Thursday, January 23, 2025
ಸುದ್ದಿ

ತಾಲೂಕು ಮಟ್ಟದ ಶಾಂತಿವನ ಟ್ರಸ್ಟ್ ಸ್ಪರ್ಧೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿಗಳು – ಕಹಳೆ ನ್ಯೂಸ್

ಪುತ್ತೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಪುತ್ತೂರು ತಾಲೂಕು ಮಟ್ಟದ ಜ್ಞಾನಶರಧಿ/ ಜ್ಞಾನವಾರಿಧಿ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಸಹಯೋಗದಲ್ಲಿ ನಡೆಯಿತು.

ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ. ಎಸ್(ಶ್ರೀ ಸಂತೋμï ಕುಮಾರ್ ಮತ್ತು ಶ್ರೀಮತಿ ಸೌಮ್ಯಶ್ರೀ ಪಿ ಡಿ) ಭಾಷಣ ಪ್ರಥಮ, ಆಧ್ಯನ್. ಆರ್( ಶ್ರೀ ಎ ರಂಜಿತ್ ಮತ್ತು ಶ್ರೀಮತಿ ವತ್ಸಲ ) ಚಿತ್ರಕಲೆ ಪ್ರಥಮ, ಅನನ್ಯ ಎನ್(ಶ್ರೀ ನವೀನ್ ಚಂದ್ರ ಗೌಡ ಹಾಗೂ ಶ್ರೀಮತಿ ಸವಿತಾ ಎನ್) ಪ್ರಬಂಧ ದ್ವಿತೀಯ, ನಾಗಭೂಷಣ ಕಿಣಿ ( ಶ್ರೀ ನಾಗರಾಜ್ ಕಿಣಿ ಹಾಗೂ ಶ್ರೀಮತಿ ನಮ್ರತಾ ಕಿಣಿ) ಶ್ಲೋಕ ಕಂಠಪಾಠ ದ್ವಿತೀಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಅಮೋಘ ಕೃಷ್ಣ. ಕೆ (ಶ್ರೀ ಬಾಲಕೃಷ್ಣ ಭಟ್ ಹಾಗೂ ಶ್ರೀಮತಿ ಸುಮಿತ್ರ ಕೆ)ಶ್ಲೋಕ ಕಂಠಪಾಠ ಪ್ರಥಮ ಹಾಗೂ ನಿಲಿಷ್ಕ. ಕೆ ( ಶ್ರೀ ದಿನೇಶ್ ನಾಯ್ಕ ಕೆ ಜಿ ಹಾಗೂ ಶ್ರೀಮತಿ ಸ್ಮಿತಾ ಶ್ರೀ ಬಿ) ಚಿತ್ರಕಲೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು