Recent Posts

Monday, January 20, 2025
ಸುದ್ದಿ

ಬಸ್ಸು – ಬೊಲೆರೋ ಮುಖಾಮುಖಿ ಡಿಕ್ಕಿ : ಒರ್ವ ಸಾವು, ಇಬ್ಬರ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಕಾರ್ಕಳ : ಬಸ್ಸು – ಬೊಲೆರೋ ಡಿಕ್ಕಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಮ್ರತಪಟ್ಟು ಇಬ್ಬರ ಸ್ಥಿತಿ ಗಂಬೀರಗೊಂಡು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ನಂದಳಿಕೆ ಕಡೆಯಿಂದ ಬರುತ್ತಿದ್ದ ಬೋಲೆರೊ ಕಾರು ಕಾರ್ಕಳ ಕಡೆಯಿಂದ ಬರುತ್ತಿದ್ದ ಮುಂಬೈ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕಮಗಳೂರು ಜಿಲ್ಲೆಯ ಜಯಪುರ ನಿವಾಸಿ ಶಿವಪ್ಪ 48 ಸ್ಥಳದಲ್ಲೇ ಮೃತಪಟ್ಟರೆ, ಮಂಜು 45 , ಸುಜಯ 28 ರವರ ಸ್ಥಿತಿ ಗಂಭೀರ ವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಕಳ ತಾಲೂಕಿನ ನಂದಳಿಕೆಯ ತಮ್ಮ ಕುಟುಂಬದ ಮನೆಗೆ ದೇವರ ಕಾರ್ಯಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಜಯಪುರದಿಂದ ನಂದಳಿಕೆಗೆ ಬೆಳಿಗ್ಗೆ ಬಂದಿದ್ದ ಕುಟುಂಬದ ಸದಸ್ಯರು ಮನೆಯಲ್ಲಿ ಪೂಜೆ ಮುಗಿಸಿ ಮಧ್ಯಾಹ್ನದ ಭೋಜನ ಮುಗಿಸಿ ಹಿಂದಿರುವ ಸಂಧರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಮೃತರಾದ ಕುಟುಂಬ ಗುರಿಕಾರ ಶಿವಪ್ಪನವರೇ ಮುಂದೆ ನಿಂತು ದೈವದ ಕೆಲಸದ ವಿಧಿವಿಧಾನಗಳನ್ನು ನಡೆಸಿಕೊಟ್ಟಿದ್ದರು ಎಂದು‌ ತಿಳಿದು ಬಂದಿದೆ.

ಬಸ್ಸಿನಲ್ಲಿದ್ದ 12 ಮಂದಿ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಅಗಮಿಸಿದ 108 ಆಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದರು.