ ರವರ (ಒಪ್ಪಂದದ ಪ್ರಕಾರ) ಆಡಳಿತದಲ್ಲಿದ್ದ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರ ಬ್ಯಾಂಕ್ ಖಾತೆಗಳನ್ನು ಬ್ಯಾಂಕ್‌ಗಳಲ್ಲಿ ತಡೆಹಿಡಿದು ಉದ್ಯೋಗಿಗಳಿಗೆ ಸಂಬಳ ಸಿಗದಂತೆ ಮಾಡಿರುವುದಲ್ಲದೇ ‘ಬಿ’ ಗ್ರೂಪಿನ ಆಡಳಿತ ವ್ಯಾಪ್ತಿಯ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರು, ಪ್ರಾಧ್ಯಾಪಕರಿಗೆ ಶೋಕಾಸ್

ನೋಟಿಸು ನೀಡಿರುವುದು ಮತ್ತು ಪ್ರತೀಕಾರದ ಕ್ರಮವಾಗಿ ಕೆಲವು ಸಿಬ್ಬಂದಿಗಳನ್ನು ಅಮಾನತು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.

ಆದುದರಿಂದ ಈಗಲೂ ಕೂಡ ನಾವು ಸಮಾಜದ ಸಿಬ್ಬಂದಿಗಳ, ವಿದ್ಯಾರ್ಥಿಗಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಡಾ. ಚಿದಾನಂದ ಮತ್ತು ಅವರ ಮನೆಯವರಲ್ಲಿ ಒಂದು ವಿನಂತಿಯನ್ನು ಮಾಡುತ್ತಿದ್ದೇವೆ. ಪ್ರತಿಕಾರದ ಕ್ರಮವನ್ನು ಬಿಟ್ಟು ಅಂದು ನಿಮ್ಮ ತಂದೆ ಮತ್ತು ಕಾಯಿ ಮಾಡಿರುವ ಒಪ್ಪಂದದಂತೆ ನಡೆಯುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುವಿರಾಗಿ ನಂಬಿರುತ್ತೇವೆ. ಒಂದು ವೇಳೆ ತಾವು ಈ ಮನವಿಯನ್ನು ಶಿರಸ್ಕರಿಸಿದ್ದೇ ಆದಲ್ಲಿ ನಾವು ಮುಂದಿನ ಹೋರಾಟದ ದಾರಿಗೆ ‘ಇಳಿಯುವ ಅನಿವಾರ್ಯತೆ ಉಂಟಾಗಬಹುದು ಎಂಬುದನ್ನು ತಮ್ಮ ಗಮನಕ್ಕೆ ಈ ಮೂಲಕ ತರಲು ಬಯಸುತ್ತಿದ್ದೇವೆ ಎಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ಎನ್ ಎ ರಾಮಚಂದ್ರ , ಕಾರ್ಯಧ್ಯಕ್ಷರಾದ ಜಾಕೆ ಮಾಧವ ಗೌಡ , ಉಪಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ , ಎಸ್ ಎನ್ ಮನ್ಮಥ ,ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ , ಪಿ ಎಸ್ ಗಂಗಾಧರ , ಸಂಚಾಲಕರಾದ ಪಿಸಿ ಜಯರಾಮ್ , ವೆಂಕಟ್ ದಂಬೆಕೋಡಿ , ಸಂತೋಷ್ ಕುತ್ತಮೊಟ್ಟೆ , ದಯಾನಂದ ಕುರುಂಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.