Sunday, January 19, 2025
ದಕ್ಷಿಣ ಕನ್ನಡರಾಜ್ಯಸುದ್ದಿಸುಬ್ರಹ್ಮಣ್ಯಸುಳ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ (ಡಿ. 12) ಇಂದು ಲಕ್ಷದೀಪೋತ್ಸವ, ಕುಣಿತ ಭಜನೆ ; ಚಂದ್ರಮಂಡಲ ರಥೋತ್ಸವದ ಬಳಿಕ ಬೀದಿ ಉರುಳು ಸೇವೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಡಿ. 12ರಂದು ಲಕ್ಷದೀಪೋತ್ಸವ, ಕುಣಿತ ಭಜನೆ ಜರಗಲಿದೆ.

ರವಿವಾರ ಕೊಪ್ಪರಿಗೆ ಏರುವ ಮೂಲಕ ಈ ವರ್ಷದ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದ್ದು, ಅಂದು ರಾತ್ರಿ ಮತ್ತು ಸೋಮವಾರ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ. 12ರಂದು ರಾತ್ರಿ ಕಾಚುಕುಜುಂಬ ದೈವದಿಂದ ಶ್ರೀ ದೇವರ ಭೇಟಿಯ ಬಳಿಕ ಪಂಚಶಿಖರವನ್ನೊಳಗೊಂಡ ಚಂದ್ರ ಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಲಿದೆ.

ರಥಬೀದಿಯಿಂದ ಕಾಶಿಕಟ್ಟೆ ವರೆಗೆ ಲಕ್ಷ ಹಣತೆಗಳನ್ನು ಬೆಳಗಲಾಗುತ್ತದೆ. ಸವಾರಿ ಮಂಟಪದಲ್ಲಿ ಕ್ಷೇತ್ರದ ದೈವ ಹೊಸಳಿಗಮ್ಮನ ದೈವದರ್ಶನ ಮತ್ತು ನರ್ತನ ಸೇವೆ ನಡೆಯಲಿದೆ. ಕಾಶಿಕಟ್ಟೆಗೆ ಆಗಮಿಸುವ ದೇವರಿಗೆ ಮಹಾಗಣಪತಿ ಸನ್ನಿಧಾನದಲ್ಲಿ ಗುರ್ಜಿ ಪೂಜೆ ಜರಗಲಿದೆ. ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿಯಲ್ಲಿ ಕುಣಿತ ಭಜನ ಸಂಭ್ರಮ ನಡೆಯಲಿದೆ. ಮೈಸೂರು ರಾಮಚಂದ್ರ ಆಚಾರ್‌ ಮತ್ತು ತಂಡದವರು ಭಜನೆ ಕಾರ್ಯ ಕ್ರಮ ನಡೆಸಿಕೊಡಲಿದ್ದಾರೆ.

ಇಂದಿನಿಂದ ಉರುಳು ಸೇವೆ
ಡಿ. 12ರಂದು ಲಕ್ಷದೀಪೋತ್ಸವ ಚಂದ್ರಮಂಡಲ ರಥೋತ್ಸವದ ಬಳಿಕ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸುತ್ತಾರೆ. ಸ್ವಯಂ ಸ್ಫೂರ್ತಿಯಿಂದ ಈ ಸಾಂಪ್ರದಾಯಿಕ ಸೇವೆಯನ್ನು ಭಕ್ತರು ಚಂಪಾಷಷ್ಠಿ ಮಹಾರಥೋತ್ಸವ ವರೆಗೆ ನೆರವೇರಿಸುತ್ತಾರೆ.

ಬೀದಿ ಉರುಳು ಸೇವೆ ಸಾಗುವ ಕುಮಾರಧಾರಾ ಬಳಿಯಿಂದ ರಸ್ತೆಯ ಒಂದು ಬದಿಯನ್ನು ಈಗಾಗಲೇ ಸ್ವತ್ಛಗೊಳಿಸಿ ಪೂರಕ ವ್ಯವಸ್ಥೆ ಕಲ್ಪಿಸ ಲಾಗಿದೆ. ಉರುಳು ಸೇವೆ ಸಾಗುವ ಬದಿಯಲ್ಲಿ ವಾಹನ ಸಂಚಾರ ತಡೆಹಿಡಿಯಲಾಗಿದೆ.