Wednesday, January 22, 2025
ಸುದ್ದಿ

ಹಠಾತ್ ಆಗಿ ನಿಧನರಾದ ಬಂಟ್ವಾಳದ ಅಂಗನವಾಡಿ ಶಿಕ್ಷಕಿ – ಕಹಳೆ ನ್ಯೂಸ್

ಬಂಟ್ವಾಳ: ಅಂಗನವಾಡಿ ಶಿಕ್ಷಕಿಯೋರ್ವರು ಹಠಾತ್ ಆಗಿ ನಿಧನರಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದ ಶಿಕ್ಷಕಿ, ಇಲ್ಲಿನ ಉಪ್ಪುಗುಡ್ಡೆ ನಿವಾಸಿ ಪ್ರೇಮಾ ಟೀಚರ್ (52) ಹಠಾತ್ ಅನಾರೋಗ್ಯದಿಂದ ಶನಿವಾರ ಮಧ್ಯರಾತ್ರಿ ವೇಳೆಗೆ ನಿಧನರಾಗಿದ್ದಾರೆ.

ಶನಿವಾರ ರಾತ್ರಿ ಅವರಿಗೆ ಹಠಾತ್ ಆಗಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು