Recent Posts

Sunday, January 19, 2025
ಸಿನಿಮಾಸುದ್ದಿ

ವಿಚ್ಛೇದನದ ಸುದ್ದಿಯ ನಡುವೆ ಒಟ್ಟಿಗೆ ಕಾಣಿಸಿಕೊಂಡ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ; ರೂಮರ್​​​​​ಗೆ​​ ಪೂರ್ಣವಿರಾಮ ಹಾಕಲು ಇಷ್ಟು ಸಾಕಲ್ಲವೇ.! – ಕಹಳೆ ನ್ಯೂಸ್

ಮುಂಬೈ: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಆಗಾಗ್ಗೆ ರೂಮರ್ಸ್ ಹರಿದಾಡುತ್ತಿರುತ್ತವೆ. ಇತ್ತೀಚಿಗೆ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿದೆ. ಐಶ್ವರ್ಯಾ ಅಭಿಷೇಕ್‌ನಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ವರದಿಗಳ ನಡುವೆ ಅಭಿ-ಐಶು ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ಹೊರಬಿದ್ದಿದೆ, ಇಂತಹ ವಿಷಯಗಳಿಗೆ ಪೂರ್ಣವಿರಾಮ ಹಾಕಲು ಇಷ್ಟು ಸಾಕು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ, ಐಶ್ವರ್ಯಾ ತಾಯಿಯ ಮನೆಯಲ್ಲಿ ತನ್ನ ಮಗಳು ಆರಾಧ್ಯ ಮತ್ತು ತಾಯಿ ವೃಂದಾ ಜೊತೆ ವಾಸಿಸುತ್ತಿದ್ದಾರೆ. ಆಕೆ ತನ್ನ ಅತ್ತೆ ಜಯಾ ಬಚ್ಚನ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಮತ್ತು ಕುಟುಂಬದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಅಂತೆಕಂತೆಗಳ ಸುದ್ದಿಗಳ ಬೆನ್ನಲ್ಲೇ ಅಭಿಷೇಕ್-ಐಶ್ವರ್ಯ ವಿಚ್ಛೇದನದ ಸುದ್ದಿಯೂ ಹೊರಬಿದ್ದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ವದಂತಿಗಳ ನಡುವೆ ಅಭಿಷೇಕ್ ಅವರ ಅತ್ತೆ ವೃಂದಾ ಅವರ ಕೈ ಹಿಡಿದು ಬರುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ಶುಕ್ರವಾರ, ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಾರ್ಷಿಕ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಆರಾಧ್ಯ ಬಚ್ಚನ್ ಕೂಡ ಭಾಗವಹಿಸಿದ್ದಳು. ಅಭಿಷೇಕ್ ಮತ್ತು ಐಶ್ವರ್ಯ ತಮ್ಮ ಮಗಳಿಗೆ ಸಪೋರ್ಟ್ ಮಾಡಲು ಬಂದಿದ್ದರು. ಪತಿ-ಪತ್ನಿ ಮಾತ್ರವಲ್ಲ, ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ತಾಯಿ ವೃಂದಾ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈವೆಂಟ್ ನಂತರ, ಒಂದು ವಿಡಿಯೋ ಕಾಣಿಸಿಕೊಂಡಿತು, ಅದರಲ್ಲಿ ಅಭಿಷೇಕ್ ಅವರನ್ನು ಐಶ್ವರ್ಯಾ ಜೊತೆ ನೋಡಬಹುದು. ಅವನು ತನ್ನ ಅತ್ತೆಯನ್ನು ಕಾರಿನ ಹತ್ತಿರ ಬಿಡಲು ತನ್ನ ಹೆಂಡತಿಯೊಂದಿಗೆ ಹೋಗುವುದನ್ನು ಕಾಣಬಹುದು. ಅಷ್ಟೇ ಅಲ್ಲ, ಅತ್ತೆಗೆ ಬಾಯ್​​​​ ಹೇಳಿ ಐಶ್ವರ್ಯ ಮತ್ತು ಅಭಿಷೇಕ್ ಆರಾಧ್ಯ ಜೊತೆ ಒಂದೇ ಕಾರಿನಲ್ಲಿ ಮನೆಗೆ ಹೊರಟರು. ಈ ವಿಡಿಯೋಗೆ ಅಭಿಮಾನಿಗಳು ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ಬಾಂಧವ್ಯ ಎಷ್ಟು ಗಮನ ಸೆಳೆದಿದೆಯೋ, ಆರಾಧ್ಯ ಅವರ ಒಂದು ಲುಕ್​​​ ಕೂಡ ಗಮನ ಸೆಳೆಯಿತು. ಅವರು ಜೊತೆಗಿರುವ ಬಗ್ಗೆ ಅನೇಕ ಅಭಿಮಾನಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ‘ನೈಸ್’, ‘ಸುಂದರ ಜೋಡಿ’ ಎಂದು ಶುಭ ಹಾರೈಸಿದ್ದಾರೆ.