Thursday, January 23, 2025
ಸುದ್ದಿ

ಬಲ್ನಾಡಿಗೆ ಆಗಮಿಸಿದ ಪ್ರಭು ಶ್ರೀರಾಮಚಂದ್ರನ ಪವಿತ್ರ ಮಂತ್ರಾಕ್ಷತೆ – ಕಹಳೆ ನ್ಯೂಸ್

ಪುತ್ತೂರು : ಶ್ರೀರಾಮ ಜನ್ಮಭೂಮಿ ಟ್ರಸ್ಟ್ (ರಿ.) ಇದರ ವತಿಯಿಂದ ಆಯೋಧ್ಯೆಯ ಶ್ರೀರಾಮ ದೇವರ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಹಾಗೂ ಮನೆ ಮನೆಗೆ ಮಂತ್ರಾಕ್ಷತೆ ಕಾರ್ಯಕ್ರಮವು ನಿನ್ನೆ ಬಲ್ನಾಡಿನಲ್ಲಿ ನಡೆಯಿತು.

ದಾರಿಯುದ್ಧಕ್ಕೂ ಕಲಶ ಹಿಡಿದ ಮಹಿಳೆಯರು, ಚೆಂಡೆ ವಾದ್ಯದ ಮೂಲಕ ಭವ್ಯ ಶೋಭಾಯಾತ್ರೆಯ ಮೂಲಕ ಬಲ್ನಾಡಿನ ಶ್ರೀ ಭಟ್ಟಿ ವಿನಾಯಕ ದೇವಸ್ಥಾನಕ್ಕೆ ಆಗಮಿಸಿದ ಮಂತ್ರಾಕ್ಷತೆಗೆ ದೇವಸ್ಥಾನದ ಅರ್ಚಕರು ಹಾಗೂ ಊರಿನ ಸಮಸ್ತರ ಸಮ್ಮುಖದಲ್ಲಿ ಪೂಜೆ ನಡೆಸಲಾಯಿತು. ಇನ್ನು ಜ.01ರಿಂದ ಊರಿನ ಎಲ್ಲಾ ಮನೆಗಳಿಗೆ ಪವಿತ್ರ ಮಂತ್ರಾಕ್ಷತೆಯ ಹಂಚಿಕೆ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಊರಿನ ಸಮಸ್ತ ಹಿಂಊ ಭಾಮದವರು ಹಾಗೂ ವಿನಯಕ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು