Monday, January 20, 2025
ಸುದ್ದಿ

ಬಂಟ್ವಾಳ: ಸರಣಿ ಕಳ್ಳತನ : ಖದೀಮನಿಗೆ ಬಲೆ ಬೀಸಿದ ಬಂಟ್ವಾಳ ಪೊಲೀಸರು – ಕಹಳೆ ನ್ಯೂಸ್

ಬಂಟ್ವಾಳ: ಸರಣಿ ಅಂಗಡಿಗೆ ನುಗ್ಗಿ ಕಳವು ಮಾಡಿದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ಬಿ.ಸಿ.ರೋಡಿನ ಕೈಕಂಬದಲ್ಲಿ ಒಟ್ಟು 12 ಅಂಗಡಿಗಳಿಗೆ ಕಳ್ಳನೋರ್ವ ನುಗ್ಗಿ ಜಾಲಾಡಿ ಬಳಿಕ ಮೂರು ಅಂಗಡಿಗಳಿಗೆ ನುಗ್ಗಿದ್ದಾನೆ. ಇದರಲ್ಲಿ ಮೂರು ಅಂಗಡಿಗಳಿಂದ ಸುಮಾರು 61 ಸಾವಿರ ರೂ ಕಳವು ಮಾಡಿದ್ದಾನೆ.

ಡಿಶ್ ಟಿ.ವಿ.ರಿಚಾರ್ಜ್ ಅಂಗಡಿಯೊಂದರಲ್ಲಿ ಇಡಲಾಗಿದ್ದ ಸುಮಾರು 52 ಸಾವಿರ ನಗದು, ಸಾಯಿ ಲೀಲಾ ಹೋಟೆಲ್ ನ 6 ಸಾವಿರ ಹಾಗೂ ಇನ್ನೊಂದು ಅಂಗಡಿಯಿಂದ 3 ಸಾವಿರ ರೂ ನಗದು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಕಳ್ಳರು ಇಲ್ಲಿನ ಹೊಟೇಲ್, ಸಹಕಾರಿ ಸಂಘಗಳ ಕಚೇರಿ ಸಹಿತ ಮತ್ತಿತರ ಅಂಗಡಿಗಳಿಗೆ ನುಗ್ಗಿ ಜಾಲಾಡಿವಾಪಸು ಹೋಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ ವೇಳೆ ಭಾರಿ ಮಳೆ ಇದ್ದು, ಕಳ್ಳ ಇದೇ ಸಮಯವನ್ನು ಬಂಡವಾಳವಾಗಿಸಿಕೊಂಡು ಕಳವು ಮಾಡಿರಬೇಕು ಎಂದು ಹೇಳಲಾಗಿದೆ. ಕಳ್ಳ ನೋರ್ವ ಬೈಕಿನಲ್ಲಿ ಬಂದು ಅಬಳಿಕ ಹೆಲ್ಮಟ್ ಧರಿಸಿ ಅಂಗಡಿಗಳಿಗೆ ನುಗ್ಗಿದ ಬಗ್ಗೆ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ. ಬಂಟ್ವಾಳ ನಗರ ಠಾಣಾ ಪೆÇೀಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳ ನಿಗಾಗಿ ಬಲೆ ಬೀಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು