9.23ಲಕ್ಷ ರೂ. ಮೌಲ್ಯದ ಕಟ್ಟಡ ನಿರ್ಮಾಣದ ಸಾಮಗ್ರಿ ಕದ್ದ ಪ್ರಕರಣ : ಆರೋಪಿಯನ್ನು ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು – ಕಹಳೆ ನ್ಯೂಸ್
ಬಂಟ್ವಾಳ: 9.23 ಲಕ್ಷ ರೂ. ಮೌಲ್ಯದ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಕದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನ ಹೋಜೈ ತಾಲೂಕಿನ ನಜಿಮುದ್ದೀನ್ ಅವರ ಮಗ ಮೊಹಮ್ಮದ್ ಶರೂಫ್ ಆಲಂ ಬಂಧಿತ ಆರೋಪಿಯಾಗಿದ್ದಾನೆ.
ಪುದು ಗ್ರಾಮದ ಅಮ್ಮೆಮ್ಮಾರ್ ನಿವಾಸಿ ಸಿವಿಲ್ ಎಂಜಿನಿಯರ್ ಹಮ್ಮಬ್ಬ ಮರ್ಜೂಕ್ ಅವರ ಜತೆ ಕೆಲಸ ಮಾಡುತ್ತಿದ್ದ ಶರೂಪ್ ಆಲಂ ಕಳವು ಪ್ರಕರಣದ ಆರೋಪಿಯಾಗಿದ್ದಾನೆ. ಹಮ್ಮಬ್ಬ ಅವರು ಬಿಲ್ಡಿಂಗ್ ಕೆಲಸಕ್ಕೆ ಉಪಯೋಗಿಸುತ್ತಿದ್ದ ಕಬ್ಬಿಣದ ಶೀಟು, ಜಾಕ್, ಸ್ಕಪೋಲ್ಡಿಂಗ್ ಇತ್ಯಾದಿಗಳನ್ನು ಅವರ ಮನೆಯ ಪಕ್ಕದ ಶೆಡ್‍ನಲ್ಲಿ ಇಡುತ್ತಿದ್ದರು.
ನ. 24ರಂದು ಅವರು ಬೆಂಗಳೂರಿಗೆ ಹೋಗಿ 27ಕ್ಕೆ ಮರಳಿದ್ದರು. ನ. 29ರಂದು ಶೆಡ್‍ಗೆ ಹೋಗಿ ನೋಡಿದಾಗ ಸೊತ್ತುಗಳು ನಾಪತ್ತೆಯಾಗಿದ್ದವು. ವಿಚಾರಿಸಿದಾಗ ಆರೋಪಿ ಶರೂಪ್ ಆಲಂ ಟಾಟಾ ಏಸ್ ವಾಹನದ ಮೂಲಕ ಸೊತ್ತುಗಳನ್ನು ಸಾಗಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಧ್ಯ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿ ಮೊಹಮ್ಮದ್ ಶರೂಫ್ ಆಲಂ ಎಂಬಾತನನ್ನು ಡಿ.14 ರಂದು ಬಂದಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ಹಾಗೂ ಪೆÇಲೀಸ್ ಉಪ ನಿರೀಕ್ಷಕರು ಹರೀಶ್ ಎಂ ಆರ್ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರು ಮೂರ್ತಿ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ ಸುರೇಶ್, ಕೃಷ್ಣ ಪಿಸಿ ಗಳಾದ ಪುನೀತ್, ನಾಗನಾಥ ಅವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ