Thursday, January 23, 2025
ಸುದ್ದಿ

ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಹೊಸತಾಗಿ ನೇಮಕರಾದ ಉಪನ್ಯಾಸಕರಿಗಾಗಿ ನಡೆದ ಶೈಕ್ಷಣಿಕ ಕಾರ್ಯಾಗಾರ : ಉತ್ತಮ ವ್ಯಕ್ತಿ ನಿರ್ಮಾಣಕ್ಕೆ ಶಿಕ್ಷಕರೇ ಅಡಿಪಾಯ : ಡಾ.ಶ್ರೀಪತಿ ಕಲ್ಲೂರಾಯ- ಕಹಳೆ ನ್ಯೂಸ್

ಪುತ್ತೂರು : ವ್ಯಕ್ತಿಯೊಬ್ಬನ ನಡತೆ ನುಡಿ, ಆಚಾರ-ವಿಚಾರಗಳ ಮೂಲವೇ ಶಿಕ್ಷಣ. ಶಿಕ್ಷಣದಿಂದಲೇ ಆತನ ಒಳಿತು ಕೆಡುಕುಗಳ ನಿರ್ಧಾರವಾಗುತ್ತದೆ. ಇದನ್ನು ತಿಳಿಸುವರು ಶಿಕ್ಷಕರಾಗಿರುತ್ತಾರೆ. ಉತ್ತಮ ಶಿಕ್ಷಕನಾಗಲು ಬರವಣಿಗೆ ಕೌಶಲ್ಯ, ಉತ್ತಮ ಆಲಿಸುವಿಕೆ, ಒಳ್ಳೆಯ ಸಂವಹನ, ಶಿಕ್ಷಣದಲ್ಲಿ ಅಪಾರ ಪ್ರೀತಿ ಹಾಗೂ ಪ್ರತಿಯೊಬ್ಬರನ್ನು ಗೌರವಿಸುವ ಗುಣವಿರಬೇಕು. ವಿದ್ಯಾರ್ಥಿಗಳು ಕಷ್ಟಕ್ಕೆ ಸ್ಪಂದಿಸಿ ಆತನಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಒಬ್ಬ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ತಿಳಿಸಿದರು.

ಇವರು ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ವಾಣಿಜ್ಯ (ಸ್ವಾಯತ್ತ)ಮಹಾವಿದ್ಯಾಲಯ ಇಲ್ಲಿನ ಐಕ್ಯೂಎಸಿ ಘಟಕದಿಂದ ಆಯೋಜಿಸಿದ ಹೊಸತಾಗಿ ನೇಮಕರಾದ ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಆಯೋಜಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ, ವಿವೇಕಾನಂದ ಸಂಸ್ಥೆಯು ದೇಶವನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಈ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಮಾಡುತ್ತಾರೆ ಎಂದು ಸಂಸ್ಥೆಯ ಇತಿಹಾಸದ ಬಗ್ಗೆ ಉಪನ್ಯಾಸಕರಿಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜಿನ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಎಚ್. ಜಿ ಶ್ರೀಧರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್.ಎಸ್ ನಿರ್ವಹಿಸಿದರು.