Thursday, January 23, 2025
ಸುದ್ದಿ

ರಾಂಚಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಒಡೆತನದ ಸ್ಥಳಗಳಿಗೆ ಐಟಿ ದಾಳಿ : ಇನ್ನೂ ಮುಗಿಯದ ನೋಟು ಎಣಿಕೆ ಕಾರ್ಯ- ಕಹಳೆ ನ್ಯೂಸ್

ಒಡಿಶಾ ಮತ್ತು ರಾಂಚಿಯಲ್ಲಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಒಡೆತನದ ಸ್ಥಳಗಳು ಮತ್ತು ಡಿಸ್ಟಿಲರಿಗಳು, ಸಂಬಂಧಿತ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೆ 300 ಕೋಟಿ ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ.

ನಾಲ್ಕನೇ ದಿನವಾದ ಶನಿವಾರವೂ ದಾಳಿ ಮುಂದುವರಿದಿದ್ದು, ಇನ್ನಷ್ಟು ನಗದು ವಶಪಡಿಸಿಕೊಳ್ಳುವ ನಿರೀಕ್ಷೆಯಿದೆ. ನೋಟು ಎಣಿಸುವ ಕಾರ್ಯ ಇನ್ನೆರಡು ದಿನ ನಡೆಯಲಿದೆ. ಚಿನ್ನಾಭರಣವೂ ಸೇರಿ ಈ ಮೊತ್ತ 500 ಕೋಟಿ ರೂ.ಗೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಐಟಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಖರ್ಂಡ್, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿರುವ ಒಡಿಶಾ ಮೂಲದ ಡಿಸ್ಟಿಲರಿ ಗ್ರೂಪ್ ಗಳ ಕಚೇರಿಗಳಲ್ಲಿ ಈ ದೊಡ್ಡ ಮೊತ್ತ ಪತ್ತೆಯಾಗಿದೆ. ಬೌದ್ ಡಿಸ್ಟಿಲರಿ, ಅದರ ಅಂಗಸಂಸ್ಥೆ ಬಲದೇವ್ ಸಾಹು ಇನ್ನಾ, ಮತ್ತು ಡಿಸ್ಟಿಲರಿ ಒಡೆತನದ ಅಕ್ಕಿ ಗಿರಣಿಯಲ್ಲಿ ಶನಿವಾರ ಶೋಧ ನಡೆಸಲಾಯಿತು. ಪತ್ತೆಯಾಗಿರುವ ನೋಟುಗಳನ್ನು ಎಣಿಸಲು ಆದಾಯ ತೆರಿಗೆ ಇಲಾಖೆಯು 40ಕ್ಕೂ ಅಧಿಕ ದೊಡ್ಡ ಮತ್ತು ಸಣ್ಣ ಯಂತ್ರಗಳನ್ನು ಬಳಸುತ್ತಿದೆ. ಎಣಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಲಾಖೆ ಮತ್ತು ಬ್ಯಾಂಕ್‍ಗಳ ಹೆಚ್ಚಿನ ಉದ್ಯೋಗಿಗಳನ್ನು ಕರೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಲಂಗೀರ್ ಜಿಲ್ಲೆಯ ವಿವಿಧೆಡೆ 100ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು50ಮಂದಿ ಹಣ ಎಣಿಕೆ ಮಾಡುತ್ತಿದ್ದಾರೆ. ವಶಪಡಿಸಿಕೊಂಡ 176 ಚೀಲಗಳ ಪೈಕಿ ಕೇವಲ 40 ಚೀಲಗಳ ಎಣಿಕೆಯಷ್ಟೇ ಮುಗಿಸಿದ್ದು, ಉಳಿದವುಗಳನ್ನು ಎಣಿಕೆ ಮಾಡಲಾಗುತ್ತಿದೆ. ವಶಪಡಿಸಿಕೊಂಡ ಹಣವನ್ನು ರಾಜ್ಯ ಸರ್ಕಾರಿ ಬ್ಯಾಂಕ್ ಗಳಿಗೆ ಸಾಗಿಸಲು ಹೆಚ್ಚಿನ ವಾಹನಗಳನ್ನು ಇಲಾಖೆಯು ಕೇಳಿದೆ ಎಂದು ಬಲಂಗೀರ್ ಎಸ್‍ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ತಿಳಿಸಿದ್ದಾರೆ.

ದೇಶದಲ್ಲೇ ಒಂದೇ ಕಾರ್ಯಾಚರಣೆಯಲ್ಲಿ ಇಷ್ಟೊಂದು ಅಕ್ರಮ ನಗದು ಮೊದಲ ಬಾರಿ ವಶಪಡಿಸಿಕೊಳ್ಳಲಾಗಿದೆ. ನಗದು ಮಾತ್ರವಲ್ಲದೇ ದಾಳಿಯಲ್ಲಿ 3 ಸೂಟ್‍ಕೇಸ್‍ನಷ್ಟು ಚಿನ್ನಾಭರಣ ಪತ್ತೆಯಾಗಿದೆ. ಬಲಂಗೀರ್ ಜಿಲ್ಲೆಯ ಕಂಪನಿಯಲ್ಲಿ ಇರಿಸಲಾಗಿದ್ದ 8-10 ಕಪಾಟುಗಳಿಂದ ಸುಮಾರು 230 ಕೋಟಿ ರೂಪಾಯಿ ನಗದನ್ನು ವಶಪಡಿಸಿ ಕೊಳ್ಳಲಾಗಿದ್ದು, ಉಳಿದವುಗಳನ್ನು ತಿಲ್ಲಗಡ್, ಸಂಬಲ್ಪುರ್ ಮತ್ತು ರಾಂಚಿಯ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ