Sunday, January 19, 2025
ಸುದ್ದಿ

ಬೆಳಾಲು : ಗ್ರಾಮ ಪಂಚಾಯತ್‌ನ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಳಾಲು : ಬೆಳಾಲು ಗ್ರಾಮ ಪಂಚಾಯತ್‌ನ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಡಿ.15 ರಂದು ನೆರವೇರಿತು.


ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಶ್ರೀಸೌಧ ಬೆಳಾಲು ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗೀತಾ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶ್ರೀ ಸುರೇಂದ್ರ ಗೌಡ, ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಶ್ರೀ ಸತೀಶ್ ಗೌಡ ಎಳ್ಳುಗದ್ದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಕ್ಷ್ಮೀಭಾಯಿ, ವೈದ್ಯರಾದ ಡಾ|ಚೇತನ್ , ಬೆಳಾಲು ಸಿ.ಎ ಬ್ಯಾಂಕ್ ಕಾರ್ಯನಿರ್ವಣಾಧಿಕಾರಿ ಶ್ರೀ ನಾರಾಯಣ ಗೌಡ ಎಳ್ಳುಗದ್ದೆ,ಬೆಳಾಲು ಸಿ. ಎ ಬ್ಯಾಂಕ್ ನಿರ್ದೇಶಕರಾದ ಶ್ರೀ ರಮೇಶ್ ಗೌಡ ಅಂಗಡಿಬೆಟ್ಟು,ನೋಟರಿ ವಕೀಲರಾದ ಶ್ರೀನಿವಾಸ್ ಗೌಡ,ಉದ್ಯಮಿ ಸಿಲ್ವೆಸ್ಟರ್ ಮೋನಿಶ್, ಪ್ರಮುಖರಾದ ಸೀತಾರಾಮ್ ಬಿ.ಯಸ್ , ಯಶವಂತ ಗೌಡ ಬನಂದೂರು,ಜಯಾನAದ ಗೌಡ ಎರ್ದೋಟ್ಟು, ರಾಜೇಶ್ ಗೌಡ ಪಾರ್ಲ,ಬೆಳಾಲು ಹಾ.ಉ.ಸ. ಸಂಘದ ಉಪಾಧ್ಯಕ್ಷರಾದ ಜಿನೇಶ್ ಜೈನ್ ನಿರ್ದೇಶಕರಾದ ಪ್ರಭಾಕರ ಗೌಡ, ಪಂಚಾಯತ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು