Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ” ಬುರ್ಖಾ ತೆಗೆದು ಬನ್ನಿ’ ಸೂಚನ ಫಲಕ : ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಫಲಕ ತೆರವು – ಕಹಳೆ ನ್ಯೂಸ್

ಪುತ್ತೂರು : ತಾಲೂಕು ಆಸ್ಪತ್ರೆಯಲ್ಲಿ “ಬುರ್ಕಾ ತೆಗೆದು ಬನ್ನಿ’ ಎಂಬ ಸೂಚನ ಫಲಕ ವಿವಾದಕ್ಕೀಡಾದ ಮತ್ತು ಸಾಮಾಜಿಕ ಜಾಲತಾಣದಲ್ಲೂ ಭಾರೀ ಚರ್ಚೆಯ ಬಳಿಕ ಸೂಚನ ಫಲಕವನ್ನು ತೆರವುಗೊಳಿಸಿದ ವಿದ್ಯಮಾನ ನಡೆದಿದೆ.

ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳ ಇಸಿಜಿ ತೆಗೆಯುವ ರೂಮ್‌ ಬಾಗಿಲಿನಲ್ಲಿ ಈ ಫಲಕ ಅಳವಡಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಒಂದು ವರ್ಷಗಳ ಹಿಂದೆ ಈ ಫಲಕ ಅಳವಡಿಸಲಾಗಿತ್ತು. ಯಾರೋ ಒಬ್ಬರು ಈ ಸೂಚನ ಫಲಕ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಚರ್ಚೆಗೆ ಕಾರಣವಾಯಿತು. ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಆಸ್ಪತ್ರೆಯವರು ಸೂಚನ ಫಲಕ ತೆರವುಗೊಳಿಸಿದ್ದಾರೆ.