Thursday, January 23, 2025
ಸುದ್ದಿ

6.77 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಏಳು ಕಡೆ ಬೃಹತ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ : ಪುದು ಗ್ರಾಮದ ಜನರ ಸಮಗ್ರ ಕುಡಿಯುವ ನೀರಿನ ಯೋಜನೆಯ ಕನಸು ನನಸು ಮಾಡಿದ ಶಾಸಕ ಯು.ಟಿ.ಖಾದರ್: ಉಮರ್ ಫಾರೂಕ್ – ಕಹಳೆ ನ್ಯೂಸ್

ಬಂಟ್ವಾಳ : ಪುದು ಗ್ರಾಮದ ಜನರ ಹಲವು ವರ್ಷಗಳ ಬೇಡಿಕೆಯಾಗಿರುವ ಮನೆ ಮನೆಗೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕನಸು ಮಂಗಳೂರು ವಿಧಾನಸಾಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರ ಪರಿಶ್ರಮದಿಂದ ಇಂದು ನನಸಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು.

ಜಲ ಜೀವನ್ ಮಿಶನ್ ಯೋಜನೆಯಡಿ 6 ಕೋಟಿ 77 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮನೆ ಮನೆಗೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಯೋಜನೆಯಡಿ ಪುದು ಗ್ರಾಮದ ಅಮ್ಮೆಮ್ಮಾರ್, ಪುಂಚಮೆ, ಫರಂಗಿಪೇಟೆ, ಪೇರಿಮಾರ್, ಕುಂಪನಮಜಲು, ನೆತ್ತರಕೆರೆ ಮತ್ತು ಸುಜೀರ್‌ನಲ್ಲಿ ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು. 1 ಲಕ್ಷ ಲೀಟರ್ ಸಾಮರ್ಥ್ಯದ 1 ಟ್ಯಾಂಕ್, 50 ಸಾವಿರ ಲೀಟರ್ ಸಾಮರ್ಥ್ಯದ 5 ಟ್ಯಾಂಕ್, 50 ಸಾವಿರ ಲೀಟರ್ ಸಾಮರ್ಥ್ಯದ 1 ಜಿ.ಎಲ್.ಎಸ್.ಆರ್ ಟ್ಯಾಂಕ್ ನಿರ್ಮಾಣವಾಗಲಿದೆ. ಈ ಟ್ಯಾಂಕ್‌ಗಳಿAದ ಪುದು ಗ್ರಾಮದ ಪ್ರತೀಯೊಂದು ಮನೆಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಉಮರ್ ಫಾರೂಕ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ಯಾಂಕ್ ಮತ್ತು ಮನೆ ಮನೆಗೆ ನಲ್ಲಿ ಸಂಪರ್ಕದ ಕಾಮಗಾರಿ ಆದಷ್ಟು ಬೇಗ ಮುಕ್ತಾಯಗೊಂಡು ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಶಾಸಕ ಯು.ಟಿ.ಖಾದರ್ ಅವರ ಮುತುವರ್ಜಿಯಿಂದ ಈ ಯೋಜನೆ ಗ್ರಾಮದಲ್ಲಿ ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂದು ಹೇಳಿದರು.

ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಸಮಗ್ರ ಕುಡಿಯುವ ನೀರಿನ ಯೋಜನೆ ಪುದು ಗ್ರಾಮದ ಹಲವು ವರ್ಷಗಳ ಬೇಡಿಕೆಯಾಗಿದೆ. ಅದನ್ನು ಶಾಸಕ ಯು.ಟಿ.ಖಾದರ್ ನನಸು ಮಾಡಿಕೊಟ್ಟಿದ್ದು, ಇಂದು ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಟ್ಯಾಂಕ್ ನಿರ್ಮಾಣಕ್ಕೆ ಅಮ್ಮೆಮ್ಮಾರ್‌ನಲ್ಲಿ ತನ್ನ ಸ್ವಂತ ಜಾಗವನ್ನು ನೀಡಿರುವ ಉದಾರ ಮನಸ್ಸಿನ ಅಬೂಸಾಲಿ ಅವರನ್ನು ಪಂಚಾಯತ್ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಮಾಜಿ ಸದಸ್ಯ ಭಾಸ್ಕರ್ ರೈ ಮಾತನಾಡಿ, ಅಭಿವೃದ್ಧಿಯಲ್ಲಿ ಪುದು ಗ್ರಾಮದ ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಮದ ಅಭಿವೃದ್ಧಿಗೆ ಶಾಸಕ ಯು.ಟಿ.ಖಾದರ್ ನೀಡಿರುವ ಕೊಡುಗೆ ಅಪಾರವಾಗಿದೆ. ಇದೀಗ ಗ್ರಾಮದ ಪ್ರತೀಯೊಂದು ಮನೆಗೆ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಅನುದಾನ ಒದಗಿಸಿಕೊಟ್ಟಿದ್ದಾರೆ. ಇದಕ್ಕಾಗಿ ಗ್ರಾಮದ ಜನತೆ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಸದಸ್ಯರಾದ ಲಿಡಿಯಾ ಪಿಂಟೊ, ಮುಮ್ತಾಝ್, ವಿಷು ಕುಮಾರ್, ರಝಾಕ್ ಅಮ್ಮೆಮ್ಮಾರ್, ಅನಸ್, ನಫೀಸ, ಶಾಫಿ, ರುಕ್ಷಾನ, ಸಾರಮ್ಮ, ಇಶಾಮ್ ಫರಂಗಿಪೇಟೆ, ಜೈ ಭಾರತ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹನೀಫ್ ಮಲ್ಲಿಗೆ, ಪ್ರಮುಖರಾದ ಬದ್ರುದ್ದೀನ್ ಕರ್ಮಾರ್, ಹನೀಫ್ ಗೋಳಿಕಟ್ಟೆ, ಶಿವಪ್ಪ ಅಂಚನ್, ಇಮ್ರಾನ್ ಅಮ್ಮೆಮಾರ್, ನಿಝಾಮ್, ಗುತ್ತಿಗೆದಾರ ಕೆ.ಕೆ.ಅಬೂಬಕ್ಕರ್, ಎಂಜಿನಿಯರ್ ರವಿ, ಪಿ.ಡಿ.ಒ. ಹರೀಶ್ ಕೆ. ಮೊದಲಾದವರು ಉಪಸ್ಥಿತರಿದ್ದರು.