ಬಿ.ಸಿ.ರೋಡ್ : ಬೃಹತ್ ಶಿವಲಿಂಗ ನಿರ್ಮಾಣ, ಓಂಕಾರ ನಿರ್ಮಾಣ, ಸ್ವಸ್ತಿಕ್ ನಿರ್ಮಾಣ, ತೀರ್ಥ ಸ್ಥಾನವಾದ ಗೃಹ ತೀರ್ಥದ ಸುತ್ತಲೂ ಹಣತೆ, ನೂರಾರು ಮೆಟ್ಟಿಲುಗಳ ಇಕ್ಕೆಲಗಳಲ್ಲಿಯೂ ನಾಲ್ಕು ಹಂತದಲ್ಲಿ ಹಣತೆ, ಭೀಮನ ಪಾದ, ಕಡಿದಾದ ಗುಡ್ಡಪ್ರದೇಶ ದಾರಿಯಲ್ಲೂ ಹಣತೆ ಹೀಗೆ ಎಕ್ರೆಗಟ್ಟಲೆ ವಿಸ್ತೀರ್ಣದಲ್ಲಿ ಸಾಲು ಸಾಲು ಲಕ್ಷ ಹಣತೆ ಉರಿಸುವ ಸಂಭ್ರಮದ ನಡುವೆ ಬೆಳಕಿನಲ್ಲಿ ಕಂಗೊಳಿಸಲಿದೆ ಮಹತೋಭಾರ ಶ್ರೀ ಕಾರಿಂಜೇಶ್ವರ ಕ್ಷೇತ್ರ.
ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದಲ್ಲಿರುವ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಮವಾಸ್ಯೆ ಡಿ.12ರಂದು (ಇಂದು) ನಡೆಯುವ ಈ ವರ್ಷ ಲಕ್ಷದೀಪೋತ್ಸವಕ್ಕೆ ಹತ್ತೂರ ಗ್ರಾಮಸ್ಥರು ಲಕ್ಷ ದೀಪ ಉರಿಸಿ ಕೈಲಾಸದ ಮರುಸೃಷ್ಟಿ ಇಲ್ಲಿ ಆಗಲಿದೆ. ಹಾಗಂತ ಲಕ್ಷ ಹಣತೆ, ಬತ್ತಿ, ಎಣ್ಣೆ ಯಾವುದೇ ಓರ್ವ ವ್ಯಕ್ತಿಯ ಕೊಡುಗೆಯಾಗಿ ಸಹಕಾರದಿಂದಲ್ಲ, ಶ್ರೀ ಕ್ಷೇತ್ರದ ಸಮಿತಿಯಿಂದಲೂ ಅಲ್ಲ. ಒಂದು ಲಕ್ಷ ಹಣತೆಗೆ ಬೇಕಾಗುವಷ್ಟು ದೀಪದೆಣ್ಣೆ, ಬತ್ತಿ ಹಾಗೂ ಮಣ್ಣಿನ ಹಣತೆ ಸ್ಥಳೀಯ ಸಂಘ ಸಂಸ್ಥೆಗಳು, ಗ್ರಾಮದ ಮನೆ ಮನೆಯವರು ತಂದು, ಹಣತೆ ಉರಿಸಿ ಜಿಲ್ಲೆಯಲ್ಲೇ ಮೊದಲು ಎಂದು ಕೀರ್ತಿ ಬರಲಿದೆ.
ಕಳೆದ ಹಲವಾರು ವರ್ಷಗಳಿಂದ ಲಕ್ಷದೀಪೋತ್ಸವಕ್ಕೆ 200-300 ಹಣತೆ ಹಚ್ಚಿ ಲಕ್ಷದೀಪೋತ್ಸವ ಆಚರಿಸುತ್ತಿದ್ದು, ಲಕ್ಷ ದೀಪ ಉರಿಸುವ ಆಲೋಚನೆ 2021ರಲ್ಲಿ ಹಮ್ಮಿಕೊಂಡಿದ್ದು 2021ರಲ್ಲಿ ಹದಿನೇಳು ಸಾವಿರ ಹಣತೆಗಳು ಸಂಗ್ರಹವಾಗಿರುತ್ತದೆ. 2023ರಂದು ಮೂವತ್ತೆ‘ದು ಸಾವಿರ ಸಂಗ್ರಹವಾಗಿ ಐವತ್ತು ಸಾವಿರಕ್ಕೂ ಹೆಚ್ಚು ಹಣತೆಗಳನ್ನು ಉರಿಸಲಾಗಿತ್ತು. 2023ಕ್ಕೆ ಲಕ್ಷಕ್ಕಿಂತಲೂ ಅಕ ಹಣತೆಗಳಿಂದ ಪಾರ್ವತಿ ಕ್ಷೇತ್ರ, ಪರಮೇಶ್ವರ ಕ್ಷೇತ್ರ, ಗದಾಕೆರೆಯ ಸುತ್ತಲೂ ಮೆಟ್ಟಿಲುಗಳುಗಳಲ್ಲಿ ಉರಿಯಲಿದ್ದು, ಕೈ‘ಲಾಸದ ಮರುಸೃಷ್ಟಿ ಎಂಬಂತೆ ಕೆ‘ಲಾಸದಲ್ಲಿರುವ ಚಿತ್ರಣವನ್ನು ಹಣತೆಯ ಮೂಲಕವೇ ಚಿತ್ರಿಸಿ ‘ಭಕ್ತಾದಿಗಳ ಮನಸೂರೆಗೊಳ್ಳುವಂತಹ ದೃಶ್ಯವನ್ನು ಸೃಷ್ಟಿಸಲಿದ್ದಾರೆ.
ತುಲಾಭಾರ ಸೇವೆ ವಿಶೇಷ : ಶ್ರೀ ಕ್ಷೇತ್ರ ಕಾರಿಂಜದಲ್ಲಿ ವಿವಿಧ ರೀತಿಯ ಹರಕೆ ಸೇವೆಗಳು ನಡೆಯುತ್ತಿದ್ದು ಅದರಲ್ಲಿ ತುಲಾಭಾರವೂ ಒಂದು. ಮಹಾಶಿವರಾತ್ರಿಯ ದಿನ ಮಾತ್ರ ತುಲಾಭಾರ ಸೇವೆ ನಡೆಯುತ್ತಿದ್ದು, ಆ ದಿನ ರಾತ್ರಿಯಿಂದ ಹಗಲಿನವರೆಗೆ ಸೇವೆ ನಡೆದು ಮತ್ತೂ ಹರಕೆ ಉಳಿಯುತ್ತಿದ್ದವು. ಹಾಗಾಗಿ ಈಗ ಲಕ್ಷದೀಪದ ಸಂದರ್ಭದ ವೂ ಈ ತುಲಾಭಾರ ಸೇವೆಯನ್ನು ನಡೆಸುತ್ತಾ ಬರುತ್ತಿದ್ದು ಅದೂ ಒಂದು ವಿಶೇಷತೆಯಾಗಿದೆ.