ಬಂಟ್ವಾಳ ; ಅಕ್ರಮ ದನಗಳ ಸಾಗಟ ಪ್ರಕರಣ ; ಆರೋಪಿಗಳನ್ನು ಬಂಧಿಸಿದ ಬಂಟ್ವಾಳ ನಗರ ಠಾಣಾ ಎಸ್ .ಐ.ರಾಮಕೃಷ್ಣ ನೇತ್ರತ್ವದ ತಂಡ – ಕಹಳೆ ನ್ಯೂಸ್
ಬಂಟ್ವಾಳ ; ದನಗಳನ್ನು ಕದ್ದು ತಂದು ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ತುಂಬಿಸಿ ವದೆ ಮಾಡಲು ಕೊಂಡು ಹೋಗುವ ವೇಳೆ ಮಿಂಚಿನ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್ .ಐ.ರಾಮಕೃಷ್ಣ ನೇತ್ರತ್ವದ ತಂಡ ದನಗಳನ್ನು ಜಕ್ರಿಬೆಟ್ಟು ಎಂಬಲ್ಲಿ ರಕ್ಷಣೆ ಮಾಡಿದ್ದು, ಪರಾರಿಯಾಗಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.
ಲೊರೆಟ್ಟೊಪದವು ಸಮೀಪದ ಟಿಪ್ಪು ನಗರ ಎಂಬಲ್ಲಿAದ ಕಾರನ್ನು ಬೆನ್ನಟ್ಟಿದ ಪೋಲೀಸರು ದನಗಳ ಸಹಿತ ಆರೋಪಿಳನ್ನು ವಶಪಡಿಸಿಕೊಂಡಿದ್ದಾರೆ.ಓಮ್ನಿ ಕಾರಿನಲ್ಲಿ ಐದು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೈ ಕಾಲು ಕಟ್ಟಿ ತುಂಬಿಸಲಾಗಿತ್ತು.
ಜಾಬೀರ್ ಮತ್ತು ನಾಸೀರ್ ಎಂಬವರು ಕಾರು ಬಿಟ್ಟು ಪರಾರಿಯಾಗಲು ಯತ್ನಿಸಿ ಕೊನೆಗೂ ಪೋಲೀಸರ ಆತಿಥಿಯಾಗಿದ್ದಾನೆ.ಎಸ್. ಐ.ರಾಮಕೃಷ್ಣ ಅವರು ರೌಂಡ್ಸ್ ನಲ್ಲಿ ದ್ದ ವೇಳೆ ಓಮ್ನಿ ಕಾರೊಂದರ ಮೇಲೆ ಸಂಶಯಗೊAಡು ಬೆನ್ನು ಬಿದ್ದಾಗ ಅತೀ ವೇಗದೊಂದಿಗೆ ಕಾರು ಹೋಗುವುದು ಕಂಡು ಬಂತು.ಎಸ್.ಐ.ಅವರ ಸಂಶಯ ಬಲಗೊಂಡು ಲೊರೆಟ್ಟೊಪದವಿನಿಂದ ಬೆನ್ನಟ್ಟಿದಾಗ ಕಾರು ಜಕ್ರಿಬೆಟ್ಟು ಕಡೆಗೆ ಹೋಗಿ ಕಾರನ್ನು ಅಲ್ಲೇ ಬಿಟ್ಟು ಚಾಲಕ ಮತ್ತು ಕಾರಿನಲ್ಲಿದ್ದ ಇನ್ನೋರ್ವ ಪರಾರಿಯಾಗಲು ಯತ್ನಿಸಿ ವಿಫಲಾರಾಗಿದ್ದಾರೆ.
ಇಬ್ಬರು ಕೂಡ ಈ ಹಿಂದೆ ದನ ಕಳವು ಪ್ರಕರಣದ ಪ್ರಮುಖ ಆರೋಪಿಗಳೆಂದು ತಿಳಿದು ಬಂದಿದೆ.
ವಶಪಡಿಸಿಕೊಂಡ ವಾಹನ ಹಾಗೂ ಐದು ದನಗಳು ಠಾಣೆಯಲ್ಲಿ ಇದ್ದು, ನ್ಯಾಯಾಲಯದ ಅದೇಶ ಪಡೆದುಕೊಂಡು ಗೋ ಶಾಲೆಗೆ ಕಳುಹಿಸಕೊಡಲಾಗುವುದು.ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.