Thursday, January 23, 2025
ಸುದ್ದಿ

ಕರ್ನಾಟಕ ಸೇರಿ ದೇಶದ ಹಲವೆಡೆ ಎನ್.ಐ.ಎ ದಾಳಿ – ಕಹಳೆ ನ್ಯೂಸ್

ಬೆಂಗಳೂರು : ಐಸಿಸ್ ಭಯೋತ್ಪಾದನೆ ಮಾಡ್ಯೂಲ್ ಪ್ರಕರಣದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶನಿವಾರ ಬೆಳ್ಳಂಬೆಳಗ್ಗೆ ರಾಜಧಾನಿ ಬೆಂಗಳೂರಿನ ಪ್ರೇಜರ್ ಟೌನ್‌ನ ಮೋರ್ ರಸ್ತೆಯಲ್ಲಿ ದಾಳಿ ನಡೆಸಿ ಎನ್‌ಐಎ ಪರಿಶೀಲನೆ ಕೈಗೊಂಡಿದೆ. ಐಸಿಸ್ ಉಗ್ರರ ಜೊತೆ ಸಂಪರ್ಕದಲ್ಲಿರುವ ಹಾಗೂ ವಾಸವಾಗಿರುವ ಶಂಕೆ ಹಿನ್ನೆಲೆ ಈ ದಾಳಿ ನಡೆದಿದೆ.
ಮಹಾರಾಷ್ಟ್ರದಲ್ಲಿ ಥಾಣೆ, ಪುಣೆ, ಮೀರಾ ಭಯಂದರ್ ಸೇರಿದಂತೆ ೪೪ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಥಾಣೆ ಗ್ರಾಮಾಂತರದಲ್ಲಿ ೩೧, ಥಾಣೆ ನಗರದಲ್ಲಿ ೯ ಕಡೆ ಶೋಧ ನಡೆದಿದೆ. ಪುಣೆಯಲ್ಲಿ ಎರಡು ಮತ್ತು ಮೀರಾ ಭಯಂದರ್‌ನಲ್ಲಿ ಒಂದು ಕಡೆ ದಾಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಾಳಿ ವೇಳೆ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಐಸಿಸ್ ಐಡಿಯಾಲಜಿಯನ್ನು ಭಾರತದಲ್ಲಿ ಹರಡುವ ಉದ್ದೇಶದಿಂದ ಮ್ಯಾಡ್ಯೂಲ್‌ಗಳನ್ನು ಮಾಡಿಕೊಂಡು ಪಿತೂರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗೆ ಸಿಕ್ಕಿದೆ ಎನ್ನಲಾಗಿದೆ.