Wednesday, January 22, 2025
ಸುದ್ದಿ

ಅರ್ಕುಲ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜೀರ್ಣೋದ್ಧಾರಕ್ಕಾಗಿ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡ ರೂ.1ಲಕ್ಷ ಅನುದಾನದ ಚೆಕ್ ಹಸ್ತಾಂತರ – ಕಹಳೆ ನ್ಯೂಸ್

ಬಂಟ್ವಾಳ : ಅರ್ಕುಲ ಮೇರೆ ಮಜಲು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 1ಲಕ್ಷ ಅನುದಾನ ಮಂಜೂರು ಗೊಂಡಿದ್ದು ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಮಾದವ ಗೌಡ ಮಂದಿರದ ಕೆಲಸ ಶೀಘ್ರದಲ್ಲಿ ಪೂರ್ಣಗೊಂಡು ಗ್ರಾಮದ ಜನತೆಗೆ ಅನುಕೂಲಕರವಾಗುವಂತಾಗಲಿ ಎಂದು ಶುಭ ಹಾರೈಸಿ ಸಮಿತಿಯವರಿಗೆ ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಿದರು.

ಈ ಸಂದರ್ಭ ಬಿಲ್ಲವ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ತುಪ್ಪೆ ಕಲ್ಲು, ಗೌರವ ಅಧ್ಯಕ್ಷರಾದ ಸುಜಾತ ವಿಜಯಕುಮಾರ್ ಬಂಗುಳೆ, ತುಂಬೆ ವಲಯದ ಜನಜಾಗೃತಿ ವೇದಿಕೆಯ ಸದಸ್ಯರಾದ ಸದಾನಂದ ಆಳ್ವ ಕಂಪ, ಗಣ್ಯರಾದ ನಾಗರಾಜ್ ಶೆಟ್ಟಿ ಅರ್ಕುಲ, ತುಂಬೆ ವಲಯ ಮೇಲ್ವಿಚಾರಕಿ ಮಮತಾ, ಸೇವಾ ಪ್ರತಿನಿಧಿ ಅಮಿತಾ, ಒಕ್ಕೂಟದ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ತೇವು, ಬಿಲ್ಲವ ಸಂಘದ ಗೌರವ ಸಲಹೆಗಾರರು ನಾರಾಯಣ ಪೂಜಾರಿ ಕೊಪ್ಪಳ, ಮಾಜಿ ಉಪಾಧ್ಯಕ್ಷರು ರಂಜಿನಿ ಬಂಗುಳೆ ಹಾಗೂ ಪದಾಧಿಕಾರಿಗಳಾದ ಚೇತನ್ ಕೊಪ್ಪಳ ,ಹರೀಶ್ ಮೇರೆ ಮಜಲು, ದಿನೇಶ್ ಪಕ್ಕಲ್ ಪಾದೆ ,ಮಂಜುನಾಥ್ ತುಪ್ಪೆ ಕಲ್ಲು , ರಾಜೇಶ್ ಅರ್ಕುಲ ಬೈಲು, ಮೋನಪ್ಪ ಪೂಜಾರಿ ಅರ್ಕುಲ ಬೈಲು ,ಶಾಂತ ರಮೇಶ್ ಬಂಗುಳೆ, ಹನುಮಾನ್ ಸೇವಾ ಸಂಘದ ಉಪಾಧ್ಯಕ್ಷ ಗಣೇಶ್ ತುಪ್ಪೆ ಕಲ್ಲು ,ಪ್ರಭಾಕರ ಆಚಾರ್ಯ ತುಪ್ಪೆ ಕಲ್ಲು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು