ಸುಬ್ರಹ್ಮಣ್ಯ : ಕಾವೇರಿ ವಸತಿ ಗೃಹಕ್ಕೆ ಡಿ.9 ರಂದು ಮೈಸೂರು ಭಾಗದ ಯಾತ್ರಾರ್ಥಿಗಳು ಬಂದಿದ್ದು ಡಿ.10 ರಂದು ತೆರಳಿದ್ದರು. ಲಾಡ್ಜ್ ಮಾಲಕ. ನಾಣಯ್ಯ ಏ. ಕೆ. ಅವರಿಗೆ ಖಾಲಿ ಮಾಡಿ ಹೋಗಿದ್ದ ರೂಮ್ ನಲ್ಲಿ 5 ಲಕ್ಷ ಬೆಳೆ ಬಾಲುವ
ಮಾಂಗಲ್ಯ ಸರ ದೊರಕಿದ್ದು ಅವರು ಅದನ್ನು ಪ್ರಾಮಾಣಿಕತೆಯಿಂದ ಸುಬ್ರಹ್ಮಣ್ಯ ಠಾಣೆ ಮುಖಾಂತರ ವಾರಸುದಾರರ ಮಂಜುನಾಥ ಅವರಿಗೆ ಹಸ್ತಾಂತರಿಸಿದ್ದಾರೆ. ಸರ ಮಂಜುನಾಥ್ ಅವರ ಪತ್ನಿಯದ್ದಾಗಿತ್ತು. ಸರ ಹಸ್ತಾಂತರ ಸಂದರ್ಭ ಎಸ್ ಐ ಕಾರ್ತಿಕ್, ನಿವೃತ್ತ ಪ್ರಾಧ್ಯಾಪಕ ತಿಲಕ್ ಎ ಎ, ಮಹೇಶ್ ಕೂರ್ಗ್ ಉಪಸ್ಥಿತರಿದ್ದರು.