Saturday, November 23, 2024
ಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದಿಂದ ಘಂಟೆ, ಪೂಜಾ ಸಾಮಾಗ್ರಿ ಸಮರ್ಪಣೆ – ಕಹಳೆ ನ್ಯೂಸ್

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದ್ದು, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ ಪೂಜೆ ಪುನಸ್ಕಾರ ಆಯೋಜನೆಗೊಂಡಿದೆ. ಇದರ ಭಾಗವಾಗಿ ಬೆಂಗಳೂರಿನ (Bengaluru) ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಿದ್ದಾರೆ.

2.5 ಟನ್ ತೂಕದ ಘಂಟೆಗಳು, 30 ಸಣ್ಣ ಗಂಟೆಗಳು, 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಸಮರ್ಪಣೆ ಮಾಡಲಾಗಿದೆ. ಈ ಘಂಟಾದಾನ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾಗಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಂಟಾದಾನ ಮತ್ತು ಪೂಜಾ ಸಾಮಾಗ್ರಿಯನ್ನು ಇಂದು ಅಯೋಧ್ಯೆಗೆ ಕೊಂಡೊಯ್ಯಲಿದ್ದಾರೆ. ತಮಿಳುನಾಡಿನ ನಾಮಕ್ಕಲ್‌ನಲ್ಲಿ ಈ ಘಂಟೆಗಳನ್ನು ತಯಾರು ಮಾಡಲಾಗಿದ್ದು, 2.5 ಟನ್ ತೂಕದ ಘಂಟೆಗಳನ್ನು ದೇವಸ್ಥಾನದ ಒಳಗಡೆ ಬಳಸಲಾಗುತ್ತದೆ. ಈ ಘಂಟೆಗಳನ್ನು ಬನಶಂಕರಿಯ ರಾಜೇಂದ್ರ ನಾಯ್ಡು ಎಂಬುವವರು ಅಯೋಧ್ಯೆಯ ರಾಮಮಂದಿರಕ್ಕೆ ಸಮರ್ಪಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು