Thursday, January 23, 2025
ಸುದ್ದಿ

ಡಾಮರು ಕಳ್ಳತನದ ಜಾಲ ಪತ್ತೆ ಹಚ್ಚಿ ಲಕ್ಷಾಂತರ ಮೌಲ್ಯದ ಸೊತ್ತುಗಳ ಸಹಿತ ಆರೋಪಿಗಳನ್ನು ಬಂಧಿಸಿದÀ ಬಂಟ್ವಾಳ ಗ್ರಾಮಾಂತರ ಪೋಲೀಸರು – ಕಹಳೆ ನ್ಯೂಸ್

ಬಂಟ್ವಾಳ: ಡಾಮರು ಕಳ್ಳತನದ ಜಾಲವನ್ನು ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಪೋಲೀಸರ ತಂಡ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳ ಸಹಿತ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ಅಕ್ರಮವಾಗಿ ಡಾಮರು ಕಳ್ಳತನ ನಡೆಯುತ್ತಿದ್ದು, ಪೋಲೀಸರು ದಾಳಿ ನಡೆಸಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜಯಕುಮಾರ್ ಶೆಟ್ಟಿ, ಸುಧಾಕರ್ ಶೆಟ್ಟಿ, ಮಹಮ್ಮದ್ ಇಮ್ರಾನ್, ಅಶ್ರಫ್ ಎಮ್, ವಿರೇಂದ್ರ ಎಸ್. ಆರ್, ಮಾದಸ್ವಾಮಿ, ಪ್ರಭಾಕರನ್, ನವೀನ್ ಕುಮಾರ್ ಎಂ.ಜಿ, ಮಹಮ್ಮದ್ ನಿಸಾರ್, ಮಹಮ್ಮದ್ ಸಿಯಾಬುದ್ದೀನ್ ಎಂಬವರು ಬಂಧಿತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರಿಂದ ಸುಮಾರು 64ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಡಾಮರು , 6 ಲಾರಿ ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ತೂಕ ಮಾಪನ, ಡಾಮರು ಬಿಸಿಮಾಡಲು ಉಪಯೋಗಿಸಿದ ಗ್ಯಾಸ್ ಸಿಲಿಂಡರ್, ಡಾಂಬರ್ ತುಂಬಿಸುವ ಕಬ್ಬಿಣದ ಟ್ಯಾಂಕ್, 9 ಮೊಬೈಲ್, ಹೀಗೆ ಅನೇಕ ಸೊತ್ತುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಕಡೇಶಿವಾಲಯದ ಅಮೈ ಎಂಬಲ್ಲಿ ಬಾಡಿಗೆಗೆ ಜಾಗ ಖರೀದಿ ಮಾಡಿ ಅಲ್ಲಿ ಅಕ್ರಮ ವ್ಯವಹಾರ ನಡೆಸಲಾಗುತ್ತಿತ್ತು. ಮಂಗಳೂರಿನಿಂದ ಡಾಮರು ಲೋಡ್ ಮಾಡಿಕೊಂಡು ಬರುವ ಲಾರಿಗಳು ಅಮೈಗೆ ಬರುತ್ತದೆ. ಅಲ್ಲಿ ಅಕ್ರಮವಾಗಿ ಡಾಮರುನ್ನು ಬೇರೆ ಲಾರಿಗಳಿಗೆ ವರ್ಗಾವಣೆ ಮಾಡಿ ಮಾರಾಟ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿ ಪೋಲೀಸರು ದಾಳಿ ನಡೆಸಿದ್ದರು. ಕಳವು ,ಮೋಸ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.