Recent Posts

Monday, January 20, 2025
ಸುದ್ದಿ

ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ: ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ತಾಲೂಕಿನ ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ ಜಿಲ್ಲೆಯ ರಾಜಕೀಯ ಧುರೀಣರ ಕಣ್ಣು ಇತ್ತ ಹಾಯಿಸುವಂತೆ ಮಾಡಿದೆ. ಕಾಂಗ್ರೇಸ್ ಪಕ್ಷದಡಿಯಲ್ಲಿ ಸ್ಪರ್ಧೆ ಮಾಡಿ ಬಳಿಕ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದ ಪ್ರಭಾಕರ ಪ್ರಭು ಅವರ ತೆರವಾದ ಸ್ಥಾನಕ್ಕೆ ಈ ಚುನಾವಣೆ .ಆ.28 ರಂದು ನಡೆಯಲಿದೆ.

ಕಾಂಗ್ರೆಸ್‌ನಿಂದ ಬಿಲ್ಲವ ಸಮುದಾಯದ ದಿನೇಶ್ ಸುಂದರ್ ಶಾಂತಿಯವರನ್ನು ಪ್ರಭು ಅವರಿಗೆ ಎದುರಾಳಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಕಣಕ್ಕಿಳಿಸಿದ್ದು ಎರಡು ಅಭ್ಯರ್ಥಿಗಳು ಸಾಮಾರ್ಥ್ಯ ಸೌಧದ ಕಛೇರಿಯಲ್ಲಿ ಚುನಾವಣಾಧಿಕಾರಿ ನಾರಾಯಣ ಶೆಟ್ಟಿ, ಹಾಗೂ ಸಹಾಯಕ ಚುನಾವಣಾಧಿಕಾರಿ ಲಕ್ಷಣ್ ಅವರಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ಅಭ್ಯರ್ಥಿಗಳಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಯಾವುದಕ್ಕೂ ಫಲಿತಾಂಶ ಬರುವವರೆಗೂ ಕಾಯಬೇಕಾಗಿದೆ.