Recent Posts

Tuesday, November 26, 2024
ಸುದ್ದಿ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ನವದೆಹಲಿಯಲ್ಲಿ ಯಜ್ಞಕ್ಕೆ ಸಂಬಂಧಿಸಿದ ಸಂಶೋಧನೆಯ ಮಂಡನೆ !: ಯಜ್ಞದಿಂದ ಪ್ರಕ್ಷೇಪಿತವಾಗುವ ಸಕಾರಾತ್ಮಕತೆಯನ್ನು ಗ್ರಹಿಸಲು, ಸಾತ್ತ್ವಿಕ ಜೀವನಶೈಲಿ ಅಳವಡಿಸಿಕೊಳ್ಳುವುದು ಮತ್ತು ಸಾಧನೆಯನ್ನು ಮಾಡುವುದು ಆವಶ್ಯಕ ! – ಶಾನ್ ಕ್ಲಾರ್ಕ್- ಕಹಳೆ ನ್ಯೂಸ್

‘ಸದ್ಯ ಜಗತ್ತಿನಾದ್ಯಂತ ವಾಯುಮಂಡಲದಲ್ಲಿ ಇಂಗಾಲದ ಡೈಆಕ್ಸೈಡ್ (ಇಂಗಾಲಾಮ್ಲ) ಪ್ರಮಾಣವು ಹಿಂದೆಂದೂ ಇಲ್ಲದಷ್ಟು ಹೆಚ್ಚಾಗಿದ್ದು, ಇದು ಅತ್ಯಧಿಕ ಚಿಂತೆಯ ಕಾರಣವಾಗಿದೆಯೆಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಿನ ಗಂಭೀರ ವಿಷಯವೆಂದರೆ, ‘ವಾತಾವರಣದಲ್ಲಿ ಸೂಕ್ಷ್ಮ ಸ್ತರದಲ್ಲಿ ಆಗಿರುವ ಆಧ್ಯಾತ್ಮಿಕ ಪ್ರದೋಷಣೆ, ಅಂದರೆ ರಜ-ತಮದಲ್ಲಿನ ಹೆಚ್ಚಳ. ಯಜ್ಞದಿಂದ ವಾತಾವರಣದಲ್ಲಿನ ವಾಯು(ಧೂಳಿನ) ಮಾಲಿನ್ಯ ಕಡಿಮೆಯಾಗುತ್ತದೆ ಎಂದು ವಿವಿಧ ವೈಜ್ಞಾನಿಕ ಪ್ರಯೋಗಗಳಿಂದ ಸ್ಪಷ್ಟವಾಗಿದೆ. ಯಜ್ಞದಿಂದ ಪ್ರಕ್ಷೇಪಿತಗೊಳ್ಳುವ ಸಕಾರಾತ್ಮಕತೆಯನ್ನು ಗ್ರಹಣ ಮಾಡುವುದು, ಹಾಗೆಯೇ ಅದು ಸ್ಥಿರವಾಗಿರಲು ಸಾತ್ತ್ವಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ’, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ ಇವರು ಮಂಡಿಸಿದರು. ಅವರು ಇತ್ತೀಚೆಗಷ್ಟೇ ನವದೆಹಲಿಯಲ್ಲಿ ನಡೆದ ‘ಟ್ವೆಂಟಿಸೆವೆನ್ತ್ ಇಂಡಿಯಾ ಕಾನ್ಫರೆನ್ಸ್ ಆಫ್ ವೇವ್ಸ್ ಆನ್ ಮ್ಯಾನ್ ಅಂಡ್ ನೇಚರ್ ಇನ್ ವೈದಿಕ ಟ್ರೆಡಿಶನ್ : ಮಾಡರ್ನ್ ಪರ್ಸ್ಪೆಕ್ಟಿವ್’ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. ಅವರು ‘ವಾಯುಮಂಡಲವನ್ನು ಶುದ್ಧಿಗೊಳಿಸಲು ಯಜ್ಞದಲ್ಲಿರುವ ಆಧ್ಯಾತ್ಮಿಕ ಸಾಮರ್ಥ್ಯ’, ಈ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಇದರ ಲೇಖಕರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಾಗಿದ್ದು, ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಅಕ್ಟೋಬರ್ 2016 ರಿಂದ ನವೆಂಬರ್ 2023 ರ ಕಾಲಾವಧಿಯಲ್ಲಿ 18 ರಾಷ್ಟ್ರೀಯ ಮತ್ತು 92 ಅಂತರರಾಷ್ಟ್ರೀಯ, ಹೀಗೆ ಒಟ್ಟು 110 ವೈಜ್ಞಾನಿಕ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದೆ. ಇವುಗಳಲ್ಲಿ, 14 ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ‘ಅತ್ಯುತ್ತಮ ಪ್ರಸ್ತುತೀಕರಣ’ ಪ್ರಶಸ್ತಿಗಳು ಸಿಕ್ಕಿವೆ.

ಶ್ರೀ, ಕ್ಲಾರ್ಕ್ ಇವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಜನವರಿ 2022 ರಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ನಡೆಸಿದ, 6 ಯಜ್ಞಗಳಿಂದ ಆಧ್ಯಾತ್ಮಿಕ ಸ್ತರದಲ್ಲಿ ಆಗುವ ಲಾಭಗಳ ಅಭ್ಯಾಸ ಮಾಡಲು ತೆಗೆದುಕೊಂಡ

ಜಾಹೀರಾತು
ಜಾಹೀರಾತು
ಜಾಹೀರಾತು

ಮಣ್ಣು, ನೀರು ಮತ್ತು ಗಾಳಿಯ ವೈಜ್ಞಾನಿಕ ಪರೀಕ್ಷಣೆಯ ಫಲಿತಾಂಶವನ್ನು ಮಂಡಿಸಿದರು. ಈ ಪರೀಕ್ಷಣೆಗಾಗಿ ಯಜ್ಞದ ಮೊದಲು ಮತ್ತು ಯಜ್ಞದ ಬಳಿಕ ಮಣ್ಣು, ನೀರು ಮತ್ತು ವಾಯುವಿನ ನಮೂನೆಗಳನ್ನು ಸಂಗ್ರಹಿಸುವಾಗ ಅದನ್ನು ಸಾಧನೆ ಮಾಡುತ್ತಿರುವ ಸಾಧಕರ ಮನೆಯಿಂದ ಹಾಗೂ ಸಾಧನೆಯನ್ನು ಮಾಡದಿರುವ ಅವರ ಪಕ್ಕದ ಮನೆಯಿಂದ ಹೀಗೆ ಜೊತೆಯಲ್ಲಿ ತೆಗೆದುಕೊಳ್ಳಲಾಯಿತು. ಈ ಮೂರು ಪ್ರಕಾರದ ನಮೂನೆಗಳಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಲು ಮಾಜಿ ಅಣು ವಿಜ್ಞಾನಿ ಡಾ. ಮನ್ನಂ ಮೂರ್ತಿಯವರು ಅಭಿವೃದ್ಧಿಪಡಿಸಿದ ಯುನಿವರ್ಸಲ್ ಔರಾ ಸ್ಕ್ಯಾನರ್(ಯು.ಎ.ಎಸ್.) ಉಪಕರಣವನ್ನು ಉಪಯೋಗಿಸಲಾಗಿದೆ. ಯಜ್ಞದಿಂದ ನಕಾರಾತ್ಮಕ ಊರ್ಜೆ ಕಡಿಮೆಯಾಗುವುದು ಮತ್ತು ಸಕಾರಾತ್ಮಕ ಊರ್ಜೆ ಹೆಚ್ಚಾಗಿರುವುದು ಎರಡೂ ಮನೆಗಳಲ್ಲಿನ ಮೂರೂ ನಮೂನೆಯ ಸಂದರ್ಭದಲ್ಲಿ ಕಂಡು ಬಂದಿತು. ಸಾಧಕರ ಮನೆಯ ನಮೂನೆಯಲ್ಲಿ ಈ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು; ಕಾರಣ ಸಾಧನೆಯನ್ನು ಮಾಡುತ್ತಿರುವುದರಿಂದ ಮನೆಯಲ್ಲಿರುವ ನಕಾರಾತ್ಮಕತೆ ಕಡಿಮೆಯಾಗುತ್ತದೆ. ಹಾಗೆಯೇ ಸಕಾರಾತ್ಮಕತೆಯಲ್ಲಿ ಹೆಚ್ಚಳವಾಗುತ್ತದೆ ಮತ್ತು ಹೊರಗಿನ ಸಕಾರಾತ್ಮಕತೆಯನ್ನು ಗ್ರಹಣ ಮಾಡುವ ಕ್ಷಮತೆಯೂ ವೃದ್ಧಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ. ಕ್ಲಾರ್ಕ್ ಅವರು ತಮ್ಮ ಮಾತನ್ನು ಮುಂದುವರಿಸಿ, ಯಜ್ಞದ ಪರಿಣಾಮ ಯಜ್ಞಸ್ಥಳದಿಂದ ನೂರಾರು ಕಿಲೋಮೀಟ‌ರ್ ದೂರವಿರುವ ಪ್ರದೇಶದ ಮೇಲೆಯೂ ಬೀರುತ್ತದೆ. ಇದು ಯಜ್ಞಸ್ಥಳದಿಂದ ವಿವಿಧ ಅಂತರದಿಂದ ತೆಗೆದುಕೊಂಡ ಮಾದರಿಯ ಪರೀಕ್ಷಣೆಯಲ್ಲಿ ಕಂಡು ಬರುತ್ತದೆ. ಇಷ್ಟೇ ಅಲ್ಲ, ಯಜ್ಞದ ಸಕಾರಾತ್ಮಕ ಪರಿಣಾಮ ಯಜ್ಞ ಪೂರ್ಣಗೊಂಡ ನಂತರ ಮುಂದಿನ ಕೆಲವು ಕಾಲಾವಧಿಯವರೆಗೆ ಸ್ಥಿರವಾಗಿರುತ್ತದೆ ಎಂದರು.