Thursday, January 23, 2025
ಸುದ್ದಿ

ಮಗನ ಜೊತೆ ಬಿಸಿರೋಡಿನ ಕೈಕಂಬಕ್ಕೆ ಬಂದ ವೃದ್ಧ ವ್ಯಕ್ತಿ ನಾಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ಮಗನ ಜೊತೆ ಬಿಸಿರೋಡಿನ ಕೈಕಂಬಕ್ಕೆ ಬಂದ ವೃದ್ಧ ವ್ಯಕ್ತಿಯೋರ್ವರು ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾವಳಪಡೂರು ಗ್ರಾಮದ ವಗ್ಗ ಸಮೀಪದ ಕೆಲೆಂಜಿಕೋಡಿ ಮಾಂಗಜೆ ನಿವಾಸಿ ಜಾನ್ ವಾಸ (88) ಕಾಣೆಯಾದ ವ್ಯಕ್ತಿ. ಡಿ.6 ರಂದು ಮಗ ಲೆಸ್ಲಿ ಡಿ.ಸೋಜ ಅವರು ಅಡಿಕೆ ಮಾರಾಟ ಮಾಡುವ ಉದ್ದೇಶದಿಂದ ಬಿಸಿರೋಡಿನ ಕೈಕಂಬಕ್ಕೆ ಬಂದಿದ್ದು ಅವರ ಜೊತೆಯಲ್ಲಿ ಇವರ ತಂದೆಯವರನ್ನು ಕರೆದುಕೊಂಡು ಬಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಇವರ ಪರಿಚಯದ ದಿನಸಿ ಅಂಗಡಿಯೊAದರ ಮಾಲಕನ ಜೊತೆ ಮಾತನಾಡಿ ಬರುವುದಾಗಿ ಹೇಳಿ ಹೋಗಿದ್ದರು. ಅವರು ದಿನಸಿ ಅಂಗಡಿಯಲ್ಲಿ ನಿಲ್ಲುವಂತೆ ತಿಳಿಸಿ ಇವರ ಮಗ ಬಂಟ್ವಾಳ ಪೇಟೆಗೆ ಕೆಲಸದ ನಿಮಿತ್ತ ತೆರಳಿದ್ದರು. ಅಲ್ಲಿ ಕೆಲಸ ಮುಗಿಸಿ ವಾಪಸು ಕೈಕಂಬಕ್ಕೆ ಬಂದು ನೋಡಿದಾಗ ಅವರು ಅಂಗಡಿಯಲ್ಲಿರದೆ ಕಾಣೆಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಮನೆಗೆ ತೆರಳಿಬಹುದು ಎಂದು ಮನೆಗೆ ಹೋಗಿ ವಿಚಾರಿಸಿದಾಗ ಅಲ್ಲಿಯೂ ಇರದೆ ಕಾಣೆಯಾಗಿದ್ದರು ಎಂದು ಮಗಳು ಜೆಸಿಂತಾ ವಾಸ್ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಜಾನ್ ವಾಸ್ ಅವರಿಗೆ ಕಣ್ಣು ಸ್ವಲ್ಪ ಮಟ್ಟಿಗೆ ಕಾಣಿಸುತ್ತಿರಲಿಲ್ಲ, ಜೊತೆಗೆ ಬಸ್ ಹತ್ತಿ ಹೋಗುವಷ್ಡು ಶಕ್ತಿವಂತರಲ್ಲ, ಸುಮಾರು 5.8 ಅಡಿ ಎತ್ತರವಾಗಿದ್ದಾರೆ, ಕಪ್ಪು ಮೈ ಬಣ್ಣ, ಸಪೂರ ದೇಹ,ಕೋಲು ಮುಖ ಹೊಂದಿದ್ದು ಗಡ್ಡ ಇರುವುದಿಲ್ಲ, ನೀಲಿ ಮತ್ತು ಬಿಳಿ ಬಣ್ಣದ ಗೆರೆಗಳಿರುವ ಅಂಗಿ ಹಾಕಿದ್ದು, ಕನ್ನಡ ತುಳು ಕೊಂಕಣಿ ಭಾಷೆ ಗೊತ್ತಿದೆ. ಇವರ ಚಹರೆ ಕಂಡು ಬಂದಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ.