Recent Posts

Monday, January 20, 2025
ಸುದ್ದಿ

ಸೌದಿ ಅರೇಬಿಯದಲ್ಲಿ 17 ನೇ ವಿಶ್ವ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನದ ಪೂರ್ವ ಭಾವಿ ಸಭೆ.

ಸೌದಿ ಅರೇಬಿಯದಲ್ಲಿ ಪ್ರಪಥಮ ಭಾರಿಗೆ ಅದ್ಧೂರಿ ಯಾಗಿ 17 ನೇ ವಿಶ್ವ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ನಡೆಸುವ ಕುರಿತು ಪೂರ್ವ ಬಾವಿ ಸಭೆಯು ಜುಬೈಲ್ ನ ಕ್ಲಾಸಿಕ್ ರೆಸ್ಟಾರೆಂಟ್ ನಲ್ಲಿ ನಡೆಯಿತು.


ಈ ಸಭೆಯಲ್ಲಿ ಸಮ್ಮೇಳನವನ್ನು ಜನವರಿ ತಿಂಗಳ 18- 19 ರಂದು ನಡೆಸುವುದಾಗಿ ತೀರ್ಮಾನ ಕೈಗೊಳ್ಳಲಾಯಿತು. ಹಾಗು ಪದಾಧಿಕಾರಿಗಳ ಮತ್ತು ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಿವಾಸಿ ಕನ್ನಡಿಗರು ಹಾಗೂ ಹೃದಯ ವಾಹಿನಿ ಸಂಸ್ಥೆಯು ಪ್ರಸ್ತುತ ಪಡಿಸುವ ಈ ಬಾರಿ ಯ 17ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು – ನುಡಿ , ಇತಿಹಾಸ , ಕಲೆ, ಸಂಸ್ಕೃತಿಯಾ ಭವ್ಯ ಅನಾವರಣಗೊಳಿಸುವ ಹಾಗೂ ಕನ್ನಡ ಕಂಪನ್ನೂ ವಿದೇಶದ ನೆಲದಲ್ಲಿ ಪಸರಿಸುವ ಉತ್ತಮ ಕಾರ್ಯವನ್ನು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾಗತ ಸಮಿತಿಯಲ್ಲಿ ಜನಾಬ್ ಝಕರಿಯ ಬಜ್ಪೆ ಹಾಗೂ ಜನಾಬ್ ಶೇಕ್ ಕರ್ನಿರೆ ಗೌರವ ಅಧ್ಯಕ್ಷರಾಗಿದ್ದು ಅವರ ಗೌರವ ಉಪಸ್ಥಿಯಲ್ಲಿ ಸತೀಶ್ ಕುಮಾರ್ ಬಜಾಲ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರು ಆಗಿ ಇಬ್ರಾಹಿಂ ಹುಸೈನ್ ಪಡುಬಿದ್ರಿ, ಮತ್ತು ಸಂತೋಷ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಸೂರಿಂಜೆ, ಕಾರ್ಯದರ್ಶಿಯಾಗಿ ಪ್ರವೀಣ್ ಪೀಟರ್ ಅರನ್ಹ ಹಾಗೂ ಫಿರೋಜ್ ಕಲ್ಲಡ್ಕ, ಜಂಟಿ ಕಾರ್ಯದರ್ಶಿಯಗಿ ಮೊಹಮ್ಮದ್ ಕೃಷ್ಣಾಪುರ, ಮೊಹಮ್ಮದ್ ಮಲೆಬೆಟ್ಟು, ಗೋಪಾಲ ಶೆಟ್ಟಿ.
ಕೋಶಾಧಿಕಾರಿಯಾಗಿ ಮೊಹಮ್ಮದ್ ಅಲಿ ಉಪ್ಪಿನಂಗಡಿ ಹಾಗೂ ಜಂಟಿ ಕೋಶಾಧಿಕರಿಯಾಗಿ ನಿತಿನ್ ರಾವ್ ಪಡುಬಿದ್ರಿ, ದಾವೂದ್ ರಿಯಾದ್.

ಮೊಹಮ್ಮದ್ ನೋಮನ್ ಮುಖ್ಯ coordinator ಆಗಿ ಹಾಗೂ ಮೊಹಮ್ಮದ್ ಫಯಾಜ್, ಮೊಹಮ್ಮದ್ ಆಯಾಜ್, ಇಸ್ಮಾಯಿಲ್ ಕಾಟಿಪಳ್ಳ , ಯಶಸ್ ಚಂದ್ರಶೇಕರ, ಅಶ್ರಫ್ ನೌಶಾದ್ ಪೊಳ್ಯ , ಪ್ರಸನ್ನ ಭಟ್ Coordinator ಗಳಾಗಿ,

ರಾಜಕುಮಾರ ಬಹ್ರೈನ್ , ಶಾಹುಲ್ ಹಮೀದ್, ಸ್ಟ್ಯಾನಿ ಮಥಾಯಸ್, ನರೇಂದ್ರ ಶೆಟ್ಟಿ, ಅಬ್ದುಲ್ ಹಮೀದ್, ಸೈಯದ್ ಬಾವ ಬಜ್ಪೆ ಸಲಹೆಗಾರಾಗಿ ನೇಮಕ ಗೊಂಡರು.

ಸೌದಿ ಅರೇಬಿಯದಲ್ಲಿ ಈ ಒಂದು ಸಮ್ಮೇಳನವನ್ನು ಎಲ್ಲಾ ಕನ್ನಡ ಅಭಿಮಾನಿಗಳು ಎಲ್ಲಾ ಸಂಘ ಸಂಸ್ಥೆಗಳು ಸೇರಿ ಅವಿಸ್ಮರಣೀಯ ವಾಗಿಸಲು ಎಲ್ಲ ರೀತಿಯ ನೆರವು , ಸಹಕಾರ ನೀಡಬೇಕೆಂದು ಸಭಾದಕ್ಷತೆಯನ್ನು ವಹಿಸಿದ ಜನಾಬ್ ಝಕಾರಿಯ ಬಜ್ಪೆ ಹಾಗೂ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಅವರು ವಿನಂತಿಸುತ್ತ ಕಾರ್ಯಕ್ರಮದ ಸಂಪೂರ್ಣ ವಿವರಣೆಯನ್ನು ಸಭೆಗೆ ನೀಡಿದರು.

ಇಕ್ಬಾಲ್ ಮಲ್ಲೂರು ಕಾರ್ಯಕ್ರಮದ ಮೊದಲಿಗೆ ಸ್ವಾಗತಿಸಿ ಕೊನೆಯಲ್ಲಿ ಪ್ರಧಾನಕಾರ್ಯದಶಿ ರಫೀಕ್ ಸೂರಿಂಜೆ ವಂದಿಸಿದರು.