Monday, April 7, 2025
ಸುದ್ದಿ

ಬಾಹ್ಯ ಶಕ್ತಿಗಳು ಸಂಸ್ಥೆ,ಸಿಬ್ಬಂದಿ, ವಿಧ್ಯಾರ್ಥಿಗಳ ನಡುವೆ ಗೊಂದಲ ಸೃಷ್ಟಿಸುವುದು ಕಾನೂನು ಬಾಹಿರ ಡಾ. ಕೆ ವಿ ಚಿದಾನಂದ – ಕಹಳೆ ನ್ಯೂಸ್

ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿ ಎಂಬ ಹೆಸರಿನಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಕಾರ್ಯ ವ್ಯಾಪ್ತಿಯಲ್ಲಿ ಬರುವ ವಿದ್ಯಾ ಸಂಸ್ಥೆಗಳಲ್ಲಿ ಗೊಂದಲ ಉಂಟಾಗಿದೆ ಹಾಗೂ ವಿದ್ಯಾರ್ಥಿಗಳ, ಸಿಬ್ಬಂದಿ ವರ್ಗದಲ್ಲಿ ಅನಿಶ್ಚಿತತೆ ಹಾಗೂ ಸಿಬ್ಬಂದಿಗಳ ಸೇವಾ ಭದ್ರತೆಗೆ ದಕ್ಕೆ ಉಂಟಾಗಿದೆ ಎಂದು ಅಪಾದಿಸಿರುತ್ತಾರೆ ಆದರೆ ಇದು ಸತ್ಯಕ್ಕೆ ದೂರವಾದ ವಿಷಯವಾಗಿರುತ್ತದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಸಂಸ್ಥೆಯು ಕರ್ನಾಟಕ ಸೊಸೈಟಿ ಅಧಿನಿಯಮಗಳು 1960 ರ ಪ್ರಕಾರ ದಿ| ಡಾ| ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ಸಂಸ್ಥೆಯಾಗಿರುತ್ತದೆ. ಹಾಗೂ ನಿಯಮ ಪ್ರಕಾರ ಇದರ ಚಟುವಟಿಕೆಗಳು ನಿರಂತವಾಗಿ ಯಾವುದೇ ತೊಂದರೆಗಳಿಲ್ಲದೇ ಸಂಸ್ಥೆಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ ವಿನಾ ಕಾರಣ ಇತ್ತೀಚಿನ ದಿನಗಳಲ್ಲಿ ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿಯನ್ನು ರಚನೆ ಮಾಡಿಕೊಂಡು ಪತ್ರಿಕಾ ಗೋಷ್ಠಿ ಕರೆದು ಕುರುಂಜಿಯವರು ಸ್ಥಾಪಿಸಿದ ಸಂಸ್ಥೆಗಳ ಹೆಸರನ್ನು ಹಾಳು ಮಾಡಲು ಕೆಲವು ಬಾಹ್ಯ ಶಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಈ ತನಕ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಲಿ ಹಾಗೂ ಸಿಬ್ಬಂದಿಗಳಿಗಾಗಲಿ ಯಾವುದೇ ತೊಂದರೆಗಳು ಆಗಿರುವುದಿಲ್ಲ. ಆದರೆ ಇತ್ತೀಚೆಗೆ ಸಂಸ್ಥೆಗಳ ಆಡಳಿತ ಮಂಡಳಿಯ ವಿರುದ್ಧ ಅಶಿಸ್ತು ಮತ್ತು ಪಿತೂರಿ ನಡೆಸುತ್ತಿರುವ ಕೆಲವೊಂದು ಸಿಬ್ಬಂದಿಗಳನ್ನು ಆಡಳಿತಾತ್ಮಕ ದೃಷ್ಟಿಯಿಂದ ಅಮಾನತು ಗೊಳಿಸಲಾಗಿದೆ. ಈ ದಿನ ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ವೇದಿಕೆಯ ಎಂಬ ಹೆಸರಿನಲ್ಲಿ ನಡೆಸಿರುವ ಪತ್ರಿಕಾ ಗೋಷ್ಠಿಯು ಈಗಾಗಲೇ ಸಂಸ್ಥೆಯಿಂದ ಅಮಾನತುಗೊಂಡಿರುವ ವ್ಯಕ್ತಿಗಳನ್ನು ರಕ್ಷಣೆ ಮಾಡಲು ನೀಡಿರುವ ಪತ್ರಿಕಾ ಹೇಳಿಕೆಯಾಗಿರುತ್ತದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸಂಸ್ಥೆಯಲ್ಲಿ ಕೆಲವೊಂದು ವ್ಯಾಜ್ಯಗಳು ನ್ಯಾಯಾಲಯದಲ್ಲಿರುವುದರಿಂದ ಸಂಸ್ಥೆಗಳನ್ನು ಮುನ್ನಡೆಸಲು ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಸಿಬ್ಬಂದಿಗಳ ಹಿತ ರಕ್ಷಣೆಗೆ ಕಾನೂನು ಪ್ರಕಾರ ಕಾರ್ಯ ನಿರ್ವಹಿಸಿಕೊಂಡು ಬರಲಾಗುತ್ತಿದೆ ಇದು ನೋಂದಾಯಿತ ಸಂಸ್ಥೆಗೆ ಸಂಬಂಧ ಪಟ್ಟ ವಿಷಯವಾಗಿರುವುದರಿಂದ ಹೊರಗಿನವರು ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಈ ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ನಮ್ಮ ನೋಂದಾಯಿತ ಸಂಸ್ಥೆಯಡಿಯಲ್ಲಿ ನಡೆಯುವ ಸಂಸ್ಥೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗಲಿ ಹಾಗೂ ಗೊಂದಲಗಳಿರುವುದಿಲ್ಲ ಹಾಗೂ ಯಾವುದೇ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಗೊಂದಲ ಪಡುವ ಅವಶ್ಯಕತೆಗಳು ಇರುವುದಿಲ್ಲವೆಂದು ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.

ಅಂತಹ ಘಟನೆಗಳು ಮುಂದೆ ನಡೆದರೆ ಅದಕ್ಕೆ ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ವೇದಿಕೆಯು ಪತ್ರಿಕಾ ಗೋಷ್ಠಿಯ ಹೇಳಿಕೆಯಲ್ಲಿ ನೀಡಿರುವ ಹೇಳಿಕೆಗಳು ಕಾರಣವಾಗಬಹುದು ಎಂದು ಈ ಮೂಲಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಯ ಪಡಿಸುತ್ತಿದ್ದೇವೆ. ಅಲ್ಲದೇ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ ಅನಗತ್ಯ ಕಾನೂನು ಬಾಹಿರ ಹೋರಾಟದ ಕ್ರಮ ಕೈಗೊಂಡಲ್ಲಿ ಇದರ ವಿರುದ್ಧ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಆಡಳಿತ ಮಂಡಳಿಯು ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಉದ್ದೇಶಿತವಾಗಿರುವುದನ್ನು ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ