Sunday, November 24, 2024
ಸುದ್ದಿ

ಮಗನ ಜೊತೆಯಲ್ಲಿ ಪೇಟೆಗೆ ಬಂದು ಕಾಣೆಯಾಗಿದ್ದ ವೃದ್ಧನನ್ನು ಪತ್ತೆ ಹಚ್ಚಿದ ಬಂಟ್ವಾಳ ಪೊಲೀಸರು – ಕಹಳೆ ನ್ಯೂಸ್

ಬಂಟ್ವಾಳ: ಮಗನ ಜೊತೆಯಲ್ಲಿ ಪೇಟೆಗೆ ಬಂದು ಕಾಣೆಯಾಗಿದ್ದ ವೃದ್ದರೋರ್ವರನ್ನು ಪತ್ತೆ ಹಚ್ಚಿದ ಪೋಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ.

ಕಾವಳ ಪಡೂರು ಗ್ರಾಮದ ವಗ್ಗ ಸಮೀಪದ ಕೆಲೆಂಜಕೋಡಿ ಮಾಂಗಜೆ ನಿವಾಸಿ ಜಾನ್ ವಾಸ್ (88) ಕಾಣೆಯಾಗಿದ್ದ ವ್ಯಕ್ತಿ. ಅವರನ್ನು ಗೋರೆಮಾರ್ ಗುಡ್ಡವೊಂದರಲ್ಲಿ ಪತ್ತೆ ಹಚ್ಚಿದ ಪೋಲೀಸರು ಬಳಿಕ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಡಿಕೆ ಮಾರಟ ಮಾಡುವ ಉದ್ದೇಶದಿಂದ ಪೇಟೆಗೆ ಬಂದ ಮಗನ ಜೊತೆಗೆ ಬಂದಿದ್ದ ವೃದ್ದ ಜಾನ್ ವಾಸ್ ಅವರು ಡಿ.6 ರಂದು ಬಿಸಿರೋಡಿನ ಕೈಕಂಬ ಎಂಬಲ್ಲಿಂದ ಕಾಣೆಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಇವರ ಪತ್ತೆಗಾಗಿ ಮನೆಯವರು ಪೋಲೀಸರಿಗೆ ದೂರು ನೀಡಿ ಮನವಿ ಮಾಡಿಕೊಂಡಿದ್ದರು. ಇವರ ದೂರಿನಂತೆ ಬಂಟ್ವಾಳ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಇರ್ಶಾದ್ ಅವರು ಬಿಸಿರೋಡಿನ ಸುತ್ತಮುತ್ತಲು ಸ್ಚತಃ ಕಾರಿನ ಮೂಲಕ ನಿನ್ನೆಯಿಂದ ಹುಡುಕಾಟ ನಡೆಸಿ ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಾಣೆಯಾದ ಜಾನ್ ವಾಸ್ ಅವರ ಪತ್ತೆಗಾಗಿ ಗುರುವಾರ ಸಂಜೆಯಿಂದ ಇವರು ನಿರಂತರವಾಗಿ ಹುಡುಕಾಟ ನಡೆಸಿದ್ದರು. ಇಂದು ಸಂಜೆ ವೇಳೆ ಗೋರೆಮಾರ್ ಗುಡ್ಡವೊಂದರಲ್ಲಿ ಇವರು ಇರುವ ಬಗ್ಗೆ ಮಾಹಿತಿ ಲಭ್ಯವಾಗಿ ಅವರನ್ನು ಕುಟುಂಬದ ಕೈಗೆ ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆಯಿಂದ ಹೊಟ್ಟೆಗೆ ಊಟವಿಲ್ಲದೆ ಕೊಳಕು ಬಟ್ಟೆಯಲ್ಲಿದ್ದ ಜಾನ್ ವಾಸ್ ಅವರಿಗೆ ತಿನ್ನಲು ಆಹಾರ ನೀಡಿ, ಬಟ್ಟೆಯನ್ನು ಬದಲಾವಣೆ ಮಾಡಿದ ಪೋಲೀಸರು ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ಪತ್ತೆ ಹಚ್ಚಿದ ಕೂಡಲೇ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ರಾಜೇಶ್ ಮತ್ತು ಇರ್ಶಾದ್ ಅವರ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.