ಪುತ್ತೂರು: ನಿನ್ನೆ ರಾತ್ರಿ 2 ಗಂಟೆಯ ವೇಳೆ ಪುತ್ತೂರಿನ ನಾರಾಯಣ ಭಟ್ ಎಂಬವರ ಮನೆಯ ಮೇಲೆ ಕಚ್ಛಾ ಬಾಂಬ್ ಬ್ಲಾಸ್ಟ್ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಪುತ್ತೂರಿನ ನಗರದ ನಿವಾಸಿಯಾದ ನಾರಾಯಣ ಭಟ್ ರವರ ಮನೆಯ ಮೇಲೆ ನಡೆಸಿದ ಬಾಂಬ್ ಬ್ಲಾಸ್ಟ್ ನಿಂದಾಗಿ ಅವರ ಪತ್ನಿ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು ಈ ಹಿಂದೆ ಮುರದ ಜುಮ್ಮಾ ಮಸೀದಿ ಕಮಿಟಿ ಹಾಗೂ ನಾರಾಯಣ್ ಭಟ್ ರವರ ನಡುವೆ ಜಾಗದ ವಿಚಾರದಲ್ಲಿ ನಡೆದ ಮುಸುಕಿನ ಗುದ್ದಾಟಗಳೇ ಈ ಘಟನೆಗೆ ಕಾರಣ ಹಾಗೂ ಕಾಣದ ಕೈಗಳ ಶಂಕೆ ಇದೆ ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಸೂಕ್ತವಾದ ಪೊಲೀಸ್ ತನಿಖೆ ನಡೆಯಬೇಕೆಂದು ಕಬಕ ಗ್ರಾಮ ಪಂಚಾಯತ್ ಸದಸ್ಯ ವಿನಯ್ ಹೇಳಿಕೆ ನೀಡಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೊಂದೆಡೆ ಘಟನೆಯ ಕುರಿತು ಇತರ ಮೂಲಗಳಿಂದ ನಡೆಸುವ ಕೃತ್ಯದ ಶಂಕೆಯನ್ನು ಸ್ಥಳೀಯರಾದ ಇರ್ಶಾದ್ ಹೇಳಿಕೆ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಡಿ.ವೈ.ಎಸ್.ಪಿ, ಎ.ಸಿ.ಪಿ, ಮತ್ತು ಪುತ್ತೂರು ನಗರ ಠಾಣಾಧಿಕಾರಿ , ವೃತ್ತ ನಿರೀಕ್ಷರು ಬೀಡು ಬಿಟ್ಟಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗಿದೆ.