ಬಿಲ್ಡಿಂಗ್ ಕೆಲಸದ ಸಾಮಾಗ್ರಿ ಕಳವು ಪ್ರಕರಣ ; ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು – ಕಹಳೆ ನ್ಯೂಸ್
ಬಿಲ್ಡಿಂಗ್ ಕೆಲಸದ ಸಾಮಾಗ್ರಿಗಳು ಕಳವು ಆಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮ್ಮಾರ್ ಮನೆಯ ಹಮ್ಮಬ್ಬ ಮರ್ಜೂಕ್ ಎಂಬವರು ಸಿವಿಲ್ ಇಂಜಿನಿಯರ್ ಮಾಡಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು. ಸೈಟ್ ನ ಬಿಲ್ಡಿಂಗ್ ಕೆಲಸಕ್ಕೆ ಬೇಕಾದ ಸಾಮಾಗ್ರಿಗಳಾದ ಕಬ್ಬಿಣದ ಶೀಟು, ಜಾಕ್, ಸ್ಕಪೋಲ್ಡಿಂಗ್ ಇತ್ಯಾದಿಗಳನ್ನು ಮನೆಯ ಪಕ್ಕದಲ್ಲಿರುವ ಶೆಡ್ ನಲ್ಲಿ ಇಡುತ್ತಿದ್ದರು.
ಆದ್ರೆ ನ.24 ರಂದು ಸಂಜೆ ಬೆಂಗಳೂರಿಗೆ ಹೋಗಿ ಮರುದಿನ ಬೆಳಿಗ್ಗೆ ಮನೆಗೆ ಬಂದು, ಬಳಿಕ ನ.29ರಂದು ಶೆಡ್ ಗೆ ತೆರಳಿ ನೋಡಿದಾಗ ಅಲ್ಲಿದ್ದ ವಸ್ತುಗಳು ಕಳವಾಗಿತ್ತು.
ಈ ಬಗ್ಗೆ ವಿಚಾರಿಸಿದಾಗ ಆರೋಪಿ ಶರೂಪ್ ಆಲಂನು ಶೆಡ್ ನಲ್ಲಿದ್ದ ಒಟ್ಟು ರೂ 9,23,200 ಮೌಲ್ಯದ ಬಿಲ್ಡಿಂಗ್ ಕೆಲಸಕ್ಕೆ ಬೇಕಾದ ಸಾಮಾಗ್ರಿಗಳಾದ ಕಬ್ಬಿಣದ ಶೀಟು, ಜಾಕ್ ,ಸ್ಕಪೋಲ್ಡಿಂಗ್ ಇತ್ಯಾದಿಗಳನ್ನು ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 123/2023 ಕಲಂ : 379, ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.