ಉಡುಪಿ : ವ್ಯಕ್ತಿಯೊಬ್ಬರು ಉದ್ಯಾವರ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ವೈಯಕ್ತಿಕ ಕಾರಣದಿಂದ ಮನನೊಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಮೃತರನ್ನು ನಗರದ ಕೋರ್ಟ್ ಬಳಿಯ ನಿವಾಸಿ ರವೀಂದ್ರ ಭಟ್(೫೫) ಎಂದು ಗುರುತಿಸಲಾಗಿದೆ.
ಇವರು ಬುಧವಾರ ಬೆಳಗಿನ ಜಾವ ೪ ಗಂಟೆ ಸುಮಾರಿಗೆ ಪಾರ್ಸೆಲ್ ತೆಗೆದುಕೊಂಡು ಬರುವುದಾಗಿ ಹೇಳಿ ಹೊರಗೆ ಹೋದವರು ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದರು. ಅಲ್ಲಿಂದ ತನ್ನ ಸ್ಕೂಟರ್ನಲ್ಲಿ ಉದ್ಯಾವರ ಸೇತುವೆ ಬಳಿ ತೆರಳಿದ ಅವರು, ಸೇತುವೆಯಲ್ಲಿ ಸ್ಕೂಟರ್ ನಿಲ್ಲಿಸಿ, ಮೇಲಿಂದ ಹೊಳೆಗೆ ಹಾರಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು, ದೋಣಿ ಮೂಲಕ ಹುಡುಕಾಟ ನಡೆಸಿದರು. ಸಂಜೆ ವೇಳೆ ಅವರ ಮೃತದೇಹವು ಅಂಕುದ್ರು ಬಳಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.