Recent Posts

Monday, January 20, 2025
ಕ್ರೀಡೆಸುದ್ದಿ

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಸವಾಲು – ಕಹಳೆ ನ್ಯೂಸ್

ಡೆನ್ಮಾರ್ಕ್: ಒಲಿಂಪಿಕ್ ಪದಕ ವಿಜೇತೆಯರಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್, ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಸಿಂಧುಗೆ 3ನೇ ಶ್ರೇಯಾಂಕ ಸಿಕ್ಕಿದ್ದು, ಸೈನಾ ಶ್ರೇಯಾಂಕ ರಹಿತವಾಗಿ ಆಡಲಿದ್ದಾರೆ. ಮೊದಲ ಸುತ್ತಿನಲ್ಲಿ ಸಿಂಧು ಅಮೆರಿಕದ ಬೀವೆನ್ ಝಾಂಗ್ ವಿರುದ್ಧ ಆಡಲಿದ್ದಾರೆ. ವಿಶ್ವ ನಂ.11 ಸೈನಾಗೆ ಮೊದಲ ಸುತ್ತಲ್ಲಿ ಹಾಂಕಾಂಗ್‌ನ ಚೆಯುಂಗ್ ಯಿ ಎದುರಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.6 ಕಿದಂಬಿ ಶ್ರೀಕಾಂತ್‌ಗೆ 7ನೇ ಶ್ರೇಯಾಂಕ ದೊರೆತಿದೆ. ಶ್ರೀಕಾಂತ್ ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್‌ನ ಹಾನ್ಸ್ -ಕ್ರಿಸ್ಟಿಯನ್‌ರನ್ನು ಎದುರಿಸಲಿದ್ದಾರೆ. ಸಾಯಿ ಪ್ರಣೀತ್‌ಗೆ ಮೊದಲ ಸುತ್ತಿನಲ್ಲಿ ಚೀನಾದ ಹುವಾಂಗ್ ಯುಕ್ಸಿಯಾಂಗ್ ಎದುರಾದರೆ, ಸಮೀತ್ ವರ್ಮಾ ಹಾಗೂ ಎಚ್.ಎಸ್.ಪ್ರಣಯ್‌ಗೆ ಕಠಿಣ ಸವಾಲು ಎದುರಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ಸುತ್ತಿನಲ್ಲೇ ಪ್ರಣೀತ್‌ಗೆ 3ನೇ ಶ್ರೇಯಾಂಕಿತ ಚೀನಾದ ಶೀ ಯೂಕಿ ಎದುರಾದರೆ, ಪ್ರಣಯ್ 6ನೇ ಶ್ರೇಯಾಂಕಿತ ಕೊರಿಯಾದ ಸೊನ್ ವಾನ್ ಹೋ ವಿರುದ್ಧ ಸೆಣಸಲಿದ್ದಾರೆ. ಆಯಮ್‌ಸ್ಟರ್ಡ್ಯಾಮ್‌ನಲ್ಲಿ ಪಾಸ್ ಪೋರ್ಟ್ ಕಳೆದುಕೊಂಡು ಭಾರತ ಸರ್ಕಾರದ ನೆರವು ಕೋರಿದ ಪಾರುಪಳ್ಳಿ ಕಶ್ಯಪ್, ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯುತ್ತಿಲ್ಲ.

ಪುರುಷರ ಡಬಲ್ಸ್‌ನಲ್ಲಿ ಮನುಅತ್ರಿ-ಸುಮಿತ್ ರೆಡ್ಡಿ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ, ಸಾತ್ವಿಕ್ ಸಾಯಿರಾಜ್ ಜತೆ ಕಣಕ್ಕಿಳಿದರೆ ಮಹಿಳಾ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಜತೆ ಆಡಲಿದ್ದಾರೆ.