Thursday, January 23, 2025
ಸುದ್ದಿ

ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ಉಡುಪಿಯ 8 ವರ್ಷದ ಕಂದಮ್ಮ ಜಿ| ಅತುಲ್ ನ ಚಿಕಿತ್ಸೆಗೆ ಸಹಾಯ ಹಸ್ತದ ಮನವಿ – ಕಹಳೆ ನ್ಯೂಸ್

ಉಡುಪಿ ಜಿಲ್ಲೆಯ ಮುಂಡನಿಡಂಬೂರು ಶ್ರೀಮತಿ ಪರಿಮಳ ಮತ್ತು ಹರೀಶ್ ಶೆಟ್ಟಿಗಾರ್ ದಂಪತಿಗಳ ಪುತ್ರ 8 ವರ್ಷದ ಕಂದಮ್ಮ ಜಿ| ಅತುಲ್ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಬಡಕುಟುಂಬ ಇದೀಗ ಸಹೃದಯದಾನಿಗಳ ನಿರೀಕ್ಷೆಯಲ್ಲಿದೆ.

ಅತುಲ್ ಗೆ ಆನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ರಕ್ತ ಕ್ಯಾನ್ಸರ್ ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸ್ಥಳೀಯ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕಿತ್ಸೆಗೆ ಸರಿ ಸುಮಾರು ರೂ.8ಲಕ್ಷ ವೆಚ್ಚ ತಗಲಲಿದೆ ಎಂದು ವೈದ್ಯರು ತಿಳಿಸಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಬಡಕುಟುಂಬ ಇದೀಗ ಆರ್ಥಿಕ ಸಹಕಾರದ ನಿರೀಕ್ಷೆಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುಟ್ಟ ಕಂದಮ್ಮನ ಜೀವ ಉಳಿಸಲು ಕುಟುಂಬದೊಂದಿಗೆ ನಾವೆಲ್ಲರೂ ಕೈ ಜೋಡಿಸೋಣ. ನೆರವು ನೀಡಲು ಇಚ್ಛಿಸುವ ದಾನಿಗಳು ಹರೀಶ್ ಶೆಟ್ಟಿಗಾರ್ ಅವರ ಖಾತೆಗೆ ಹಣವನ್ನು ಜಮೆ ಮಾಡಬಹುದಾಗಿದೆ.
ಖಾತೆಯ ವಿವರ
ಖಾತೆ ಹೆಸರು : ಹರೀಶ್ ಶೆಟ್ಟಿಗಾರ್
ಖಾತೆ ಸಂಖ್ಯೆ : 02322180013089
IFSC Code : CNRB0010232
ಬ್ಯಾಂಕ್ : ಕೆನರಾ ಬ್ಯಾಂಕ್
ದೂರವಾಣಿ : 9844616388