Recent Posts

Sunday, January 19, 2025
ಸುದ್ದಿ

ಆನ್ ಲೈನ್ ವ್ಯಾಪಾರ ಏಜೆ೦ಟರೆಂದು ಹಣ ಪಡೆದು ವಂಚನೆ: ಇಬ್ಬರ ಬಂಧನ – ಕಹಳೆ ನ್ಯೂಸ್

ಕಾಸರಗೋಡು: ಆನ್ ಲೈನ್ ವ್ಯಾಪಾರದ ಏಜೆ೦ಟರೆಂದು ಹಲವರಿಂದ ಹಣ ಪಡೆದು ವಂಚನೆ ನಡೆಸಿದ ಇಬ್ಬರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೋಝಿಕ್ಕೋಡುನ ಫಾರಿಸ್(21) ಮತ್ತು ಪಿ.ವಿ ಆದರ್ಶ್ (21) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆನ್ ಲೈನ್ ಮೂಲಕ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಮಾರಾಟ ಮಾಡುವ ಏಜೆ೦ಟರ ಸೋಗಿನಲ್ಲಿ ಬಂದ ಇವರು ಹಲವಾರು ಮಂದಿಯಿಂದ ಲಕ್ಷಾಂತರ ರೂಪಾಯಿವನ್ನು ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಸರಗೋಡು ಅಲ್ಲದೆ ಮಂಗಳೂರು, ಕಾಞ೦ಗಾಡ್, ತಿರೂರು, ಆಲಪ್ಪುಝ, ಎರ್ನಾಕುಲಂ ಮೊದಲಾದಡೆಗಳಿಂದ ಹಲವು ಮಂದಿಯಿಂದ ಇವರು ಹಣ ಪಡೆದು ವಂಚನೆ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕೆಲವರಿಂದ ನಾಲ್ಕು ಲಕ್ಷ ರೂಪಾಯಿಗಳಷ್ಟು ಪಡೆದಿರುವುದು ಕಂಡುಬಂದಿದೆ. ಕಾಸರಗೋಡು ಚಕ್ಕರ ಬಜಾರ್ ನ ವ್ಯಾಪಾರಿ ಶಿಹಾಬ್ ಎಂಬವರಿಂದ ಸುಮಾರು 28 ಸಾವಿರ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಸೈಬರ್ ಸೆಲ್ ನ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದರು.