Recent Posts

Sunday, January 19, 2025
ಸುದ್ದಿ

ಬೆಂಗಳೂರಿನಲ್ಲಿ ದೇವಸ್ಥಾನ-ಸಂಸ್ಕೃತಿಯ ರಕ್ಷಣೆಗಾಗಿ ‘ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು’ ; ದೇವಸ್ಥಾನಗಳ ಸರಕಾರೀಕರಣ, ದೇವಸ್ಥಾನಗಳ ಮೇಲಿನ ಆಘಾತ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ !

ಬೆಂಗಳೂರು – ದೇವಸ್ಥಾನಗಳು ಹಿಂದೂ ರ‍್ಮದ ಆಧಾರಸ್ತಂಭವಾಗಿವೆ. ಅವುಗಳಿಂದ ದೊರಕುವ ದೈವಿ ಚೈತನ್ಯದಿಂದಾಗಿ ಆಧುನಿಕ ಕಾಲದಲ್ಲಿಯೂ ಸಮಾಜವು ದೇವಸ್ಥಾನಗಳ ಕಡೆಗೆ ಆರ‍್ಷಿತವಾಗುತ್ತಿದೆ. ಆದುದರಿಂದ ದೇವಸ್ಥಾನಗಳಲ್ಲಿನ ಪಾವಿತ್ರ‍್ಯತೆಯನ್ನು ರಕ್ಷಿಸುವುದು ಹಿಂದೂ ಸಮಾಜದ ಜವಾಬ್ದಾರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಮುಕ್ತಗೊಳಿಸುವುದು, ದೇವಸ್ಥಾನಗಳಲ್ಲಿನ ದೇವತಾತತ್ತ್ವವನ್ನು ಕಾಪಾಡಲು ದೇವಸ್ಥಾನಗಳಲ್ಲಿ ಶಾಸ್ತ್ರಬದ್ಧವಾಗಿ ಪೂಜೆ-ರ‍್ಚನೆ ಮಾಡುವುದು, ಪ್ರಾಚೀನ ದೇವಸ್ಥಾನ-ಸಂಸ್ಕೃತಿಯನ್ನು ಸಂರಕ್ಷಣೆ ದೇವಸ್ಥಾನಗಳ ಸಮಸ್ಯೆಗಳನ್ನು ಪರಿಹರಿಸುವುದು, ದೇವಸ್ಥಾನಗಳಲ್ಲಿ ಬರುವ ಭಕ್ತರಿಗಾಗಿ ಮೂಲ ಸೌರ‍್ಯಗಳನ್ನು ಒದಗಿಸುವುದು, ಹಾಗೆಯೇ ದೇವಸ್ಥಾನಗಳ ಸಂಪ್ರದಾಯಗಳ ರಕ್ಷಣೆ ಮಾಡುವುದು ಇವುಗಳಿಗಾಗಿ ದೇವಸ್ಥಾನಗಳ ವಿಶ್ವಸ್ಥರು, ಪುಜಾರಿಗಳು, ಭಕ್ತರು ಮುಂತಾದವರನ್ನು ಸಂಘಟಿಸುವುದು ಆವಶ್ಯಕವಾಗಿದೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಮತ್ತು ರ‍್ನಾಟಕ ದೇವಸ್ಥಾನ-ಮಠ ಮತ್ತು ಧರ‍್ಮಿಕ ಸಂಸ್ಥೆಗಳ ಮಹಾಸಂಘದ ಜಂಟಿ ಆಶ್ರಯದಲ್ಲಿ 16 ಮತ್ತು 17 ಡಿಸೆಂಬರ್ 2023 ರಂದು ಬೆಂಗಳೂರಿನ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್ಶನ್ ಹಾಲ್‌ನಲ್ಲಿ ‘ರಾಜ್ಯ ಮಟ್ಟದ ದೇವಸ್ಥಾನ ಅಧಿವೇಶನವನ್ನು’ ಆಯೋಜಿಸಲಾಗಿದೆ. ಈ ಅಧಿವೇಶನದಲ್ಲಿ ಅಖಿಲ ರ‍್ನಾಟಕದಿಂದ 1000 ಕ್ಕಿಂತ ಹೆಚ್ಚು ಆಮಂತ್ರಿತ ದೇವಸ್ಥಾನಗಳ ವಿಶ್ವಸ್ಥರು, ರ‍್ಚಕರು, ಪುರೋಹಿತರು, ಪ್ರತಿನಿಧಿಗಳು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು, ಧರ‍್ಮಿಕ ಚಿಂತಕರು, ಮುಂತಾದವರು ಪಾಲ್ಗೊಳ್ಳಲಿದ್ದಾರೆ, ಎಂದು ‘ರ‍್ನಾಟಕ ದೇವಸ್ಥಾನಗಳ ಮಹಾಸಂಘ’ದ ಸಮನ್ವಯಕರಾದ ಶ್ರೀ. ಮೋಹನ ಗೌಡ ಇವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಮಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಯ್ಯಪ್ಪ ಸೇವಾ ಸಮಾಜಮ್ ನ ಅಧ್ಯಕ್ಷ ಎನ್ ಜಯರಾಮ, ಅಖಿಲ ಭಾರತ ಅಸಂಘಟಿತ ಪುರೋಹಿತ ಕರ‍್ಮಿಕ ಪರಿಷತ್‌ನ ರಾಷ್ಟ್ರೀಯ ಕರ‍್ಯರ‍್ಶಿಗಳಾದ ಡಾ. ಬಿ.ಎನ್. ಮಹೇಶ್ ಕುಮಾರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ರ‍್ಮಪ್ರೇಮಿಗಳಾದ ಶ್ರೀ. ಕಿಶೋರ್ ಕುಮಾರ ಉಪಸ್ಥಿತರಿದ್ದರು.

ಶ್ರೀ. ಮೋಹನ ಗೌಡ ಇವರು ಮುಂದೆ ಮಾತನಾಡಿ, ಮಹಾರಾಷ್ಟ್ರದ ಜಳಗಾಂವನಲ್ಲಿ ಕಳೆದ ಫೆಬ್ರವರಿಯಲ್ಲಿ ಮೊದಲ ‘ಮಹಾರಾಷ್ಟ್ರ ದೇವಸ್ಥಾನ ಅಧಿವೇಶನದಲ್ಲಿ ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಸ್ಥಾಪನೆಯನ್ನು ಮಾಡಲಾಗಿತ್ತು. ಅನಂತರ ಮಹಾಸಂಘದ ಕರ‍್ಯವು ಕ್ರಮೇಣ ಹೆಚ್ಚಾಗಿದ್ದು ಕೇವಲ ೪ ತಿಂಗಳುಗಳಲ್ಲಿ ಮಹಾಸಂಘದ ಕರ‍್ಯವು ಗೋವಾ ಮತ್ತು ರ‍್ನಾಟಕಕ್ಕೂ ವ್ಯಾಪಿಸಿದೆ. ಮಹಾರಾಷ್ಟ್ರ ಮಂದಿರ ಮಹಾಸಂಘದ ಮಾಧ್ಯಮದಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಕೇವಲ 6 ತಿಂಗಳುಗಳಲ್ಲಿ 262 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ(ಡ್ರೆಸ್ ಕೊಡ್) ಜಾರಿಗೆ ತರಲಾಯಿತು ಮತ್ತು ದಿನದಿಂದ ದಿನಕ್ಕೆ ಅದರಲ್ಲಿ ಹೆಚ್ಚಳವಾಗುತ್ತಿದೆ. ಈ ಅಧಿವೇಶನದಿಂದಾಗಿ ದೇವಸ್ಥಾನಗಳ ವಿಶ್ವಸ್ಥರ ಭೇಟಿ ಆರಂಭವಾಗಿದ್ದು ರಾಜ್ಯದ ಅನೇಕ ಕಡೆಗಳಿಂದ 1000 ಕ್ಕಿಂತ ಹೆಚ್ಚು ವಿಶ್ವಸ್ಥರು ಉಪಸ್ಥಿತಲಿರಲಿದ್ದಾರೆ.

ಈ ಅಧಿವೇಶನಕ್ಕೆ ರಮಾನುಜ ಮಹಾಸಂಸ್ಥಾನದ ಪ. ಪೂ. ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಮಾನುಜ ಜೀಯರ ಸ್ವಾಮೀಜಿಗಳು, ಅಖಿಲ ರ‍್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ. ಅಶೋಕ್ ಹಾರನಳ್ಳಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೂಜ್ಯ ಸೌಮ್ಯನಾಥ ಸ್ವಾಮೀಜಿಗಳು, ರ‍್ಯವೈಶ್ಯ ಮಹಾಸಭಾದ ಅಧ್ಯಕ್ಷರಾದ ಶ್ರೀ.ಆರ್.ಪಿ ರವಿಶಂಕರ, ಡಾ.ಮರ‍್ಷಿ ಆನಂದ ಗುರೂಜೀ ಸೇರಿದಂತೆ ಸಾವಿರಾರು ದೇವಸ್ಥಾನಗಳ ವಿಶ್ವಸ್ಥರು, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ದೇವಸ್ಥಾನ ಅಧಿವೇಶನದಲ್ಲಿ ಗಣ್ಯರ ಮರ‍್ಗರ‍್ಶನ, ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಆಯ್ದ ವಿವಿಧ ವಿಷಯಗಳ ರ‍್ಚಾಕೂಟಗಳು ನಡೆಯಲಿವೆ. ಇದರಲ್ಲಿ ‘ದೇವಸ್ಥಾನಗಳನ್ನು ಸನಾತನ ರ‍್ಮಪ್ರಸಾರ ಕೇಂದ್ರಗಳನ್ನಾಗಿಸುವುದು’, ‘ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಮಾಡುವುದು’ ಅನಧಿಕೃತ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ಅನ್ಯಮತಿಯರಿಂದ ದೇವಸ್ಥಾನಗಳ ಭೂಮಿಯ ಅತಿಕ್ರಮಣ ಮತ್ತು ಸರಕಾರವು ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದರ ವಿರುಧ್ಧ ಪರಿಹಾರೋಪಾಯ, ದೇವಸ್ಥಾನ ಮತ್ತು ತರ‍್ಥಕ್ಷೇತ್ರಗಳ ಪರಿಸರದಲ್ಲಿ ಸರಾಯಿ-ಮಾಂಸ ಇವುಗಳ ನಿಷೇಧ; ದರ‍್ಲಕ್ಷಿತ ದೇವಸ್ಥಾನಗಳ ಜರ‍್ಣೋದ್ಧಾರ ಮುಂತಾದ ವಿಷಯಗಳ ಮೇಲೆ ರ‍್ಚೆ ನಡೆಯಲಿದೆ. ಈ ಅಧಿವೇಶನವು ಕೇವಲ ಆಮಂತ್ರಿತರಿಗೆ ಮಾತ್ರ ಇದ್ದು ಅಧಿವೇಶನದಲ್ಲ್ಲಿ ಪಾಲ್ಗೊಳ್ಳಲು 7204082609 ಈ ಮೊಬೈಲ್ ನಂ.ಗೆ ಸಂರ‍್ಕಿಸಬೇಕು ಎಂದು ಮಂದಿರ ಮಹಾಸಂಘವು ಕರೆಯನ್ನು ನೀಡಿದೆ”, ಎಂದು ಹೇಳಿದರು.

(ಎಡದಿಂದ) ರಾಮಾನುಜ ಮಠ ಪೀಠ, ದಾಸನಪುರದ ಉಪಾಧ್ಯಕ್ಷರಾದ ಶ್ರೀ. ಜಯರಾಮ್ ಎಸ್, ಅಯ್ಯಪ್ಪ ಸೇವಾ ಸಮಾಜಮ್ ನ ಅಧ್ಯಕ್ಷ ಎನ್ ಜಯರಾಮ, ‘ರ‍್ನಾಟಕ ದೇವಸ್ಥಾನ-ಮಠ ಮತ್ತು ಧರ‍್ಮಿಕ ಸಂಸ್ಥೆಗಳ ಮಹಾಸಂಘ’ದ ಸಮನ್ವಯಕರಾದ ಶ್ರೀ. ಮೋಹನ ಗೌಡ, ಅಖಿಲ ಭಾರತ ಅಸಂಘಟಿತ ಪುರೋಹಿತ ಕರ‍್ಮಿಕ ಪರಿಷತ್‌ನ ರಾಷ್ಟ್ರೀಯ ಕರ‍್ಯರ‍್ಶಿಗಳಾದ ಡಾ. ಬಿ.ಎನ್. ಮಹೇಶ್ ಕುಮಾರ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಮತ್ತು ಶ್ರೀ. ಕಿಶೋರ್ ಕುಮಾರ

ತಮ್ಮ ಸವಿನಯ,
ಶ್ರೀ. ಮೋಹನ ಗೌಡ, ಸಮನ್ವಯಕರು,
ರ‍್ನಾಟಕ ದೇವಸ್ಥಾನ-ಮಠ ಮತ್ತು ಧರ‍್ಮಿಕ ಸಂಸ್ಥೆಗಳ ಮಹಾಸಂಘ (ಸಂರ‍್ಕ : 7204082609)