Recent Posts

Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ರಿಷಬ್‌ ಶೆಟ್ಟಿ ʼಕಾಂತಾರ ಪ್ರೀಕ್ವೆಲ್‌ʼನಲ್ಲಿ ನಟಿಸಬೇಕೇ ? ಇಲ್ಲಿದೆ ಅವಕಾಶ – ಕಹಳೆ ನ್ಯೂಸ್

ಬೆಂಗಳೂರು: ರಿಷಬ್‌ ಶೆಟ್ಟಿ ಅವರ ʼಕಾಂತಾರ ಪ್ರೀಕ್ವೆಲ್‌ʼ ಸಿನಿಮಾದ ಮುಹೂರ್ತ ಹಾಗೂ ಫಸ್ಟ್‌ ಲುಕ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ಫಸ್ಟ್‌ ಲುಕ್‌ ಗೆ ದೊಡ್ಡಮಟ್ಟದ ರೆಸ್ಪಾನ್ಸ್‌ ವ್ಯಕ್ತವಾಗಿದೆ.

ತುಳುನಾಡಿನ ದೈವ ಹಾಗೂ ಆಚರಣೆ ಸುತ್ತ ಸಾಗಿದ ʼಕಾಂತಾರʼ ಕನ್ನಡದಲ್ಲಿ ಹಿಟ್‌ ಆಗಿ, ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್‌ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಉತ್ಸಾಹದಲ್ಲಿ ಚಿತ್ರತಂಡ ಸಿನಿಮಾದ ಪ್ರೀಕ್ವೆಲ್‌ ಅಂದರೆ ಮೊದಲ ಭಾಗವನ್ನು ತರುವುದಾಗಿ ರಿಷಬ್‌ ಶೆಟ್ಟಿ ಹೇಳಿದ್ದರು. ಅದರಂತೆ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ನ.27 ರಂದುನೆರವೇರಿತ್ತು. ಇದರೊಂದಿಗೆ ಸಿನಿಮಾದ ಫಸ್ಟ್‌ ಲುಕ್‌ ಕೂಡ ರಿಲೀಸ್‌ ಆಗಿತ್ತು.

“ಸದ್ಯಕ್ಕೆ ನಾನೇ ಹೀರೋ, ನಾಯಕಿ ಹಾಗೂ ಇತರ ಪಾತ್ರದ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ಇರಲಿದೆ. ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ ನಡೆಯುತ್ತಿದೆ. ಕರಾವಳಿ ಹಾಗೂ ಇತರೆ ಭಾಗದ ಕಲಾವಿದರು ಕೂಡ ಇರಲಿದ್ದಾರೆ” ಎಂದು ರಿಷಬ್‌ ಶೆಟ್ಟಿ ಹೇಳಿದ್ದರು.

ಅದರಂತೆ ʼಕಾಂತಾರʼ ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ಹೇಳಿದೆ.

ಸಿನಿಮಾದಲ್ಲಿ ನಟಿಸಲು 30 ರಿಂದ 60 ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. ಇನ್ನು 18 ರಿಂದ 60ರ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ ಎಂದು ರಿಷಬ್‌ ಶೆಟ್ಟಿ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ನೋಂದಣಿಗಾಗಿ Kantara.film ಲಿಂಕ್‌ ಒತ್ತಿ ತಮ್ಮ ಪ್ರತಿಭೆಯನ್ನು ತೋರಿಸಬಹುದು. ರೀಲ್ಸ್‌ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಹೇಳಿದೆ.

ಡಿ.14 ರವರೆಗೆ ಲಿಂಖ್ ಚಾಲ್ತಿಯಲ್ಲಿರುತ್ತದೆ.

ʼಕಾಂತಾರʼ ಪ್ರೀಕ್ವೆಲ್‌ ನಲ್ಲಿ ಪಂಜುರ್ಲಿ ದೈವದ ಮೂಲ ಹಾಗೂ ಹುಟ್ಟಿನ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 301-400 ಕಾಲದ ಕಥೆ ಇರಲಿದೆ ಎನ್ನಲಾಗಿದೆ.

ʼಕಾಂತಾರʼ ಪ್ರೀಕ್ವೆಲ್ ಈ ಬಾರಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲೀಷ್‌ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಬೇಸಿಗೆಯಲ್ಲಿ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.